ಬೆಂಗಳೂರು:
ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಅವರ ಪತ್ನಿಯೇ ಶ್ರೀಮಂತರಾಗಿದ್ದಾರೆ. ಲೋಕಸಭಾ ಚುನಾವಣೆ ನಾಮಪತ್ರದ ವೇಳೆ ತಮ್ಮ ಆಸ್ತಿಯ ವಿವರವನ್ನು ಖರ್ಗೆ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಿನಲ್ಲಿ 1.36 ಕೋಟಿ ರೂ. ಚರಾಸ್ತಿ ಹಾಗೂ 44.07 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. 6.31 ಕೋಟಿ ರೂ. ಮೌಲ್ಯದ ಒಂದು ಮನೆ, 7.90 ಲಕ್ಷ ರೂ. ಮೌಲ್ಯದ 255 ಗ್ರಾಂ ಚಿನ್ನಾಭರಣ, 2.40 ಲಕ್ಷ ರೂ. ಮೌಲ್ಯದ 6 ಕೆಜಿ ಬೆಳ್ಳಿ ಆಭರಣ ಹೊಂದಿರುವದಾಗಿ ಘೋಷಿಸಿಕೊಂಡಿದ್ದಾರೆ.
ತಮ್ಮ ಹೆಸರಿನಲ್ಲಿ ವಿವಿಧ ಬ್ಯಾಂಕ್‍ಗಳಲ್ಲಿ 10 ಲಕ್ಷ ರೂ. ಸಾಲ ಕೂಡಾ ಹೊಂದಿದ್ದಾಗಿ ತಿಳಿಸಿದ್ದಾರೆ.ಇನ್ನು ಇವರ ಪತ್ನಿ ರಾಧಾಭಾಯಿ ಅವರ ಹೆಸರಲ್ಲಿ 1 ಕೋಟಿ ರೂ. ಚರಾಸ್ತಿ, 17.98 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ. 6.31 ಕೋಟಿ ರೂ. ಮೌಲ್ಯದ ಒಂದು ಮನೆ, 24.95 ಲಕ್ಷ ರೂ. ಮೌಲ್ಯದ 805 ಗ್ರಾಂ ಚಿನ್ನಾಭರಣ, 4.40 ಲಕ್ಷ ರೂ. ಮೌಲ್ಯದ 11 ಕೆಜಿ ಬೆಳ್ಳಿ ಆಭರಣ, 44.08 ಲಕ್ಷ ರೂ. ಮೌಲ್ಯದ ಭೂಮಿ ಹೊಂದಿರುವದಾಗಿ ಘೋಷಿಸಿದ್ದಾರೆ.
ಅಲ್ಲದೆ ರಾಧಾಬಾಯಿ ಅವರ ಹೆಸರಿನಲ್ಲಿ ವಿವಿಧ ಬ್ಯಾಂಕ್‍ಗಳಲ್ಲಿ 21.22 ಲಕ್ಷ ರೂ. ಸಾಲ ಮಾಡಿದ್ದಾಗಿ ಅಫಿಡವಿಟ್‍ನಲ್ಲಿ ತಿಳಿಸಿದ್ದಾರೆ. ಒಟ್ಟಾರೆ ಪತಿ ಖರ್ಗೆಗಿಂತ ರಾಧಾಬಾಯಿ ಶ್ರೀಮಂತರಿದ್ದಾರೆ.