ದೆಹಲಿ:
ಭಾರತೀಯ ರಿಸರ್ವ್ ಬ್ಯಾಂಕ್ ನ ಆರ್ಬಿಐ ಹಣಕಾಸು ಸಮಿತಿಯು ರಿಪೋ ದರವನ್ನು ಶೇ.0.25ರಷ್ಟು ಕಡಿತಗೊಳಿಸಿ, 6.25 ರಿಂದ ಶೇಕಡ 6ಕ್ಕೆ ಇಳಿಕೆ ಮಾಡಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕಿನ ಗೌವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಇಂದು ನಡೆದ 2019-20ರ ಹಣಕಾಸು ವರ್ಷದ ಮೊದಲ ಸಭೆಯಲ್ಲಿ ಹಣಕಾಸು ನೀತಿ ಸಮಿತಿಯು ಈ ಮಹತ್ವದ ನಿರ್ಣಯ ತೆಗೆದುಕೊಂಡಿದ್ದು, ರೆಪೋ ದರವನ್ನು ಶೇ.6.25ರಿಂದ ಶೇ.6ಕ್ಕೆ ಇಳಿಕೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.
Governor about to address press conference post release of first bi-monthly monetary policy #rbitoday #rbigovernor #monetary policy pic.twitter.com/ieHFecXF9y
— ReserveBankOfIndia (@RBI) April 4, 2019
ಇದರ ಪರಿಣಾಮ ಗೃಹಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗಲಿದ್ದು, ಸ್ವಂತ ಸೂರು ಹೊಂದುವ ಕನಸು ಕಾಣುತ್ತಿರುವವರಿಗೆ ಅನುಕೂಲವಾಗಲಿದೆ.
ಈ ಮೂಲಕ ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಇರುವ ದೇಶದ ಜನತೆಗೆ, ಗೃಹ ಹಾಗೂ ವಾಹನ ಸಾಲ ಪಡೆಯುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಿಹಿ ಸುದ್ದಿ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ