ಹಗರಿಬೊಮ್ಮನಹಳ್ಳಿ:
ದೇಶದ ಬಡವರ ವಿರೋಧಿಯಾಗಿರುವ ಬಿಜೆಪಿ ಪಕ್ಷವನ್ನು ಈ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ದೇಶ ಉಳಿಸಿ ಎಂದು ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿಯಾದ ಆರ್.ಎಸ್.ಬಸವರಾಜ್ ಕರೆ ನೀಡಿದರು.
ಪಟ್ಟಣದ ಗಂಗಾವತಿ ಭೀಮಪ್ಪನವರ ಧರ್ಮಛತ್ರದ ಆವರಣದಲ್ಲಿರುವ ಜನವಾದಿ ಮಹಿಳಾ ಸಂಘಟನಾ ಕಚೇರಿಯಬಳಿ, ಬುಧವಾರ ನಡೆದ ಸಿಪಿಐ(ಎಂ)ನಿಂದ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಸಲು ರಾಜಕೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ 2014ರಲ್ಲಿ ನೀಡಿದ ಅಶ್ವಾಸನೆಗಳಲ್ಲಿ ದೇಶದಲ್ಲಿ ಪ್ರತಿವರ್ಷ 2ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುತ್ತೇವೆ ಎಂದಿದ್ದರು, ಅವಧಿ ಪೂರ್ಣಗೊಳಿಸಿದರೂ ಉದ್ಯೋಗ ಸೃಷ್ಠಿಯಾಗಲಿಲ್ಲ.
ಅದರಂತೆ ದೇಶದ ಬಡತನದಲ್ಲಿರುವ ಜನರ ಖಾತೆಗೆ 15ಲಕ್ಷ ರೂ.ಗಳನ್ನು ಜಮಾ ಮಾಡಲಾಗುವುದೆಂದು ಭರವಸೆ ನೀಡಿದ್ದರು. ದೇಶದ ಬಡಜನರು ‘0’ಖಾತೆ ತೆರೆದರು. ಇಂದಿಗೂ ಯಾವ ಖಾತೆಗೆ ಹಣತುಂಬದೆ ಬಡವರನ್ನು ಹಾಸ್ಯಾಸ್ಪದಕ್ಕಿಟ್ಟುಕೊಂಡರು ಬಿಜೆಪಿಯವರು ಎಂದು ಟೀಕಿಸಿದರು.
ದೇಶದ ಆಡಳಿತ ನಡೆಸಿದ ಬಿಜೆಪಿ, ಬೆಲೆ ಏರಿಕೆಯ ಪೆಟ್ಟುನೀಡಿದ್ದು ಅಲ್ಲದೆ, ನೋಟು ಅಮಾನಿಕರಣಮಾಡಿದ ಬೆನ್ನಲ್ಲೆ, ನೋಟು ಬದಲಾವಣೆಗೆ ದೇಶದ ಯಾವೂಬ್ಬ ಶ್ರೀಮಂತ ಕ್ಯೂನಲ್ಲಿ ನಿಲ್ಲದೆ ಬಡವರು ಸರದಿ ಸಾಲಿನಲ್ಲಿ ನಿಂತ ಪ್ರಸಂಗದ ಜೊತೆ, ದೇಶದ 117ಜನರು ಮರಣಹೊಂದಿದರು.
ಇದನ್ನು ನೇರವಾಗಿ ನರೇಂದ್ರ ಮೋದಿಯವರೇ ಹೊಣೆಗಾರರೆಂದು ಆರೋಪಿಸಿದರು. ಈಗಾಗಲೇ ಶ್ರೀಮಂತರ ಮತ್ತು ಬಂಡವಾಳ ಶಾಹಿಗಳ ಪರವಾಗಿ ನಿಲ್ಲುವ ಬಿಜೆಪಿ ಮತ್ತು ನರೇಂದ್ರ ಮೋದಿಯಂತವರು ದೇಶದ ರೈತರ ಸಾಲಮನ್ನಾ ಮಾಡದೆ ಬಂಡವಾಳ ಶಾಹಿಗಳ 36ಸಾವಿರ ಕೋಟಿ ರೂ.ಗಳ ಸಾಲಮನ್ನಾ ಮಾಡಿದರು ಎಂದು ಆರೋಪಿಸಿದರಲ್ಲದೆ, ಬಿಜೆಪಿಗೆ ಮತನೀಡದೆ ದೇಶ ಉಳಿಸುವಂತ ಕೆಲಸಮಾಡಬೇಕಿದೆ ಎಂದರು.
ನಂತರ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಬಿ.ಮಾಳಮ್ಮ ಮಾತನಾಡಿ, ದೇವದಾಸಿ ಮಹಿಳೆಯರಿಗೆ ಮತ್ತು ಮಸಣ ಕಾರ್ಮಿಕರಿಗೆ ಜೀವನ ಭದ್ರತೆ ಮತ್ತು ಮಾಸಿಕ ವೇತನ ನೀಡುವಂತೆ ದೆಹಲಿಯವರೆಗೂ ಹೋಗಿ ಮನವಿ ನೀಡಿಬಂದರೂ ಯಾವುದೇ ವಿಷಯಗಳ ಬಗ್ಗೆ ಕಾಳಜಿ ತೋರದ ಬಿಜೆಪಿಗೆ ಮತನೀಡಬೇಡಿ ಎಂದರು.
ತಾಲೂಕು ಕಾರ್ಯದರ್ಶಿ ಜಗನ್ನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿ ನಾಟಕೀಯ ರಾಜಕೀಯಮಾಡುತ್ತಾರೆ. ಹೇಳುವುದೇ ಒಂದು ಮಾಡುವುದು ಮತ್ತೊಂದು. ಪೆಟ್ರೋಲ್ ಹಾಗೂ ಡಿಸೇಲ್ ಮತ್ತು ಸಿಲೆಂಡರ್ಗಳ ಬೆಲೆ ಏರಿಸಿ, ದಿನನಿತ್ಯದ ಎಲ್ಲಾ ವಸ್ತುಗಳ ಬೆಲೆ ಏರಲು ಕಾರಣರಾದ ಬಿಜೆಪಿ ದೇಶಕ್ಕೆ ಮಾರಕವಾಗಿದೆ ಎಂದು ಟೀಕಿಸಿದರು.
ಗೋ ರಕ್ಷಣೆಯ ನೆಪದಲ್ಲಿ ರಾಜಕೀಯಮಾಡುವವರು ಗೋಮಾಂಸ ರಪ್ತುಮಾಡುವಲ್ಲಿ ಬಿಜೆಪಿ ಮೊದಲಿಗೆಂದರೂ ತಪ್ಪಲ್ಲ ಎಂದರು. ದೇಶದ ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳುವ ಬಿಜೆಪಿ ಮನು ಸಂಸ್ಕತಿಯನ್ನು ಜಾರಿಗೆ ತರುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ದೇಶದ ಬಡಜನರು ಇದನ್ನು ಅರ್ಥಮಾಡಿಕೊಂಡು ಬಿಜೆಪಿಗೆ ಮತನೀಡಬಾರೆಂದು ಕೋರಿದರು.ಕೊಟಿಗಿ ಮಲ್ಲಿಕಾರ್ಜುನ ಮಾತನಾಡಿದರು. ಕೆ.ಗಾಳೆಪ್ಪ, ಹನುಮಂತಪ್ಪ, ಕೊರವರ ಬಸವರಾಜಪ್ಪ ಇದ್ದರು. ಚಾಂದ್ಬೀ ಹಾಗೂ ಮಲ್ಲಮ್ಮ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
