ಹಿರಿಯೂರು ವಾಸವಿ ಕ್ಲಬ್ ವತಿಯಿಂದ ರೆಫ್ರೇಜಿರೇಟರ್ ವಿತರಣೆ

ಹಿರಿಯೂರು :

       ಜನರ ಸೇವೆ ಜನಾರ್ಧನ ಸೇವೆ ಎಂಬಂತೆ ನಿಸ್ವಾರ್ಥ ಭಾವದಿಂದ ಸಮಾಜದ ಆರ್ಥಿಕ ದುರ್ಬಲರ ಸೇವೆಯನ್ನು ಮಾಡಿದಾಗ ಮಾತ್ರ ದೇವರ ಸೇವೆ ಮಾಡಿದ ಪುಣ್ಯ ದೊರೆಯುತ್ತದೆ ಎಂದು ಜಿಲ್ಲಾ ವಿ 303 ಗವರ್ನರ್ ಹೆಚ್.ಎಸ್.ನಾಗಭೂಷಣ್‍ರವರು ಹೇಳಿದರು.
ನಗರದ ವಾಗ್ಧೇವಿ ವಿದ್ಯಾಸಂಸ್ಥೆ ಸಬಾಭವನದಲ್ಲಿ ವಾಸವಿ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

        ಇದೇ ಸಂದರ್ಭದಲ್ಲಿ ಬಬ್ಬೂರು ಗ್ರಾಮದ ಶ್ರೀ ಸಿದ್ದೇಶ್ವರ ಬುದ್ದಿಮಾಂದ್ಯ ವಸತಿ ಶಾಲೆಗೆ ಸಂಘದಿಂದ ನೀಡಲಾದ ಸರ್ಕಾರಿ ಔಷದಿಗಳನ್ನು ಇಡಲು ಉಚಿತ ರೆಫ್ರೇಜಿರೇಟರನ್ನು ಅವರು ಕುಡುಗೆಯಾಗಿ ನೀಡಿದರು.

         ಈ ಕಾರ್ಯಕ್ರಮದಲ್ಲಿ ವಾಸವಿಕ್ಲಬ್ ಅಧ್ಯಕ್ಷರು ಬಿ.ಎಸ್.ನಾಗಭೂಷಣ, ಸ್ಪೆಷಲ್ ರೀಜನಲ್ ಜೋನ್ ಭವಾನಿ ಶ್ರೀನಿವಾಸ್, ರುಕ್ಮಿಣಿ ಗೋವಿಂದರಾಜ್ ಅರುಣ್, ರಾಜ್ಯ ಮಹಾಸಭೆ ನಿರ್ದೇಶಕರು ಆರ್.ಪ್ರಕಾಶ್‍ಕುಮಾರ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷರು ಹೆಚ್.ಎಸ್.ನಾಗರಾಜ್‍ಗುಪ್ತಾ, ಪಿ.ವಿ.ನಾಗರಾಜ್, ವಿ.ಸತ್ಯನಾರಾಯಣಶೆಟ್ಟಿ ಮಹಿಳಾ ಮಂಡಳಿಯ ನಾಗಸುಂದರಮ್ಮ, ಸುಬ್ಬಣ್ಣಶೆಟ್ಟಿ, ಚಂದ್ರವದನಾ, ಸತ್ಯಮೂರ್ತಿ, ಸಂದ್ಯಾ ಅಮರೇಶ್, ಉಮಾರಾಜ್‍ಶೇಖರ್, ನಾಗಲಕ್ಷ್ಮಮ್ಮ, ಕೃಷ್ಣಮೂರ್ತಿ, ಚಂದ್ರಿಕಾ ಅರುಣ್, ಮಮತಾ, ಅಶೋಕ್, ಶೋಭಾ, ನಾಗರಾಜ್, ನೇತ್ರಾಶಿವಕುಮಾರ್ ವೇದಾವತಿ, ಲತಾನಾಗಭೂಷಣ್, ದೀಪ್ತಿ, ವರುಣ್ ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap