ಬೆಂಗಳೂರು
ಗಲಾಟೆ ನಿಲ್ಲಿಸಲು ಬಂದ ಸಬ್ಇನ್ಸ್ಪೆಕ್ಟರ್ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಮುಂದಾದ ಇಬ್ಬರು ಸೌದಿ ಅರೇಬಿಯಾ ಮೂಲದ ಇಬ್ಬರು ವಿದ್ಯಾರ್ಥಿಗಳನ್ನು ಆಶೋಕನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್ನ ದಯಾನಂದ ಸಾಗರ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಅಮರ್ ಅಲಿ ಸಲಾಮ್ ಹಾಗೂ ಕಮ್ಮನಹಳ್ಳಿಯ ಭರತ್ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ ಹುಸೇನ್ ಸಲಾಹ್ ಮಹಮ್ಮದ್ ಬಂಧಿತ ಆರೋಪಿಗಳಾಗಿದ್ದಾರೆ.
ಆಶೋಕನಗರದ ರೆಸಿಡೆನ್ಸಿ ರಸ್ತೆಯ ಸ್ಯಾಮ್ಸಂಗ್ ಶೋ ರೂಂ ಬಳಿ ರಸ್ತೆಯಲ್ಲಿ 4 ದಿನಗಳ ಹಿಂದೆ ರಾತ್ರಿ1ರ ವೇಳೆ ಪಾನಮತ್ತರಾಗಿ ಆರೋಪಿಗಳು ಗಲಾಟೆ ಮಾಡುತ್ತಿದ್ದದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಆಶೋಕನಗರ ಎಸ್ಐ ಧನಂಜಯ ಮತ್ತು ಓರ್ವ ಪೇದೆ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಗಲಾಟೆ ಮಾಡುತ್ತಿದ್ದ ಇಬ್ಬರನ್ನು ಸುಮ್ಮನಿರಿಸಲು ಮುಂದಾದಾಗ ಕುಡಿದ ಅಮಲಿನಲ್ಲಿ ಇಬ್ಬರು ಆರೋಪಿಗಳು ಪೊಲೀಸರ ಬಟ್ಟೆ ಹಿಡಿದು ಎಳೆದಾಡಿ ಗಲಾಟೆ ಮಾಡಿ ಪೊಲೀಸರಿಗೆ ಅವ್ಯಾಚ್ಚ ಶಬ್ಧಗಳಿಂದ ನಿಂದಿಸಿದ್ದಾರೆ.
ತಕ್ಷಣ ಪೊಲೀಸರು ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದರೂ ಪೊಲೀಸ್ ಠಾಣೆಯಲ್ಲೂ ಕಿರುಚಾಡಿ ಗಲಾಟೆ ಮಾಡಿದ್ದಾರೆ. ಪೊಲೀಸರು ಇಬ್ಬರು ಸೌದಿ ಯುವಕರ ವಿರುದ್ಧ ದೂರು ದಾಖಲು ಮಾಡಿ, ಕರ್ತವ್ಯಕ್ಕೆ ಅಡ್ಡಿ ಹಾಗೂ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ನಿಂದನೆ ಆರೋಪದಲ್ಲಿ ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








