ಪಾವಗಡ
ಪರಿಸರವನ್ನು ಸಂರಕ್ಷಣೆ ಮಾಡುವುದು ಸಮಾಜದ ಎಲ್ಲರ ಹೊಣೆ ಎಂದು ತಿರುಮಣಿಯ ಟಾಟಾ ಸೋಲಾರ್ ಕಂಪನಿಯ ಮ್ಯಾನೇಜರ್ ಹರಿಕೃಷ್ಣ ತಿಳಿಸಿದರು.ಗುರುವಾರ ತಿರುಮಣಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವನ್ಯಜೀವಿಗಳ ಸಂರಕ್ಷಣೆ ಮತ್ತು ಪರಿಸರ ಜಾಗೃತಿಯ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾವಗಡ ತಾಲ್ಲೂಕು ಅತಿ ಕಡಿಮೆ ಬೀಳುವ ಪ್ರದೇಶವಾಗಿದ್ದು, ಬೆಟ್ಟಗುಡ್ಡಗಳಿಂದ ಕೂಡಿದ್ದು, ಬರಪೀಡಿತ ತಾಲ್ಲೂಕಾಗಿದೆ. ತಾಲ್ಲೂಕಿನಾದ್ಯಂತ ಖಾಲಿ ಇರುವ ಸ್ಥಳದಲ್ಲಿ ಗಿಡಮರಗಳನ್ನು ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕು. ಬೇಸಿಗೆ ಕಾಲದಲ್ಲಿ ಕೆಲವರು ಬೆಟ್ಟಗುಡ್ಡಗಳಿಗೆ ಬೆಂಕಿ ಇಡುತ್ತಾರೆ. ಇದರಿಂದ ಪರಿಸರ ನಾಶವಾಗುತ್ತದೆ, ಅಲ್ಲದೆ ಪ್ರಾಣಿ-ಪಕ್ಷಿಗಳ ಜೀವಕ್ಕೆ ಹಾನಿಯಾಗುತ್ತದೆ ಎಂದು ತಿಳಿಸಿದರು.
ಮರ ಬೆಳೆಸಿ ನಾಡು ಉಳಿಸಿ, ಕಾಡಿಗೆ ಬೆಂಕಿ ಹಚ್ಚುವುದನ್ನು ನಿಲ್ಲಿಸಿ, ಪ್ರಾಣಿ- ಪಕ್ಷಿ ಹಾಗೂ ಪ್ರಾಕೃತಿಕ ಸಂಪತ್ತನ್ನು ರಕ್ಷಿಸಿ ಎಂಬ ಸಂದೇಶಗಳನ್ನು ಸಾರುವ ಭಿತ್ತಿಪತ್ರಗಳೊಂದಿಗೆ ಜಾಥಾ ನಡೆಸಲಾಯಿತು.ಸಿಬ್ಬಂದಿ ಮಾರುತಿ, ಪಾಂಡುರಂಗರಾವ್, ಶಿವಪ್ರಸಾದ್, ದೇವದಾಸ್ ಭಟ್, ಪಂತಜ್ಪಡೀಯಾ, ಬಾಲು ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
