ಕಣ್ಣೀರಿಡುವರ ಪಕ್ಷಕ್ಕೆ ಅಭ್ಯರ್ಥಿಗಳೇ ಇಲ್ಲ

ದಾವಣಗೆರೆ:
 
      ಜೆಡಿಎಸ್ ಕಣ್ಣೀರಿಡುವವರ ಪಕ್ಷವಾಗಿದ್ದು, ಕಾಂಗ್ರೆಸ್ ಜೊತೆಗೆ ಹಗ್ಗ-ಜಗ್ಗಾಟ ಮಾಡಿದ ನಂತರ ಏಳು ಕ್ಷೇತ್ರ ಪಡೆದರೂ ಮಾಜಿ ಪ್ರಧಾನಿ ದೇವೇಗೌಡರಿಗೆ ಅಭ್ಯರ್ಥಿಗಳೇ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ, ದಾವಣಗೆರೆ ಕ್ಷೇತ್ರದ ಬಿಜೆಪಿ ಉಸ್ತುವಾರಿ ಆಯನೂರು ಮಂಜುನಾಥ ಟೀಕಿಸಿದ್ದಾರೆ.
      ನಗರದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಜೆಡಿಎಸ್ ಪಕ್ಷಕ್ಕೆ ಅಭ್ಯರ್ಥಿಗಳೇ ಇಲ್ಲದ್ದರಿಂದ ತಮ್ಮ ಮೊಮ್ಮಕ್ಕಳಿಬ್ಬರನ್ನೂ ಮಂಡ್ಯ, ಹಾಸನ ಕ್ಷೇತ್ರಕ್ಕೆ ಕಣಕ್ಕಿಳಿಸಿದ್ದಾರೆ. ದೇವೇಗೌಡರ ಕುಟುಂಬವೇ 7 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ ಎಂದು ವ್ಯಂಗ್ಯವಾಡಿದರು.
       ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೈಸೂರಿನಲ್ಲಿ ಸಿದ್ದರಾಮಯ್ಯನವರಿಗೆ ಬಗಣಿ ಗೂಟ ಇಟ್ಟವರು ಯಾರು ಎಂಬುದನ್ನು ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತಿರುವ, ಮೈತ್ರಿ ಪಕ್ಷಕ್ಕೆ ಮತ ಕೇಳುತ್ತಿರುವ ಸಿದ್ದರಾಮಯ್ಯನವರು ಅರಿಯಬೇಕೆಂದು ಸಲಹೆ ನೀಡಿದರು.
           ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕಾಗಿದೆ. ರಾಜ್ಯದಲ್ಲಿ ಕನಿಷ್ಟ 22 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು. ನಮ್ಮ ಶತೃಗಳನ್ನು ಚುನಾವಣೆಯಲ್ಲಿ ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂದರು.
ದಾವಣಗೆರೆ ಕ್ಷೇತ್ರದಿಂದ ಸತತ 3 ಸಲ ಗೆದ್ದಿರುವ ಸಂಸದ ಜಿ.ಎಂ.ಸಿದ್ದೇಶ್ವರಗೆ ನಾಲ್ಕನೇ ಸಲವೂ ಇಲ್ಲಿನ ಮತದಾರರು ಗೆಲ್ಲಿಸಿಕೊಂಡು ಬರಬೇಕು. ಕಾಂಗ್ರೆಸ್ ಪಕ್ಷ, ಜೆಡಿಎಸ್ ಪಕ್ಷದವರು ಇವತ್ತು ಯಾವ ರೀತಿ ಹೆದರಿದ್ದಾರೋ ಅದೇ ರೀತಿ ಮುಂದೆಯೂ ನಮ್ಮ ಪಕ್ಷಕ್ಕೆ ಹೆದರುವಂತಿರಬೇಕು. ನಮ್ಮ ಕಾರ್ಯಕರ್ತರು ಯಾವುದೇ ಚುನಾವಣೆಯಾಗಿದ್ದರೂ ಬಿಜೆಪಿ ಅಭ್ಯರ್ಥಿಗಳ ಗುರಿಯಾಗಿಟ್ಟುಕೊಂಡು, ಪಕ್ಷದ ಗೆಲುವಿಗೆ ಕೆಲಸ ಮಾಡಬೇಕೆಂದು ಕರೆ ನೀಡಿದರು. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link