ಬೆಂಗಳೂರು
ಅತ್ತೆ, ಸೊಸೆ ಜೋಡಿ ಕೊಲೆಗೂ ಮುನ್ನ ಸಹಚರನ ಜೊತೆ ಸೇರಿ 9ಕ್ಕೂ ಹೆಚ್ಚು ಕಡೆಗಳಲ್ಲಿ ಮನೆಗಳವು ಮಾಡಿದ್ದ ಕುಖ್ಯಾತ ಮನೆಗಳ್ಳ ಮನೀಸ್ ಸೇರಿ ಇಬ್ಬರು ಮನೆಗಳ್ಳರನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಇದಲ್ಲದೇ ಆಂಂಧ್ರಪ್ರದೇಶ ಮೂಲದ ಮೂವರು ಅಂತರಾಜ್ಯ ಕಳ್ಳರನ್ನು ಬಂಧಿಸಿ, 69.60 ಲಕ್ಷ ರೂ. ಮೌಲ್ಯದ 2 ಕೆಜಿ 320 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಲಯ ಎಂದು ಐಜಿಪಿ ಶರತ್ ಚಂದ್ರ ತಿಳಿಸಿದ್ದಾರೆ.
ರಾಜಸ್ತಾನ ಮೂಲದ ರಾಮಮೂರ್ತಿ ನಗರದ ಮನೀಸ್ ಅಲಿಯಾಸ್ ರಮೇಶ್ (32), ತಮಿಳುನಾಡು ಹೊಸೂರಿನ ಗಣೇಶ್ ಅಲಿಯಾಸ್ ಗಣಿ (24) ಹಾಗೂ ಬಾಗೆಪಲ್ಲಿಯ ಕೊಟ್ಟಂಪಲ್ಲಿಯ ಉಮಾಶಂಕರ್ (30), ತಿರುಪತಿಯ ರಮೇಶ್ ಅಲಿಯಾಸ್ ಮದೂಸೂಧನ್ (30), ಪ್ರಕಾಶಂ ಜಿಲ್ಲೆಯ ರತ್ತಯ್ಯ (22) ಬಂಧಿತ ಆರೋಪಿಗಳಾಗಿದ್ದಾರೆ.
ಕೊಲೆಗಿಂತ ಮುನ್ನ ಕೃತ್ಯ
ಹೆಬ್ಬಗೋಡಿಯ ಪೆÇಲೀಸರು ಹೈಗ್ರೌಂಡ್ಸ್ನಲ್ಲಿ ನಡೆದಿದ್ದ ಅತ್ತೆ – ಸೊಸೆ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಮನೀಸ್ನನ್ನು ವಶಕ್ಕೆ ತೆಗೆದುಕೊಂಡು ಆತ ಮತ್ತೊಬ್ಬ ಆರೋಪಿ ಗಣೇಶ್ ಜೊತೆ ಸೇರಿ ಜೋಡಿ ಕೊಲೆ ಕೃತ್ಯದಲ್ಲಿ ಜೈಲಿಗೆ ಹೋಗುವ ಮುನ್ನ 2016 ರಲ್ಲಿ ಹೆಬ್ಬಗೋಡಿಯ 6, ಸೂರ್ಯನಗರ, ಆನೇಕಲ್, ಹೊಸಕೋಟೆಯ ತಲಾ 1 ಸೇರಿ 9 ಕಡೆಗಳಲ್ಲಿ ಮನೆಗಳವು ನಡೆಸಿದ ಕೃತ್ಯಗಳನ್ನು ಬೇಧಿಸಿದ್ದಾರೆ
ಬಂಧಿತ ಇಬ್ಬರು ಆರೋಪಿಗಳಿಂದ ಮನೆಗಳವು ಮಾಡಿದ್ದ 54 ಲಕ್ಷ 60 ಸಾವಿರ ರೂ. ಮೌಲ್ಯದ 1 ಕೆಜಿ 820 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದರು.
ಅತ್ತಿಬೆಲೆ ವೃತ್ತದ ಪೊಲೀಸರು, ಸರ್ಜಾಪುರ, ಅತ್ತಿಬೆಲೆ, ಹೆಬ್ಬಗೋಡಿಗಳಲ್ಲಿ ಮನೆಗಳವು ಮಾಡಿದ್ದ ಉಮಾಶಂಕರ್, ರಮೇಶ್ ಹಾಗೂ ರತ್ತಯ್ಯ ಎಂಬ ಅಂತಾರಾಜ್ಯ ಕಳ್ಳರಿಂದ 15 ಲಕ್ಷ ರೂ. ಮೌಲ್ಯದ 500 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಸರ್ಜಾಪುರದ 2, ಹೆಬ್ಬಗೋಡಿ, ಅತ್ತಿಬೆಲೆಯ ತಲಾ ಒಂದು ಸೇರಿ, ನಾಲ್ಕು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಿದರು.