ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ಘಟಕದ ಸಭಾಪತಿ ಆಗಿ ಶ್ರೀ.ಎಸ್ ನಾಗಣ್ಣ ಆಯ್ಕೆ

ಬೆಂಗಳೂರು

         ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ಘಟಕದ ಸಭಾಪತಿ ಆಗಿ ತುಮಕೂರು ಮೂಲದ ಶ್ರೀ ಎಸ್. ನಾಗಣ್ಣ ಚುನಾಯಿತರಾಗಿದ್ದಾರೆ. ಉಪ ಸಭಾಪತಿ ಆಗಿ ಶಿವಮೊಗ್ಗದ ಡಾ. ಕುಮಾರ್ ವಿ ಎಲ್ ಎಸ್ ಆಯ್ಕೆಗೊಂಡಿದ್ದಾರೆ.

         ತುಮಕೂರು ಜಿಲ್ಲೆಯ ರೆಡ್ ಕ್ರಾಸ್ ಅಧ್ಯಕ್ಷರು ಹಾಗೂ ತುಮಕೂರು ಜಿಲ್ಲೆಯಿಂದ ರಾಜ್ಯ ಮಂಡಳಿಯ ಸದಸ್ಯರಾಗಿರುವ ಎಸ್ ನಾಗಣ್ಣ ತುಮಕೂರಿನಿಂದ ಪ್ರಕಟಗೊಳ್ಳುವ ನಾಡಿನ ಪ್ರಮುಖ ಪ್ರಾದೇಶಿಕ ದೈನಿಕ ಪ್ರಜಾ ಪ್ರಗತಿ ಪತ್ರಿಕೆಯ ಸಂಪಾದಕರಾಗಿದ್ದಾರೆ.  

         ಇಂದು ನಡೆದ ಚುನಾವಣೆಯಲ್ಲಿ ನಾಗಣ್ಣ ಅವರಿಗೆ 19 ಜಿಲ್ಲಾ ಘಟಕಗಳ ಬೆಂಬಲ ವ್ಯಕ್ತವಾಗಿದ್ದು, ಅವರ ಎದುರಾಳಿ ಬಸರೂರು ರಾಜೀವ್ ಅವರಿಗೆ 12 ಜಿಲ್ಲೆಗಳ ಮತಗಳು ಬಿದ್ದಿದ್ದವು. ಉಪಸಭಾಪತಿ ಡಾ. ಕುಮಾರ್ ವಿ ಎಲ್ ಎಸ್ ಅವರಿಗೂ ಸಹ 19 ಮತಗಳು ದೊರೆತಿದ್ದು, ಎದುರಾಳಿ ವಿಜಯಪುರದ ಡಾ. ಬಿದರಿ ಅವರಿಗೆ 12 ಮತಗಳು ಲಭಿಸಿವೆ.

         ಹಿರಿಯ ಐಎಎಸ್ ಅಧಿಕಾರಿ, ರಾಜ್ಯ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಸಂಸ್ಥೆಯ ಆಯುಕ್ತ ಡಾ. ಆರ್. ವಿಶಾಲ್ ಅವರು ಚುನಾವಣಾಧಿಕಾರಿಗಳಾಗಿದ್ದರು. ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕಕ್ಕೆ ರಾಜ್ಯಪಾಲರು ಅಧ್ಯಕ್ಷರಾಗಿದ್ದಾರೆ.  

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link