ಚಿತ್ರದುರ್ಗ
ನಗರದ ಎಸ್.ಜೆ.ಎಂ. ಮಹಿಳಾ ಮಹಾವಿದ್ಯಾಲಯ ವತಿಯಿಂದ ಗುತ್ತಿನಾಡು ಗ್ರಾಮದಲ್ಲಿ ದಿ. 27-3-19ರಿಂದ 2-4-19ರವರೆಗೆ ಆಯೋಜಿಸಿರುವ ರಾಷ್ಟ್ರೀಯ ಯೋಜನೆ ಘಟಕ-1 ಮತ್ತು 2ರ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಹಿರಿಯ ಮುಖಂಡ ಎಸ್.ಕೆ. ಮಲ್ಲಪ್ಪ, ಎಂ.ಎಂ.ಎಫ್.ಜಿ.ಸಿ. ಕಾಲೇಜು ಪ್ರಾಚಾರ್ಯ ಡಿ.ಜಯಣ್ಣ, ಎಸ್.ಜೆ.ಎಂ. ಮಹಿಳಾ ಮಹಾವ್ಯಿದ್ಯಾಲಯದ ಸಿ.ಬಸವರಾಜಪ್ಪ ಮುಂತಾದವರು ಭಾಗವಹಿಸಿದ್ದರು.ನಂತರ ವಿದ್ಯಾರ್ಥಿಗಳು ಗ್ರಾಮದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
