ಸ್ವಾಭಿಮಾನ, ಜ್ಯಾತ್ಯಾತೀತೆ, ಸಮಾನತೆಯಿಂದ ಬದುಕಿ : ಕೆ.ಬಿ ಸಿದ್ದಯ್ಯ

ತಿಪಟೂರು :

       ನಿರ್ಭೀತಿಯಿಂದ ಕಲಿಯುವುದು, ಸ್ವತಂತ್ರವಾಗಿ ಬದುಕುವುದು, ವೈಚಾರಿಕತೆಯಿಂದ ಆಲೋಚನೆ ಮಾಡಿ, ಚಿಂತಿಸುವುದು ಮನುಷ್ಯ ಕಲಿತರೆ ಸ್ವಾಭಿಮಾನ, ಜ್ಯಾತ್ಯಾತೀತೆ, ಸಮಾನತೆಯು ಮನುಷ್ಯನ ಬದುಕಿನಲ್ಲಿ ಅತ್ಯಂತ ಪ್ರಮುಖ ಅಂಶಗಳು ಎಂದು ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಹಾಗೂ ಕವಿ ಕೆ.ಬಿ ಸಿದ್ದಯ್ಯ ತಿಳಿಸಿದರು.

        ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ 2018-19 ನೇ ಸಾಲಿನ ಕ್ರೀಡೆ. ಸಾಂಸ್ಕತಿಕ, ಎನ್.ಎಸ್.ಎಸ್ , ಎನ್.ಸಿ.ಸಿ. ರೆಡೆಕ್ರಾಸ್ ಘಟಕಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದಅವರು ಒಬ್ಬ ಮನುಷ್ಯ ಇನ್ನೂಬ್ಬ ಮನುಷ್ಯನನ್ನು ಪ್ರೀತಿ ಗೌರವ ಸಮಾನತೆಯಿಂದ ಕಾಣುವುದನ್ನು ಕಲಿತು, ವೈಜ್ಞಾನಿಕವಾಗಿ ಆಲೋಚನೆ ಮಾಡಿ, ವೈಚಾರಿಕತೆಯ ಚಿಂತನೆಗಳಿಂದ ಕುವೆಂಪುರವರ ಸಂದೇಶದಂತೆ ಸ್ವಾಭಿಮಾನದಿಂದ ಬದುಕುವಂತೆ ರೂಡಿಸಿಕೊಂಡರೆ ಮನೆಯಲ್ಲಿ-ದೇಶದಲ್ಲಿ- ಸಮಾಜದಲ್ಲಿ ಗೌರವ ಪ್ರೀತಿಯಿಂದ ಸಮಾನತೆಯ ಬದುಕನ್ನು ಬದುಕಬಹುದು ಎಂದರು.

       ಕಾರ್ಯಕ್ರಮದಲ್ಲಿ ಜಿಟಿವಿ ಕನ್ನಡದ ಸರಿಗಮಪ ಸಂಗೀತ ಸ್ಪರ್ಧೆಯ ವಿಜೇತರಾದ ಕುಮಾರಿ ಸಾದ್ವಿನಿ ಕೊಪ್ಪ ಮತ್ತು ಚನ್ನಪ್ಪ ಉದ್ದಾರ್‍ರವರು ಗಾನಸುಧೆಯಲ್ಲಿ ವಿದ್ಯಾರ್ಥಿಗಳು ಮಿಂದೆದ್ದರು.

       ಕಾರ್ಯಕ್ರಮದಲ್ಲಿ ಕುಂದೂರ್ ತಿಮ್ಮಯ್ಯ, ಮತ್ತಿತ್ತರು ಭಾಗವಹಿಸಿದ್ದು ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಕೆ.ಎಂ. ರಾಜಣ್ಣ ವಹಿಸಿದ್ದರು. ಪ್ರಾಸ್ತವಿಕ ನುಡಿಯನ್ನು ಇತಿಹಾಸ ವಿಭಾಗದ ಮುಖ್ಯಸ್ಥರಾದ ಕುಮಾರಸ್ವಾಮಿ ನೇರಿವೇರಿಸಿ ಸ್ವಾಗತವನ್ನು ರಾಜ್ಯಶಾಸ್ತ್ರದ ಪ್ರಾದ್ಯಾಪಕರಾದ ಹೊನ್ನಾಂಜಿನಯ್ಯ ನೇರವೇರಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link