ಉಜ್ವಲ ಭವಿಷ್ಯವನ್ನು ರೂಪಿಸಲು ಇಂಜಿನಿಯರಿಂಗ್ ಕ್ಷೇತ್ರ ಅಗತ್ಯ

ತುಮಕೂರು:

     ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮುಖ್ಯವಾಗಿ ಉತ್ತಮ ಜೀವನ ಶೈಲಿಯನ್ನು ಬೆಳೆಸಿಕೊಳ್ಳಬೇಕು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿ ಯೂ ಕೌಶಲ್ಯದೊಂದಿಗೆ ಸೌಜನ್ಯವನ್ನೂ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಹಾಗೂ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಯಾವ ರೀತಿ ಪ್ರಾಮುಖ್ಯತೆ ನೀಡುತ್ತಾರೋ ಹಾಗೇನೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಆಸಕ್ತಿಯಿಂದ ಪಾಲ್ಗೊಳ್ಳಬೇಕೆಂದರು,

    ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಗಳಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಛಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‍ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

     ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಮಾರ್ಚ್ 30 ರಂದು ಸಂಜೆ 6 ಗಂಟೆಗೆ ಕಾಲೇಜ್ ಕ್ಯಾಂಪಸ್‍ನಲ್ಲಿ ಕಾಲೇಜಿನ 2 ದಿನಗಳ ವಾರ್ಷಿಕೋತ್ಸವ “ಶ್ರೀಉತ್ಸವ”ದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಹಾಗೂ ಈ ವರ್ಷದ ವಾರ್ಷಿಕೋತ್ಸವಕ್ಕೆ “ಸೇವ್ ಗರ್ಲ್ ಚೈಲ್ಡ್” ಧ್ಯೇಯವಾಕ್ಯವಾಗಿದೆ.

     ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಒಂದು ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟರಾದ ಹೊನ್ನವಳ್ಳಿ ಕೃಷ್ಣರವರು ಮಾತನಾಡುತ್ತಾ ಗುರುಗಳು ಬೋಧನೆ ಮಾಡುವಾಗ ವಿದ್ಯಾರ್ಥಿಗಳು ಗಮನವಿಟ್ಟು ಪಾಠ ಕೇಳಬೇಕು, ಕಾಟಾಚಾರಕ್ಕೆ ಯಾವುದೇ ಕೆಲಸವನ್ನು ಮಾಡಬಾರದು ಹಾಗೂ ನಾವು ಮಾಡುವ ಕೆಲಸ ನಮ್ಮ ಮನಸ್ಸಿಗೆ ಮೆಚ್ಚುವಂತಿರಬೇಕು.

     ನಾನು ಈ ಸ್ಥಾನದಲ್ಲಿ ಇದ್ದೇನೆ ಎಂದರೆ ನಮ್ಮ ತಂದೆ ತಾಯಿಯವರು ಪಟ್ಟ ಶ್ರಮ ಹಾಗೂ ಅವರು ಹೇಳಿಕೊಟ್ಟಿರುವ ನಡತೆ ನನ್ನನ್ನು ಈ ಸ್ಥಾನಕ್ಕೆ ತಂದಿದೆ. ವಿದ್ಯಾರ್ಥಿಗಳು ತಮ್ಮ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಕ್ರಿಯಾಶೀಲರಾಗಬೇಕೆಂದು ತಿಳಿಸಿದರು.ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್ ಹಾಗೂ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್. ಪಾಟೀಲ್‍ರವರು ಕಾರ್ಯಕ್ರಮದ ಯಶಸ್ಸಿಗಾಗಿ ಶುಭ ಹಾರೈಸಿದ್ದರು.

     ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಕನ್ನಡದ ಪಡ್ಡೆಹುಲಿ ಸಿನಿಮಾದಲ್ಲಿನ ಮುಖ್ಯನಟರಾದ ಶ್ರೇಯಾಸ್‍ಮಂಜುರವರು ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನಾದರೂ ಸಾಧಿಸುತ್ತೇನೆ ಎನ್ನುವ ಗುರಿಯೊಂದಿಗೆ ಮುನ್ನಗಬೇಕೆಂದು ಕರೆಕೊಟ್ಟರು. ಹಾಗೂ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ಮತ್ತು ಶ್ರೀ ಉತ್ಸವ 2019 ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

      ಇದೇ ಸಂದರ್ಭದಲ್ಲಿ ಚಲನಚಿತ್ರ ವಿತರಕರು ಹಾಗೂ ನಿರ್ಮಾಪಕರಾದ ಸ್ವಾಧೀನ್‍ಕುಮಾರ್, ಚಲನಚಿತ್ರ ನಿರ್ದೇಶಕರಾದ ಪರಮೇಶ್, ಮತ್ತು ಶ್ರೀಕಾಂತ್ ಹೊನ್ನವಳ್ಳಿ, ಶ್ರೀದೇವಿ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ. ಹೇಮಾದ್ರಿನಾಯ್ಡು, ಉಪಪ್ರಾಂಶುಪಾಲರಾದ ಹೆಚ್.ಬಿ.ಫಣಿರಾಜ್, ಶ್ರೀದೇವಿ ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ. ಕೆ.ಎಸ್. ರಾಮಕೃಷ್ಣ, ಕಾರ್ಯಕ್ರಮದ ಮುಖ್ಯ ಸಂಯೋಜಕ ರಾದ ಪ್ರೊ. ಇಜಾಜ್ ಅಹಮದ್ ಷರೀಪ್, ಡೀನ್ ಎನ್.ಚಂದ್ರಶೇಖರ್, ಡಾ. ಸಿ.ಪಿ.ಚಂದ್ರಪ್ಪ, ಡಾ. ಮಹೇಶ್‍ ಕುಮಾರ್ ಪ್ರೊ.ಸಿ.ಜೆ. ಸದಾಶಿವಯ್ಯ, ಪ್ರೊ. ಕುಮಾರ್, ಪ್ರೊ. ವಾಸುದೇವಮೂರ್ತಿ, ಪ್ರೊ. ನಾಗರಾಜ್ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link