ಬೆಂಗಳೂರು
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಎರಡು ತಿಂಗಳ ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ಘಟನೆ ನಡೆದಿದೆ.
ಗಂಗೊಂಡಹಳ್ಳಿಯ ನಿವಾಸಿ ಲಕ್ಷ್ಮಿದೇವಿ (22) ಆತ್ಮಹತ್ಯೆಗೆ ಶರಣಾದ ಗರ್ಭಿಣಿ. ಆರು ತಿಂಗಳ ಹಿಂದೆ ದೇವರಾಜ್ ಎಂಬುವನ ಜೊತೆ ಲಕ್ಷ್ಮಿದೇವಿ ಮದುವೆಯಾಗಿತ್ತು. ಮದುವೆಯಾದ ದಿನದಿಂದ ತವರು ಮನೆಯಿಂದ ಹಣ, ಒಡವೆ ತರುವಂತೆ ಗಂಡ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದೆ.
ಗಂಡನ ಜೊತೆಗೆ ಅತ್ತೆ-ಮಾವ ಸಹ ವರದಕ್ಷಿಣೆಗಾಗಿ ಕಿರುಕುಳ ಕೊಡುತ್ತಿದ್ದರು.ಇದರಿಂದ ಬೇಸತ್ತ ಲಕ್ಷ್ಮಿದೇವಿ ಮನೆಯ ರೂಮಿನಲ್ಲಿದ್ದ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಘಟನೆಯ ನಂತರ ಅತ್ತೆ ಜಯಮ್ಮ, ಮಾವ ಸಿದ್ದಗಂಗಪ್ಪ ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಪತಿ ದೇವರಾಜುನನ್ನು ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
