ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಗೆ ಪ್ರಯತ್ನ

ಚಿತ್ರದುರ್ಗ

       ಪ್ರಸ್ತುತ ರಾಜಕೀಯ ವ್ಯವಸ್ಥೆಯೇ ಕೆಟ್ಟುಹೋಗಿದೆ. ಚುನಾಯಿತ ಪ್ರತಿನಿಧಿಗಳು ತಮ್ಮ ಕರ್ತವ್ಯಗಳನ್ನು ಮರೆತು ಸ್ವಾರ್ಥಕ್ಕಾಗಿ ರಾಜಕಾರಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ವ್ಯವಸ್ಥೆಯನ್ನು ಬದಲಾಯಿಸಲು ಹೋರಾಟ ನಡೆಸುವ ಉದ್ದೇಶಕ್ಕಾಗಿಯೇ ರಾಜಕೀಯ ಪಕ್ಷ ಸ್ಥಾಪಿಸಿರುವುದಾಗಿ ಚಿತ್ರ ನಟ ಹಾಗೂ ಪ್ರಜಾಕೀಯ ಪಕ್ಷದ ಮುಖ್ಯಸ್ಥ ಉಪೇಂದ್ರ ಹೇಳಿದ್ದಾರೆ

         ಪ್ರಜಾಪ್ರತಿನಿಧಿಗಳು ನಾವು ಸಂಬಳ ಕೊಡುತ್ತಿದ್ದೇವೆ ಎಂಬುದನ್ನ ಮರೆತಿದ್ದಾರೆ ನಾವು ಮತ್ತೆ ಬ್ರಿಟೀಷರ ಕಾಲಕ್ಕೆ ತಲುಪಿದ್ದೇವೆ 20% ಪವರ್ ಫುಲ್ ವ್ಯಕ್ತಿಗಳು ಚುನಾವಣೆಗೆ ನಿಲ್ಲುತ್ತಿದ್ದಾರೆ. ಹಣ ತೋಳ್ಬಲ ಉಳ್ಳವರು ಮಾತ್ರ ಚುನಾವಣೆಗೆ ಸ್ಪರ್ಧಿಸುವಂತ ವಾತಾವರಣ ನಿರ್ಮಾಣ ಮಾಡಿದ್ದಾರೆ ಹೀಗಾಗಿ ರಾಜಕೀಯದಲ್ಲಿ ಬದಲಾವಣೆ ಅನಿವಾರ್ಯವೆಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು

       ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯುವ ಸಲುವಾಗಿಯೇ ಸುಳ್ಳುಗಳಿಂದ ಕೂಡಿದ, ಜನರನ್ನು ಭ್ರಮೆಯಲ್ಲಿ ತೇಲಿಬಿಡುವ ನಾನಾ ನಮೂನೆಯ ತಂತ್ರಗಾರಿಕೆಯ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತಿವೆ. ಆದರೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ಪಕ್ಷಗಳು ಪ್ರಣಾಳಿಕೆಯನ್ನೆ ಮರೆತು ಬಿಡುತ್ತಾರೆ. ಹೀಗಾಗಿ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ನ್ಯಾಯಾಲಯದಲ್ಲಿ ನೊಂದಣಿಯಾಗಬೇಕು. ಕೊಟ್ಟ ಭರವಸೆ ಈಡೇರದಿದ್ದರೆ ಅವರಿಗೆ ಕೊಟ್ಟ ಅಧಿಕಾರವನ್ನು ವಾಪಸ್ಸು ಪಡೆಯುವ ವ್ಯವಸ್ಥೆ ಜಾರಿಯಾಗಬೇಕು ಎಂದು ಆಗ್ರಹಿಸಿದರು

       ನಿಮ್ಮ ನಡುವಿನ ಸಾಮಾನ್ಯ ವ್ಯಕ್ತಿಗಳನ್ನ ನಮ್ಮ ಪಕ್ಷದಿಂದ ಚುನಾವಣೆಗೆ ನಿಲ್ಲಿಸಿದ್ದೇವೆ ನಮ್ಮ ಪಕ್ಷದ ಧ್ಯೇಯೆಗಳನ್ನ ಜನರಿಗೆ ತಲುಪಿಸುವ ಕೆಲಸ ಸಾಕಷ್ಟಿದೆ ಹೀಗಾಗಿ ಚುನಾವಣೆಗೆ ನಾನು ಸ್ಪರ್ಧೆ ಮಾಡುತ್ತಿಲ್ಲ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ ಜನಪ್ರತಿನಿಧಿಗಳು ಸಂಬಳ ಪಡೆದು ಕೆಲಸ ಮಾಡುತ್ತಿದ್ದಾರೆ ಅವರು ಅದನ್ನ ಸೇವೆ ಎಂಬ ಹೆಸರಿನಲ್ಲಿ ಕರೆಯುತ್ತಾರೆ ರಾಜಕೀಯ ನನಗೆ ವೃತ್ತಿಯೂ ಅಲ್ಲ, ಪ್ರವೃತ್ತಿಯೂ ಅಲ್ಲ ಕರ್ತವ್ಯರೈತರಪರ ಯೋಜನೆಗಳು ಬರಲು ಕಾನೂನುಗಳು ಬರಬೇಕು ಯಾವುದೇ ನಾಯಕನಿಂದ ಯೋಜನೆಗಳು ಬರುವುದಿಲ್ಲ ಎಂದು ಉಪೇಂದ್ರ ತಿಳಿಸಿದರು

        ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ದೇವೇಂದ್ರಪ್ಪ ಪರ ಪ್ರಚಾರದ ವೇಳೆ ಪ್ರಚಾರ ಮಾಡಿದ ಉಪೇಂದ್ರ ಬದಲಾವಣೆಗಾಗಿ ನಾನು ನಂಬಿರುವುದು ಮಾಧ್ಯಮ ಮತ್ತು ಸತ್ಯವನ್ನಖಂಡಿತಾ ಮಾಧ್ಯಮಗಳು ಮನಸ್ಸು ಮಾಡಿದರೆ ಈ ವ್ಯವಸ್ಥೆ ಬದಲಾಗುತ್ತದೆನಾನು ಮನಸ್ಸು ಮಾಡಿದರೆ ರೀಲ್ ನಲ್ಲಿ ಸಿನಿಮಾ ಮಾಡಬಹುದು ಜನರು ಮನಸ್ಸು ಮಾಡಿದರೆ ರೀಯಲ್ ಬದಲಾವಣೆ ಮಾಡಬಹುದುನಮ್ಮ ಅಭ್ಯರ್ಥಿಗಳಿಗೆ ಜನರು ಕೆಲಸ ಕೊಟ್ಟರೆ ಮಾಡುತ್ತಾರೆ, ಇಲ್ಲದಿದ್ದರೆ ಬೇರೆ ಕೆಲಸ ಮಾಡುತ್ತಾರೆ.ರಾಜಕೀಯ ಬದಲಾದರೆ ಮಾತ್ರ ದೇಶ ಬದಲಾಗುತ್ತದೆಮೈಕ್ ಮೂಲಕ ಒಬ್ಬರನ್ನೊಬ್ಬರು ಟೀಕಿಸುವುದು ಪ್ರಚಾರ ಅಲ್ಲ ನಮ್ಮ ಸಿದ್ದಾಂತಗಳನ್ನು ಒಪ್ಪುವ ಯುವಕರು ನಮ್ಮ ಅಭ್ಯರ್ಥಿಗಳ ಪ್ರಚಾರ ಮಾಡುತ್ತಾರೆ.ಹೇಳಿದರು.

        ಇದೇ ಸಂದರ್ಭದಲ್ಲಿ ಕೋಟೆನಾಡಿನಲ್ಲಿ ಪ್ರಜಾಕೀಯ ಪಕ್ಷದ ಪರ ನಟ ಉಪೇಂದ್ರ ಪ್ರಚಾರಹೊಸದುರ್ಗ, ಹೊಳಲ್ಕೆರೆ ಚಿತ್ರದುರ್ಗ ಸೇರಿದಂತೆ ವಿವಿದೆಡೆ ರೋಡ್ ಶೋ ನಡೆಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap