ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಸ್ವಿಗ್ಗಿ ಡೆಲಿವರಿಬಾಯ್

ಬೆಂಗಳೂರು

       ಸ್ವಿಗ್ಗಿ ಡೆಲಿವರಿ ಹುಡಗನೊಬ್ಬ ಊಟ ಆರ್ಡರ್ ಮಾಡಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.ಆರ್ಡರ್ ಮಾಡಿದ ಊಟ ನೀಡಲು ಬಂದು ಕಿರುಕುಳ ನೀಡಿದ ಡೆಲಿವರಿ ಹುಡುಗನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಯುವತಿಯು ಫೇಸ್‍ಬುಕ್‍ನಲ್ಲಿ ನೋವು ತೋಡಿಕೊಂಡು ಒತ್ತಾಯಿಸಿದ್ದಾರೆ. ಇದನ್ನು ನಿರಾಕರಿಸಿರುವ ಸ್ವಿಗ್ಗಿ ಸಂಸ್ಥೆಯು ಯುವತಿಯು ಮಾಡಿರುವ ಆರೋಪ ಸಂಪೂರ್ಣ ಸುಳ್ಳು ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ

     ಹೊರರಾಜ್ಯದ ಯುವತಿ ನೇಹಾ (ಹೆಸರು ಬದಲಾಯಿಸಲಾಗಿದೆ) ಎಂಬವರು ಮೊಬೈಲ್‍ನಲ್ಲಿ ಸ್ವಿಗಿ ಆಪ್ ಮೂಲಕ ಊಟ ಆರ್ಡರ್ ಮಾಡಿದ್ದು ಸ್ವಿಗ್ಗಿ ಡೆಲಿವರಿ ಹುಡುಗ ಆಹಾರವನ್ನು ಪಾರ್ಸಲ್ ತೆಗೆದುಕೊಂಡು ಯುವತಿಯ ಮನೆಗೆ ಹೋಗಿ ಬಾಗಿಲು ಬಡಿದಿದ್ದಾನೆ.

     ಬಾಗಿಲು ತೆಗೆದ ಯುವತಿಗೆ ಡೆಲಿವರಿ ಹುಡುಗ ಪಾರ್ಸಲ್ ಕೊಡುವಾಗ ಆಕೆಗೆ ಕೇಳಿಸದ ರೀತಿಯಲ್ಲಿ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದು ಯುವತಿಗೆ ಕೇಳಿಸಲಿಲ್ಲ. ಹೀಗಾಗಿ ಯುವತಿ ಮತ್ತೆ ಆತನನ್ನು ಏನು ಎಂದು ಕೇಳಿದ್ದಾರೆ. ಆಗ ಹುಡುಗ ಮತ್ತೆ ಯುವತಿಗೆ ಕೇಳಿಸುವಂತೆ ನನ್ನ ಜೊತೆಗೆ ಸೆಕ್ಸ್ ಮಾಡಿ ಎಂದು ಒತ್ತಾಯಿಸಿದ್ದಾನೆ.

     ಈ ಬಗ್ಗೆ ಯುವತಿ ತನ್ನ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ.ಡೆಲಿವರಿ ಬಾಯ್ ತನ್ನ ಜೊತೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದನು. ಆದರೆ ನಾನು ಆತನಿಂದ ಫುಡ್ ಪ್ಯಾಕೇಟ್ ಕಿತ್ತುಕೊಂಡು ಏನೂ ಮಾತನಾಡದೇ ಬಾಗಿಲು ಮುಚ್ಚಿದೆ. ಆತನ ವರ್ತನೆ ನನಗೆ ಅಸಹ್ಯ ಎನಿಸಿತು. ಬಳಿಕ ನಾನು ಆರ್ಡರ್ ಮಾಡಿದ್ದ ಊಟವನ್ನು ತಿನ್ನಲು ಮನಸ್ಸಾಗಲಿಲ್ಲ. ಅದರಲ್ಲೂ ಪ್ಯಾಕೇಟ್ ಮುಟ್ಟಲು ಕೂಡ ಇಷ್ಟವಾಗಿಲ್ಲ. ನಿಮ್ಮ ಡೆಲಿವರಿ ಹುಡುಗ ನನ್ನ ಜೊತೆ ವರ್ತಿಸಿದ್ದ ರೀತಿ ಅಸಭ್ಯವಾಗಿತ್ತು’ಎಂದು ಸ್ವಿಗ್ಗಿ ಕಂಪನಿಗೆ ದೂರು ನೀಡಿದ್ದಾರೆ.

        ಯುವತಿಯ ದೂರಿಗೆ ಪ್ರತಿಕ್ರಿಯಿಸಿದ ಕಂಪನಿ, ನಾವು ಡೆಲಿವರಿ ಹುಡಗನ ಬಗ್ಗೆ ವಿಚಾರಣೆ ಮಾಡಿದಾಗ ಆತ ಯಾವುದೇ ರೀತಿಯಲ್ಲಿ ಅಸಭ್ಯವಾಗಿ ವರ್ತಿಸಿಲ್ಲ ಕನ್ನಡ ಬಾರದ ಯುವತಿಯು ನಾನು ಊಟದ ಬಗ್ಗೆ ಮಾತನಾಡಿರುವುದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಈ ರೀತಿಯ ಆರೋಪ ಮಾಡಿದ್ದಾನೆ ಎಂದು ತಿಳಿಸಿದ್ದಾನೆ ಆದರೂ ಯುವತಿಯ ಕ್ಷಮೆ ಕೋರಿದ್ದೇವೆ ಎಂದು ತಿಳಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link