ಬೆಂಗಳೂರು
ಟ್ರಾಕ್ಟರ್‍ನ್ನು ಇಂಜಿನ್ ಮೇಲೆ ಕುಳಿತುಕೊಂಡು ಹೋಗುತ್ತಿದ್ದ ರತ್ನಮ್ಮ (26) ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ದುರ್ಘಟನೆ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಮ್ಮಘಟ್ಟ ಮುಖ್ಯರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಕೊಳ್ಳೆಗಾಲ ಮೂಲದ ಚೆನ್ನಮ್ಮ ಕೂಲಿ ಕೆಲಸ ಮಾಡುತ್ತ ಶೇಷಗಿರಿಹಳ್ಳಿಯಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ಟ್ರಾಕ್ಟರ್‍ನ್ನು ಇಂಜಿನ್ ಮೇಲೆ ಕುಳಿತುಕೊಂಡು ಬೆಳಿಗ್ಗೆ 8.45ರ ವೇಳೆ ಕೆಲಸಕ್ಕೆ ಹೋಗುತ್ತಿದ್ದರು.
ಕೊಮ್ಮಘಟ್ಟ ಮುಖ್ಯರಸ್ತೆಯಲ್ಲಿ ಟ್ರಾಕ್ಟರ್ ಚಾಲಕ ರಸ್ತೆ ಹಂಪ್‍ನ್ನು ವೇಗವಾಗಿ ಎಗರಿಸಿದಾಗ ಆಯತಪ್ಪಿ ಕೆಳಗೆ ಬಿದ್ದ ಚೆನ್ನಮ್ಮ(24) ಅವರ ಮೇಲೆ ಟ್ರಾಕ್ಟರ್ ಚಕ್ರ ಹರಿದಿದೆ.ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ಕೆಂಗೇರಿ ಸಂಚಾರ ಪೊಲೀಸರು ಟ್ರಾಕ್ಟರ್ ವಶಪಡಿಸಿಕೊಂಡು ಚಾಲಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಯುವತಿ ಸಾವು
ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯುವತಿಯೊಬ್ಬರು ಪಲ್ಸರ್ ಬೈಕ್ ಡಿಕ್ಕಿ ಹೊಡೆದು ಯುವತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಸಿಂಗ್‍ಸಂದ್ರದಲ್ಲಿ ನಿನ್ನೆ ರಾತ್ರಿ ನಡೆದಿದೆ.ಅತ್ತಿಬೆಲೆಯ ವಿದ್ಯಾಶ್ರೀ (22)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಸಿಂಗ್‍ಸಂದ್ರದ ಅಮ್ರಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿದ್ಯಾಶ್ರೀ ಸಂಜೆ 5.30ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು .ರಸ್ತೆ ದಾಟುತ್ತಿದ್ದಾಗ ಪಲ್ಸರ್ ಬೈಕ್ ಡಿಕ್ಕಿಹೊಡೆದು ಈ ದುರ್ಘಟನೆ ಸಂಭವಿಸಿದೆ. ಪ್ರಕರಣ ದಾಖಲಿಸಿರುವ ಹುಳಿಮಾವು ಸಂಚಾರ ಪೊಲೀಸರು ಅಪಾಘಾತವೆಸಗಿ ಪರಾರಿಯಾಗಿರುವ ಪಲ್ಸರ್ ಬೈಕ್ ಸವಾರನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ