ಹಿರಿಯೂರು :
ಪ್ರತಿಯೊಬ್ಬ ವಿದ್ಯಾರ್ಥಿಯು ಸಭಾಕಂಪನವನ್ನು ಹೋಗಲಾಡಿಸಿಕೊಳ್ಳಲು ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದೆ ಎಂಬುದಾಗಿ ವಾಣಿಸಕ್ಕರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಧರಣೇಂದ್ರಯ್ಯ ಹೇಳಿದರು.
ವಾಣಿಸಕ್ಕರೆ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕಾಲೇಜಿನ ಬಿ.ಎ, ಬಿ.ಕಾಂ, ಬಿ.ಬಿ.ಎಂ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ “ವಿದ್ಯಾರ್ಥಿಗಳಿಂದ 108 ವಿಚಾರಗೋಷ್ಠಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಸಂಪನ್ಮೂಲ ವ್ಯಕ್ತಿಗಳಾಗಿ ರೂಪಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಉತ್ತಮ ವಾಗ್ಮಿಗಳಾಗಲು ವೇದಿಕೆಯನ್ನು ಕಲ್ಪಿಸಿಕೊಡಲಾಗಿದೆ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ಪ್ರತಿನಿತ್ಯ ವೇಳಾಪಟ್ಟಿಯಂತೆ ಅಧ್ಯಾಪಕರು ಪಾಠ ಮಾಡುವ ಬದಲು ವಿದ್ಯಾರ್ಥಿಗಳೆ ಸಮಯಕ್ಕೆ ಸರಿಯಾಗಿ ಉಪನ್ಯಾಸ ಮಾಡಲಿದ್ದು ವಿದ್ಯಾರ್ಥಿಗಳೇ ಪ್ರಾರ್ಥನೆ, ಸ್ವಾಗತ, ವಂದನಾರ್ಪಣೆ ಹಾಗೂ ನಿರೂಪಣೆ ಮಾಡುವುದರಿಂದ ತಮಗೆ ಜವಬ್ದಾರಿ ಬೆಳೆಯುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳೇ ಕಾರ್ಯಕ್ರಮ ಆಯೋಜನೆ ಮಾಡುವುದು, ವಿವಿಧಬಗೆಯ ಕೌಶಲ್ಯಗಳನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಸಾಂಸ್ಕತಿಕ ಸಮಿತಿ ಸಂಚಾಲಕರಾದ ಆರ್.ಪುಷ್ಪಲತಾರವರು ಮಾತನಾಡಿ, ನಾನು ಅನೇಕ ಕಾಲೇಜುಗಳನ್ನು ನೋಡಿದ್ದೆನೆ ಈ ರೀತಿಯ ವಿಚಾರಗೋಷ್ಠಿಗಳು ಎಲ್ಲಿಯು ನೋಡಿಲ್ಲ ಇದು ಒಂದು ವಿಶೇಷ ಪ್ರಯೋಗವಾಗಿದ್ದು ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ದಾರಿದೀಪವಾಗಿದೆ ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯವಿಭಾಗದ ಮುಖ್ಯಸ್ಥರಾದ ಕೆ.ಮಾರವರ್ದನ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಎಸ.ರಾಮಪ್ಪ, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ರಂಗಸ್ವಾಮಿ, ಇತಿಹಾಸ ಪ್ರಾಧ್ಯಾಪಕರಾದ ಡಾ,ಸಿದ್ದಲಿಂಗಯ್ಯ, ಡಾ. ಗಿರೀಶ್‍ನಾಯಕ್, ಎ.ಪಿ.ಜನಾರ್ಧನ, ಸಿ.ಚಿತ್ತಯ್ಯ, ಪಿ.ಶಿವರಾಜ, ಎ.ರಂಗನಾಥ. ಡಿ.ನಯನ, ಮಧುಮಾಲ .ಪಿ ಮಂಜುಶ್ರೀ, ಕಾರುಣ್ಯ .ಟಿ ತಿಪ್ಪೇಶ್, ದಯಾನಂದ .ಜೆ , ಜ್ಞಾನಪೂರ್ಣೆ, ಹರೀಶ್, ಕರಿಬಸಪ್ಪ ಮಣಿವಾಸಗನ್, ನಾಗರಾಜ. ವಿ , ಡಾ.ಪ್ರವೀಣ್‍ಕುಮಾರ್, ರುಕ್ಷ್ಮಿಣಿ ಆರ್.ಎಲ್, ರಂಗಸ್ವಾಮಿ ಎಸ್, ಇನ್ನು ಮುಂತಾದ ಅಧ್ಯಾಪಕರು ಕಾರ್ಯಕ್ರಮದಲ್ಲಿ ಮಾರ್ಗದರ್ಶಕರಾಗಿ ಭಾಗವಹಿಸಿದ್ದರು.