ಹೈಕಮಾಂಡ್ ಸೂಚನೆಯಂತೆ ಲೋಕಸಭೆಯ ಚುನಾವಣೆ ಮಾಡುತ್ತೇವೆ: ಕೆ ಎನ್ ರಾಜಣ್ಣ

ಮಧುಗಿರಿ:

       ಲೋಕಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ಜಿಪಂ ತಾಪಂ ಚುನಾವಣೆ ಎದುರಾಗಲಿದ್ದು ನನ್ನ ಕ್ಷೇತ್ರದಲ್ಲಿನ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು.

       ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು ಹೈಕಮಾಂಡ್ ಸೂಚನೆಯಂತೆ ನಾವು ಲೋಕಸಭೆಯ ಚುನಾವಣೆಯನ್ನು ನಡೆಸಲಿದ್ದೇವೆ ಈಗಾಗಲೇ ಕೆಲವು ನಿರ್ಧಾರಗಳನ್ನು ಸಹ ಕೈಗೊಳ್ಳಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಕಾರ್ಯಕರ್ತರಿಗೆ ಅಧಿಕಾರ ಕೊಡುವ ಚುನಾವಣೆಗಳು ನಡೆಯುವ ದೃಷ್ಟಿಯಿಂದ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವ ಅವಶ್ಯಕತೆ ಇದೆ.

        ಏಪ್ರಿಲ್ 8ರಂದು ಪಟ್ಟಣದ ಎಂ.ಎನ್.ಕೆ ಸಮೂದಾಯ ಭವನದಲ್ಲಿ 11 ಘಂಟೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ ನವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಗೆ ಮೈತ್ರಿ ಪಕ್ಷದವರನ್ನು ಆಹ್ವಾನಿಸುವುದಿಲ್ಲ ಆ ಪಕ್ಷದವರು ಆಯೋಜಿಸುವ ಸಭೆಗೆ ನಾವ್ಯಾರು ಹೋಗುವುದಿಲ್ಲ.

       ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಚರ್ಚಿಸಿ ಮೈತ್ರಿಯಂತೆ ನಿರ್ಧಾರವಾಗಿರುವ ಲೋಕಸಭೆಯ ಚುನಾವಣೆಯ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು.

       ಯಾವುದೇ ಸರಕಾರವಿರಲಿ ಜನರ ಯೋಗ ಕ್ಷೇಮವನ್ನು ವಿಚಾರಿಸುವಂತಹ ಸರಕಾರ ರಾಜ್ಯದಲ್ಲಿರಬೇಕು ಆದರೆ ತಾಲ್ಲೂಕಿನ ಚಿತ್ರಣವೇ ಬೇರೆಯಾಗಿದೆ. ಈ ಹಿಂದೆ ನಾನು ಶಾಸಕನಾಗಿದ್ದಾಗ ನೀರಿನ ಭವಣೆ ಅಷ್ಟಾಗಿ ಕಂಡು ಬಂದಿರಲಿಲ್ಲ ಕಳೆದ ಬಾರಿಗಿಂತ ಈ ಬಾರಿ ಅವಧಿಗೂ ಮುಂಚೆಯೇ ಹೆಚ್ಚಾಗಿ ಹೇಮಾವತಿ ನೀರು ಹರಿದಿದೆ. ಹೇಮಾವತಿ ನೀರನ್ನು ಸಿದ್ದಾಪುರ ಕೆರೆಗೆ ಹರಿಸಿ ಅಲ್ಲಿಂದ ಬಿಜವರದ ಕೆರೆಗೆ ನೀರು ಹರಿಸಲಾಗಿತ್ತು ಆದರೂ ಈಗ ನೀರಿನ ಭವಣೆ ಹೆಚ್ಚಾಗಿ ಕಂಡು ಬರುತ್ತಿದೆ

       ಇಲ್ಲಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಬರಗಾಲವನ್ನು ಎದುರಿಸಲು ವಿಫಲವಾಗಿದ್ದಾರೆ ಹಾಗೂ ಅಧಿಕಾರಿಗಳು ಈ ಮೊದಲೇ ಮುಂಜಾಗ್ರತ ಕ್ರಮ ಕೈಗೊಂಡಿಲ್ಲದೇ ಇರುವುದರಿಂದ ತಾಲ್ಲೂಕಿನಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ ಎಂದರು.

       ಸಾಮಾಜಿಕ ಜಾಲ ತಾಣಗಳಲ್ಲಿ ನಿಮ್ಮ ಅಭಿಮಾನಿಗಳು ನಾವು ಯಾವುದೇ ಕಾರಣಕ್ಕೂ ಮಾಜಿ ಪ್ರಧಾನಿಗಳಿಗೆ ಮತ ಚಲಾಯಿಸುವುದಿಲ್ಲ ಎಂಬ ಅಭಿಯಾನ ಆರಂಭಿಸಿದ್ದಾರೆ ಎಂದು ಮಾಧ್ಯಮಾದವರು ಪ್ರಶ್ನಿಸಿದಾಗ ಮಾಜಿ ಶಾಸಕರು ಈ ಬಗ್ಗೆ ಮಾಹಿತಿಯ ಕೊರತೆ ಇದೆ. ಜಿಲ್ಲೆಯಲ್ಲಿ ಎರಡು ಬಣಗಳಿವೆ ಎನ್ನುವ ಬಗ್ಗೆ ಇತ್ತೀಚೆಗೆ ಮಾಧ್ಯಮಗಳ ಮುಂದೆ ನೀವು ಕೊಟ್ಟ ಹೇಳಿಕೆಗೆ ಡಿಸಿಎಂ ರವರು ನಮ್ಮ ಜಿಲ್ಲೆಯಲ್ಲಿ ಯಾವುದೇ ಬಣಗಳಿಲ್ಲ ಎಂದಿದ್ದಾರೆ

         ಎನ್ನುವುದರ ಬಗ್ಗೆ ಪ್ರತಿಕ್ರಿಯಿಸಿ ನನಗೆ ಗೊತ್ತಿರುವ ವಿಚಾರ ನಾನು ಮಾತನಾಡಿದ್ದೇನೆ ಡಿಸಿಎಂ ರವರಿಗೆ ತಿಳಿದಿರುವ ವಿಷಯದ ಅವರು ಹೇಳಿದ್ದಾರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಜನರಿಂದಲೇ ಉತ್ತರ ದೊರೆಯಲಿದೆ ಎಂದರು.ರಾಜ್ಯ ಸಹಕಾರ ಯೂನಿಯನ್ ಅಧ್ಯಕ್ಷ ಎನ್.ಗಂಗಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ, ರಾಜಗೋಪಾಲ್, ಪುರಸಭಾ ಸದಸ್ಯರಾದ ಎಂ.ವಿ.ಗೋವಿಂದರಾಜು, ಆಲೀಂ, ಹಿರಿಯ ವಕೀಲರಾದ ಹೆಚ್.ಕೆ.ವಿ.ರೆಡ್ಡಿ, ಮಾಜಿ ಸದಸ್ಯ ಸಿದ್ದಪ್ಪ, ಮುಖಂಡರಾದ ಬಾಬ ಫಕ್ರುದ್ಧಿನ್, ಪ್ರೆಸ್ ಕರಿಯಣ್ಣ, ಕೃಷ್ಣಮೂರ್ತಿ, ಹಾಗೂ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link