ಮತದಾನ ನಮ್ಮ ಸಂವಿಧಾನ ಬದ್ಧ ಹಕ್ಕು;ಮೇಘನಾ

ಚಿತ್ರದುರ್ಗ:

      ಕಡ್ಡಾಯ, ಶಾಂತಿ, ಸೌಹಾರ್ದಯುತ ಮತದಾನ ಮಾಡುವಂತೆ, ಜನತೆ ಮುಂದೆ ಬರಬೇಕೆಂದು ಗುಡ್ಡದರಂಗವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ||ಮೇಘನಾ ಸಾರ್ವಜನಿಕರಲ್ಲಿ ಮನವಿಮಾಡಿದರು.

         ಮಠದಕುರುಬರಹಟ್ಟಿ ಗ್ರಾಮ ಪಂಚಾಯಿತಿ, ವಿಮುಕ್ತಿ ವಿದ್ಯಾಸಂಸ್ಥೆ, ಶ್ರೀ ಭೂಮಿತಾಯಿ ಸ್ವಸಹಾಯ ಮಹಿಳಾ ಸಂಘಗಳ ಒಕ್ಕೂಟ ಇವರ ವತಿಯಿಂದ ವಿಕಲಚೇತನರ ಮತ್ತು ಹಿರಿಯ ನಾಗರೀಕರಿಗಾಗಿ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ, ತಪಾಸಣೆ ನಡೆಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

       ಚುನಾವಣೆಗೆ ಮತದಾನ ಮಾಡುವುದು ಪವಿತ್ರವಾದ ಕೆಲಸವಾಗಿದ್ದು, ಮತದಾನವನ್ನು ಪ್ರತಿಯೊಬ್ಬರು ಕಡ್ಡಾಯವಾಗಿ, ಶಾಂತಿ, ಸೌಹಾರ್ದಯುತವಾಗಿ ಮಾಡುವ ಮೂಲಕ ಜನರು ತಮ್ಮ ಸಂವಿಧಾನ ಬದ್ಧ ಹಕ್ಕನ್ನು ಚಲಾಯಿಸಲು ಮುಂದೆ ಬರಬೇಕೆಂದು ಮನವಿ ಮಾಡಿದರು.

        ವಯೋವೃದ್ಧರು ಮತ್ತು ವಿಕಲಚೇತನರುಆರೋಗ್ಯವನ್ನುಗಂಭೀರವಾಗಿ ಪರಿಗಣಿಸಿ, ಪ್ರತಿಯೊಬ್ಬರು ತಪಾಸಣೆಗೆ ಒಳಪಟ್ಟರೆ ತಮಗಿರುವಂತಹ ಕಾಯಿಲೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತವಾದ ಚಿಕಿತ್ಸೆತೆಗೆದುಕೊಂಡರೆ ಆರೋಗ್ಯ ಪೂರ್ಣಜೀವನ ನಡೆಸಬಹುದು ಎಂದು ಹೇಳಿದರು. ಮಠದಕುರುಬರಹಟ್ಟಿ ಗ್ರಾಮದಗ್ರಾಮಸ್ಥರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ತಮಗಿರುವ ಆರೋಗ್ಯದ ಬಗೆಗಿನ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಡಾ|| ಮೇಘನಾ ಹೇಳಿದರು.

         ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕ ಆರ್. ವಿಶ್ವಸಾಗರ್ ಮಾತನಾಡಿ, ಭಾರತ ಮಧುಮೇಹ ರೋಗದಲ್ಲಿ ವಿಶ್ವದ ರಾಜಧಾನಿಯಾಗುತ್ತಿದ್ದು, ಪ್ರತಿಯೊಬ್ಬರು ಸಕ್ಕರೆ ಕಾಯಿಲೆಗೆ ಒಳಗಾಗುವ ಮೂಲಕ ತಮ್ಮ ಆರೋಗ್ಯವನ್ನು ತಾವೆ ಹಾನಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

         ಮನುಷ್ಯ ಆರೋಗ್ಯವಾಗಿರಬೇಕಾದರೆ ನಿತ್ಯಯೋಗ, ಧ್ಯಾನ ಮತ್ತುದೈಹಿಕ ಚುಟವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಅತ್ಯುತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುವುದರೊಂದಿಗೆ ಸ್ವಾಸ್ತ್ಯ ಸಮಾಜವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.ಎಂ.ಕೆ.ಹಟ್ಟಿ ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಪಾತಣ್ಣಆರ್. ಮಾತನಾಡಿ ಗ್ರಾಮಪಂಚಾಯಿತಿ ಗ್ರಾಮದ ನೈರ್ಮಲ್ಯ, ಶುದ್ಧ ಕುಡಿಯುವ ನೀರು, ಬೀದಿ ದೀಪದಂತಹ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಜನರಿಗೆ ಸೇವೆಯನ್ನು ನೀಡುತ್ತಿದೆ. ಹಾಗೆಯೇ ಗ್ರಾಮವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಕಸದ ಗಾಡಿಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಗ್ರಾಮಸ್ಥರು ಕಸವನ್ನು ಗಾಡಿಗಳಿಗೆ ಹಾಕುವ ಮೂಲಕ ಸಹಕರಿಸಬೇಕು ಎಂದರು. ಹಾಗೆಯೇ ಲೋಕ ಸಭಾಚುನಾವಣೆಗೆ ಪ್ರತಿಯೊಬ್ಬರು ಶಾಂತಿಯುತ ಮತದಾನ ಮಾಡುವಂತೆ ಮನವಿ ಮಾಡಿದರು.

        ಆರೋಗ ತಪಸಣಾ ಶಿಬಿರ ಮತ್ತು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ವಿಮುಕ್ತಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ ವಿಶ್ವಸಾಗರ್, ಕುಮಾರ್ ಹೆಚ್.,ಗುರುರಾಜು ಎ., ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಶೀಲಮ್ಮ, ಅಲೆಮಾರಿ ಅರೆಅಲೆಮಾರಿ ಬುಡಕಟ್ಟು ಎಸ್‍ಸಿ ಎಸ್‍ಟಿ ಮಹಾಸಭಾದ ಅಧ್ಯಕ್ಷ ನಾಗರಾಜ್, ಲ್ಯಾಬ್‍ಟೆಕ್ನಿಷಿಯನ್‍ಅಬ್ಬೂರ್ ಆಲಿ, ಆರೋಗ್ಯ ಸಹಾಯಕರಾದ ಪ್ರಶಾಂತ್ ಜಿ., ಶಿಲ್ಪಾ, ತಿಪ್ಪಮ್ಮ, ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link