ಮಿಡಿಗೇಶಿ
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮದ ಸರ್ಕಾರಿ ಹಾಲಿನ ಡೈರಿಗೆ 5 ವರ್ಷಗಳ ಕಾಲಾಧಿಗೆ ಮಾರ್ಚ್ 31 ರಂದು ರಾಜೇಂದ್ರ ಪ್ರಸಾದ್ ರವರು ಅವಿರೋಧವಾಗಿ ಆಯ್ಕೆಯಾದರು ಉಪಾಧ್ಯಕ್ಷರಾಗಿ ರಾಮಕೃಷ್ಣ ಆಯ್ಕೆಯಾದರು. ಇತ್ತೀಚಿನ ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ನಿರ್ದೇಶಕರುಗಳಾಗಿ ಕಾಂಗ್ರೆಸ್ ಬೆಂಬಿಲಿತ 11 ಜನ ನಿರ್ದೇಶಕರಾಗಿ ಆಯ್ಕೆಗೊಂಡಿದ್ದರು.
ಜೆ.ಡಿ.ಎಸ್ ಪಕ್ಷ ಬೆಂಬಲಿಲತ ಓರ್ವ ನಿರ್ದೇಶಕರು ಆಯ್ಕೆಯಾಗಿದ್ದರು ಎಸ್.ಸಿ ಮತ್ತು ಎಸ್.ಟಿ ಕ್ಷೇತ್ರದ ತಲಾ ಒಬ್ಬೊಬ್ಬ ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದರು. ನಿರ್ದೇಶಕರುಗಳಾಗಿ ಅಂಜನರೆಡ್ಡಿ ಬಿ.ಹೆಚ್. ರಾಮಕೃಷ್ಣ ರೆಡ್ಡಿ, ಮಂಜುನಾಥ, ಮಂಜುನಾಥ, ಶ್ರೀರಾಮ ರೆಡ್ಡಿ, ಎಂ ಗೋಪಾಲಯ್ಯ, ಶ್ರೀರಂಗಪ್ಪ, ಭಾಗ್ಯಮ್ಮ, ಅಂಜನಮ್ಮ, ಚಿಕ್ಕ ಓಬಳಯ್ಯ ಹಾಗೂ ಭೀಮಯ್ಯ ಇಂದು ನಡೆದ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಬೇಡತ್ತೂರು ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷಿಣಿ ಪ್ರಮಿಳಮ್ಮ ಹಾಲಿನ ಡೈರಿ ಕಾರ್ಯದರ್ಶಿ ತಿಮ್ಮರೆಡ್ಡಿ, ವಿ.ಎಸ್.ಎಸ್.ಎನ್ ಅಧ್ಯಕ್ಷ ಮಹಾಲಿಂಗಪ್ಪ, ಮಾಜಿ ವಿ.ಎಸ್.ಎಸ್.ಎನ್ ಅಧ್ಯಕ್ಷ ಮಲ್ಲಪ್ಪ, ಬಿ.ಎನ್. ಸೇರಿದಂತೆ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
