ಭಾರತದಲ್ಲಿ ಮನುಷ್ಯರು ಬದುಕಿಲ್ಲ, ಜಾತಿಗಳು ಬದುಕಿದ್ದಾವೆ

ಹೊಸದುರ್ಗ:

         ಭಾರತದಲ್ಲಿ ಮನುಷ್ಯರು ಬದುಕಿಲ್ಲ, ಜಾತಿಗಳು-ಉಪಜಾತಿಗಳು ಬದುಕಿದ್ದಾವೆ ಜಾತಿ, ಮತ, ಧರ್ಮದ ಹೆಸರಿನಲ್ಲಿ ಸಮಾಜದೊಳಗೆ ಒಡಕು ಮೂಡಿಸುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸೃತ, ಕವಿ ಚಂದ್ರಶೇಖರ ತಾಳ್ಯ ಹೇಳಿದರು.

       ಪಟ್ಟಣದ ವಿಶ್ರಾಂತ ನ್ಯಾಯಮೂರ್ತಿಗಳಾದ ಬಿಲ್ಲಪ್ಪ ಅವರ ಸ್ವಗೃಹದ ರಾಮಕೃಷ್ಣ ಪರಮಹಂಸ ಸಭಾಂಗಣದಲ್ಲಿ ಅನಿಕೇತನ ಬಳಗದಿಂದ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.12 ನೇ ಶತಮಾನದ ಬಸವಾದಿ ಶಿವಶರಣರು ವಚನಗಳನ್ನು ಸಾಮಾಜಿಕ ನೆಲೆಗಟ್ಟಿನ ಹಿನ್ನೆಲೆಯಲ್ಲಿ ರಚಿಸಿದ್ದಾರೆ. ಸಮಾಜದಲ್ಲಿದ್ದ ಮೌಡ್ಯ, ಅಜ್ಞಾನವನ್ನು ನಿವಾರಿಸಿ ಹೇಗೆ ಸುಸ್ತಿರ ಜೀವನ ನಡೆಸಬೇಕೆಂಬ ಮಾಹಿತಿಯೂ ಇದೆ. ಹಾಗಾಗಿ ವಚನಗಳನ್ನು ತೋರಿಕೆಯೇ ಓದದೇ ಅದರ ಸಾರ ತಿಳಿಯಲಿಕ್ಕಾಗಿ ಓದುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳುವುದು ಅಗತ್ಯ ಎಂದರು.

        ಬಸವಣ್ಣನವರ ಕಣ್ಣಗೆ ಮೊದಲು ಬಿದ್ದದ್ದು ಜಾತ್ಯತೀತ ಸಮಾಜದ ಕಲ್ಪನೆ. ಅಂದಿನ ಸಮಾಜದಲ್ಲಿನ ಜಾತಿಯ ವಿಷಮತೆ. ಜಾತಿಯ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆ, ದಲಿತರ ಮೇಲೆ ನಡೆಯುತ್ತಿದ್ದ ಕ್ರೌರ್ಯ ಬಸವಣ್ಣನವರ ಮನಸ್ಸನ್ನು ತುಂಬಾ ಘಾಸಿಗೊಳಿಸಿತು ಇದರಿಂದಾಗಿ ಬಸವಾದಿ ಶರಣರು ಇಡೀ ಜಾತಿ ವ್ಯವಸ್ಥೆಯ ವಿರುದ್ದ ಸೆಟೆದು ನಿಂತರು.

         ಕಾಶ್ಮೀರದಿಂದ ಹುಡುಕಿಕೊಂಡು ಬಂದವರು ಜಾಸ್ತಿ, ಬಸವಣ್ಣನವರು 21 ನೇಯ ಶತಮಾನದ ಸಮಾಜದ ಆರ್ಥಿಕ ಅಗತ್ಯಗಳನ್ನು 9 ನೆ ಶತಮಾನಗಳ ಹಿಂದೆಯೇ ಕಲ್ಪಿಸಿಕೊಂಡಿದ್ದವರು, ಶರಣ ಸಂಸೃತಿ ಇಡೀ ವಿಶ್ವಕ್ಕೆ ನೀಡಿದ ಆದರ್ಶ ಮಾನವ ಎನ್ನಬಹುದು. 12 ನೇ ಶತಮಾನದ ಕ್ರಾಂತಿಗಳನ್ನು ಈಗಿನ ಕಾಲದ ಯುವಕರಿಗೆ ತಿಳಿಸಬೇಕು.

         ಬದುಕಿಗೆ ಮೂಲ ಭೂತ ಆಧಾರವಾಗಿದ್ದು ನಮ್ಮ ಭಾಷೆ, ಭಾಷೆ ಸರಳತೆ ತಂದು ಕೊಡುತ್ತದೆ. ವಚನಕಾರರ ಭಾಷೆ ಸರಳವಾಗಿ ಇರುತ್ತದೆ. ಬದುಕಿನ ಒಳಗೆ ಸಾಹಿತ್ಯ ಉತ್ಪನ್ನವಾಗಬೇಕಾಗುತ್ತದೆ. ಪ್ರಜ್ಞತೆಯನ್ನು ಶಾಲಾ ಕಾಲೇಜುಗಳಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಶಿಕ್ಷಣ ವಂಚಿತರಿಗೆ ಮತ್ತು ಯುವಕರಿಗೆ ಅನಿಕೇತನ ಅನುಭವ ಮಂಟಪ ದಾರಿ ದೀಪವಾಗಬೇಕು ಹಾಗೂ ಜಾತಿಗಳನ್ನು ಸಾಯಿಸಬೇಕು ಎಂದು ಹೇಳಿದರು.

        ಇದೇ ವೇಳೆ ಐಲಾಪುರ ಗ್ರಾಮದ ಕು.ಜಿ.ಶ್ವೇತಾರವರಿಗೆ ಅನಿಕೇತನ ಬಳಗದಿಂದ ಸನ್ಮಾನ ಮಾಡಿದರು. ಸದಸ್ಯರಾದ ಲೋಕೇಶ್, ನವೀನ್, ಕಾಚಾಪುರ ರಂಗಪ್ಪ, ರಾಮಸ್ವಾಮಿ, ಶೇಷಗಿರಿ, ನಿಸಾರ್ ಅಹಮದ್, ಯಲ್ಲಪ್ಪ, ಹಾಗೂ ಇನ್ನಿತರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link