ಕೊರಟಗೆರೆ
ವಿದ್ಯಾರ್ಥಿಗಳು ತಮ್ಮಜೀವನದಲ್ಲಿ ಸಾಧಿಸುವಛಲ, ಆತ್ಮಸ್ಥೆರ್ಯ ಅಳವಡಿಸಿಕೊಂಡರೆ ಯಶಸ್ಸುಕಟ್ಟಿಟ್ಟ ಬುತ್ತಿ, ಅವರವರ ಬದುಕನ್ನು ನಿಯಮಾನುಸಾರವಾಗಿ ಕಟ್ಟಿಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಂಡಲ್ಲಿ ಮಾತ್ರ ಸಮಾಜದಲ್ಲಿಒಳ್ಳೆಯ ಹೆಸರು ಮತ್ತು ಒಬ್ಬ ಉತ್ತಮ ಮನುಷ್ಯ ನಾಗಲು ಸಾದ್ಯಎಂದು ಪ್ರಾಂಶುಪಾಲ ಡಾ.ಬಾಲಪ್ಪ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವರೆಡ್‍ಕ್ರಾಸ್ ಹಾಗೂ ಸ್ವೌಟ್ ಮತ್ತುಗೈಡ್ ಚಟುವಟಿಕೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮೌಲ್ಯಗಳಿಲ್ಲದ ವಿದ್ಯಾರ್ಥಿಯ ನಡೆ ಭವಿಷ್ಯದಜೀವನಕ್ಕೆ ಮಾರಕ ವಿದ್ಯಾರ್ಥಿಗಳು ಗೊತ್ತುಗುರಿಯಿಲ್ಲದೆತಮ್ಮಅಮೂಲ್ಯ ಸಮಯವನ್ನು ವ್ಯರ್ಥಮಾಡಿಕೊಳ್ಳುದೆ ಸಮಾಜದ ಸುತ್ತಮುತ್ತಲ ಒಳಿತು ಕೆಡುಕುಗಳ ಬಗ್ಗೆ ತಿಳಿಯಬೇಕು, ಸಿನಿಮಾ, ಮೊಬೈಲ್ ಸೇರಿದಂತೆಇನ್ನಿತರ ದುಶ್ಚಟಗಳಿಗೆ ಬಲಿಯಾಗದೆಆರೋಗ್ಯದಂತೆದೇಹ ಬೆಳೆಸುವುದರೊಂದಿಗೆ ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳನ್ನು ಅಳವಸಿಕೊಂಡು ತಮ್ಮ ಮುಂದಿನ ಜೀವನದ ಒಳ್ಳೆಯ ಗುರಿಯನ್ನಿಟ್ಟುಕೊಂಡು ಸಾಧಿಸುವಛಲದೊಂದಿಗೆ ಸಮಾಜಕ್ಕೆತಮ್ಮಕೊಡುಗೆಯನ್ನು ನೀಡಿ, ತಂದೆತಾಯಿ ಹಾಗೂ ಗುರು ಹಿರಿಯರನ್ನುಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ತುಮಕೂರು ಕಾರ್ಖಾನೆಗಳ ಉಪನೆರ್ದೇಶಕ ಕಛೇರಿಯ ಆಡಳಿತ ಸಹಾಯಕ ಹಾಗೂ ಸಂತಶಿಶುನಾಳ ಷರೀಪರ ಹಾಡುಗಾರ ಎಂ.ಸಿ.ನರಸಿಂಹಮೂರ್ತಿ ಮಾತನಾಡಿ ಸಂತ ಶಿಶುನಾಳ ಶರೀಫರು ಸರ್ವಧರ್ಮ ಸಮನ್ವಯದ ಸ್ಥಾಪಕ ಮಹಾತ್ಮರಲ್ಲಿ ಶಿಶುನಾಳ ಶರೀಫರುಒಬ್ಬರು, ಜನಸಾನ್ಯರಿಗೆ ಸುಲಭವಾಗಿಅರ್ಥವಾಗುವಂತೆಜನಪದ ಭಾಷೆಯಲ್ಲಿ ತತ್ವಪದಗಳನ್ನು ಸಮಾಜಕ್ಕೆ ನೀಡಿರುವವರು ಶರೀಫರು, ಇವರ ತತ್ವಪದಗಳು ಮೇಲ್ನೋಟಕ್ಕೆ ಸುಲಭವಾಗಿಕಂಡು ಬರುತ್ತದೆ, ಆದರೆಅಂತರಿಕವಾಗಿಆಧ್ಯಾತ್ಮದಔನತ್ಯವನ್ನುಅಮತಮವಗಿ ವ್ಯಕ್ತಪಡಿಸುತ್ತಾರೆಎಂದಅವರು ಲೌಕಿಕ ಮತ್ತು ಅಲೌಕಿಕ ಎರಡು ಅರ್ಥಗಳನ್ನು ಕಲ್ಪಿಸಿಕೊಂಡು ಅವರತತ್ವ ಪದಗಳನ್ನು ಅರಿತಾಗ ಮಾತ್ರ ಅವುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ, ಇದನ್ನೆಲಾಆಧ್ಯಾತ್ಮಿಕವಾಗಿಅನುಭಾವದ ನೆಲೆಯಲ್ಲಿ ಶರೀಫರುತತ್ವ ಪದಗಳಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತಿ ಅಂಚಿನಲ್ಲಿರುವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅನ್ವರ್ ಪಾಷ ರವರನ್ನು ಹಾಗೂ ಇತ್ತೀಚೆಗೆ ತುಮಕೂರು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಉಪನ್ಯಾಸಕ .ಡಾ.ಶಿವರಾಜು ರವರನ್ನು ಗೌರವಿಸಲಾಯಿತು. ಈದೇ ಸಮಾರಂಭದಲ್ಲಿ ಸಾಂಸ್ಕತಿಕ ಕಾರ್ಯಕ್ರಮ ಹಾಗೂ ಕ್ರೀಡಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು, ಕಾರ್ಯಕ್ರಮದಲ್ಲಿ ಬೆಂಗಳೂರು ಮಹಾರಾಣಿ ಕಾಲೇಜು ಉಪನ್ಯಾಸಕ ಪ್ರೋ. ಮಂಜುನಾಥ್‍ಪ್ರೋ . ಓ. ನಾಗರಾಜು, ಪ್ರೋ.ಎಂ.ರಾಮಚಂದ್ರಯ್ಯ, ಡಾ.ಶಿವನಂಜಯ್ಯ ಕಾಲೇಜುಉಪನ್ಯಾಸಕರು ಸೇರಿದಂತೆಇನ್ನಿತರ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/29-mar-koratagere-photo-01.gif)