ಡಾ. ಶಿವಕುಮಾರಸವಾಮಿಗಳ 112ನೇ ಜನ್ಮ ದಿನದ ಅಂಗವಾಗಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ

ಎಂ ಎನ್ ಕೋಟೆ 

       ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಹೊಸಕೆರೆ ಗ್ರಾಮದಲ್ಲಿ ಡಾ. ಶಿವಕುಮಾರಸವಾಮಿಗಳ 112ನೇ ಜನ್ಮ ದಿನದ ಅಂಗವಾಗಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳಲಾಗಿತ್ತು.ಸಾವಿರಾರು ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.

       ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜ್ ಕುಮಾರ್ ಮಾತನಾಡಿ ಮಹಾನ್ ಚೇತನ ತ್ರಿವೀಧ ದಾಸೋಹಿ ಶತಯಿಷಿ ಡಾ, ಶಿವಕುಮಾರಸ್ವಾಮಿಗಳ ಸೇವೆ ಅನನ್ಯವಾಗಿದ್ದು ವಿಶ್ವಕ್ಕೆ ಮಾದರಿಯಾಗಿದ್ದಾರೆ. ಸರ್ಕಾರ ಮಾಡದಿರುವ ಕಾರ್ಯವನ್ನ ಒಂದು ಮಠದಿಂದ ಸಾಧಿಸಿ ತೋರಿಸಿದ್ದಾರೆ.

        ಸವಿರಾರು ಮಕ್ಕಳಿಗೆ ಅನ್ನ ದಾಸೋಹ ವಿದ್ಯಾದಾನವನ್ನು ನೀಡಿ ಸಮಾಜದಲ್ಲಿ ಅತ್ಯನ್ನತ ವ್ಯಕ್ತಿಯಾಗಿ ನಡೆದಾಡುವ ದೇವರಾಗಿ ಜಾತಿ ಮತ ಭೇಧವಿಲ್ಲದೆ ಎಲ್ಲರನ್ನು ಮಠದಲ್ಲಿ ಆಶ್ರಯ ನೀಡಿ ಅ ಮಕ್ಕಳಿಗೆ ಸಂಸ್ಕಾರವನ್ನು ನೀಡಿದ ಸಿದ್ದಗಂಗಾ ಶ್ರೀಗಳ ಕೊಡುಗೆ ನಮ್ಮ ದೇಶಕ್ಕೆ ಅಪಾರವಾಗಿದೆ. ಸಿದ್ದಗಂಗಾ ಶ್ರೀಗಳ 112ನೇ ಜನ್ಮ ದಿನವನ್ನು ರಾಜ್ಯಾದ್ಯಂತ ಆಚರಣೆ ಮಾಡಿ ಪುನೀತರಾಗಿದ್ದರು.

         ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ , ಅಳಿಲಘಟ್ಟ ಗ್ರಾಮಗಳಲ್ಲಿ ಸಿದ್ದಗಂಗಾ ಶ್ರೀಗಳ ಜನ್ಮ ದಿನವನ್ನು ಆಚರಿಸಿದ್ದರು,. ಭಕ್ತರಿಗೆ ಮಹಾ ದಾಸೋಹ ಏರ್ಪಡಿಸಲಾಗಿತ್ತು.

         ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಡಸ್ ಡಿ ದಿಲೀಪ್ ಕುಮಾರ್ , ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜ್ ಕುಮಾರ್ , ಮುಖಂಡರಾದ ಶಿವನೇಹಳ್ಳಿ ಮಲ್ಲೇಶ್ , ಉದಯ್ , ರಾಜಶೇಖರಯ್ಯ , ಮಧು , ಮಣಿ , ಮಂಜುನಾಥ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link