ಚಳ್ಳಕೆರೆ
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 2013ರ ಕೆಜೆಪಿ ಪಕ್ಷದ ಅಭ್ಯರ್ಥಿ, 2018ರ ಬಿಜೆಪಿ ಪಕ್ಷದ ಅಭ್ಯರ್ಥಿ ಯುವ ಮುಖಂಡ ಕೆ.ಟಿ.ಕುಮಾರಸ್ವಾಮಿ ಭಾರತೀಯ ಜನತಾ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ಸೇರಲಿದ್ದಾರೆಂಬ ಸುದ್ದಿ ಸೋಮವಾರ ಎಲ್ಲೆಡೆ ಹರಡಿದ್ದು, ರಾಜಕೀಯ ಕ್ಷೇತ್ರದಲ್ಲಿ ಬಾರಿ ಬದಲಾವಣೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.
ನಗರದ ಖ್ಯಾತ ವಾಣಿಜ್ಯೋದ್ಯಮಿ, ಜೆಡಿಎಸ್ ಮುಖಂಡ ಕೆ.ಸಿ.ವೀರೇಂದ್ರ(ಪಪ್ಪಿ) ಅವರ ನಿವಾಸದಲ್ಲಿ ಸೋಮವಾರ ಕೆ.ಟಿ.ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚೆ ನಡೆಸಿರುವುದು ಕುಮಾರಸ್ವಾಮಿ ಜೆಡಿಎಸ್ ಸೇರುವುದು ಖಚಿತ ಎನ್ನಲಾಗಿದೆ. ಆದರೆ, ಜೆಡಿಎಸ್ ಪಕ್ಷವನ್ನು ಸೇರುವ ದಿನಾಂಕವನ್ನು ಇನ್ನೂ ನಿಗದಿಗೊಳಿಸಿಲ್ಲ.
ಕೆ.ಟಿ.ಕುಮಾರಸ್ವಾಮಿ ಜೆಡಿಎಸ್ ಪಕ್ಷದ ರಾಜಕಾರ್ಯಕಾರಿ ಸಮಿತಿ ಸದಸ್ಯ ಎನ್.ಭೀಮಪ್ಪ, ತಾಲ್ಲೂಕು ಗೌರವಾಧ್ಯಕ್ಷ ಎಚ್.ಆನಂದಪ್ಪ, ಪರಾಜಿತ ಅಭ್ಯರ್ಥಿ ಎನ್.ರವೀಶ್ಕುಮಾರ್ ಕಲಮರಹಳ್ಳಿ ಶಿವಣ್ಣ, ಮುಂತಾದವರೊಂದಿಗೆ ಚರ್ಚೆ ನಡೆಸಿದ್ದಾರೆ. ಕೆ.ಟಿ.ಕುಮಾರಸ್ವಾಮಿ ತಮ್ಮ ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷವನ್ನು ಸೇರುವ ಇಂಗಿತವನ್ನು ಅಲ್ಲಿ ವ್ಯಕ್ತಿ ಪಡಿಸಿದ್ಧಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಬಂಡೆರಂಗಸ್ವಾಮಿ ಸಹ ಹಾಜರಿದ್ದರು ಎನ್ನಲಾಗಿದೆ.