ದೇಶದ ಭದ್ರತೆಗೆ ಮತದಾನ ಅನಿವಾರ್ಯ

ಹುಳಿಯಾರು

      ವಿದ್ಯಾರ್ಥಿಗಳು ಚುನಾವಣೆಯ ಮಹತ್ವ ಅರಿತು ಮತದಾನ ಮಾಡಬೇಕು. ಆಧುನಿಕ ಮತಯಂತ್ರದ ಬಳಕೆ ಬಗ್ಗೆ ತಿಳಿದು, ಅದನ್ನು ಜನರಿಗೂ ತಿಳಿಸಿಕೊಡಬೇಕು ಎಂದು ಇವಿಎಂ ಮಾಸ್ಟರ್ ಟ್ರೈನರ್ ನಾರಾಯಣ್ ಅವರು ತಿಳಿಸಿದರು.ಹುಳಿಯಾರಿನ ಯೋಗಿನಾರಾಯಣ ಕೈಗಾರಿಕ ಸಂಸ್ಥೆಯ ಐಟಿಐ ವಿದ್ಯಾರ್ಥಿಗಳಿಗೆ ಆಧುನಿಕ ಮತಯಂತ್ರ ಬಳಕೆಯ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮತದಾನದ ಅರಿವು ಮೂಡಿಸಿ ಮಾತನಾಡಿದರು.

      ದೇಶದ ಭವಿಷ್ಯ ಯುವ ಪೀಳಿಗೆಯನ್ನು ಅವಲಂಬಿಸಿದೆ. ಈ ಬಾರಿಯ ಲೋಕಸಭೆ ಚುನಾವಣೆಯು ಅತ್ಯಂತ ಮಹತ್ವದ್ದಾಗಿದೆ. ಮತದಾರರು ಚಲಾಯಿಸುವ ಪ್ರತಿಯೊಂದು ಮತವೂ ರಾಷ್ಟ್ರದ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಯಾವುದೇ ಒತ್ತಡಗಳಿದ್ದರೂ ತಪ್ಪದೆ ಮತದಾನ ಮಾಡಿ, ಇತರರಿಗೂ ಅವರ ಜವಾಬ್ದಾರಿ ತಿಳಿಸಬೇಕು.

       ಮತದಾನ ಪ್ರಮಾಣ ಹೆಚ್ಚಳಕ್ಕೆ ನೆರವಾಗಬೇಕು ಎಂದರು.ಪ್ರತಿ ವಿದ್ಯಾರ್ಥಿ ದೇಶದ ಭವಿಷ್ಯಕ್ಕಾಗಿ ಅರ್ಹ ಅಭ್ಯರ್ಥಿಗೆ ಮತ ಚಲಾಯಿಸುವುದು ಕರ್ತವ್ಯವಾಗಿದೆ. ಶಿಕ್ಷಣ ಪಡೆದು ಉದ್ಯೋಗದಾತರಾಗಿ ಯಾವುದೋ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದರೆ ಸಾಲದು, ಚುನಾವಣೆಯಲ್ಲಿ ಮತದಾನ ಮಾಡಬೇಕು. ಸರ್ಕಾರದ ರಚನೆಯಲ್ಲಿ ನಿಮ್ಮ ನಿಲುವು ತಿಳಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಇವಿಎಂ ಪ್ರಾತ್ಯಾಕ್ಷಿಕೆಯ ಸಹಾಯಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap