ದೇವೇಗೌಡರಿಗೆ ಕುಚಿಟಿಗ ಸಮಾಜದಿಂದ ಮನವಿ..!!

ಕೊರಟಗೆರೆ;-

        ಕುಂಚಿಟಿಗ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕೆಂದು ಕುಂಚಿಟಿಗ ಸಮಾಜದ ಮಾಜಿ ಸಚಿವ ಟಿ.ಬಿ ಜಯಚಂದ್ರ, ಶಾಸಕ ವೀರಭದ್ರಯ್ಯ ಮತ್ತು ಮುರುಳಿಧರ ಹಾಲಪ್ಪನವರು ಮಾಜಿ ಪ್ರಧಾನಿ ದೇವೆಗೌಡರಲ್ಲಿ ಮನವಿ ಪತ್ರ ನೀಡಿದರು.

    ಮಾಜಿ ಪ್ರಧಾನಿ ದೇವೆಗೌಡರು ತುಮಕೂರು ಲೋಕಸಭಾ ಕ್ಷೇತ್ರದ ಪ್ರಚಾರ ಕಾರ್ಯದಲ್ಲಿ ಏಪ್ರಿಲ್ 5 ರಂದು ಮಧುಗಿರಿ ವಿಧಾನಸಭಾ ಕ್ಷೇತ್ರದ ಪ್ರಚಾರದಲ್ಲಿ ಮಧುಗಿರಿ ಪಟ್ಟಣದಲ್ಲಿ ಕಾರ್ಯಕ್ರಮ ಮುಗಿಸಿ ಮಾರ್ಗ ಮದ್ಯೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರದ ನರಸಿಂಹಗಿರಿ ಕ್ಷೇತ್ರದ ಕುಂಚಿಟಿಗ ಮಹಾಸಂಸ್ಥಾನಕ್ಕೆ ಬೇಟಿ ನೀಡಿದರು.

      ನಂತರ ದೇವೇಗೌಡರು ಸಂಸ್ಥಾನದ ಪೀಠಾಧ್ಯಕ್ಷರಾದ ಹನುಮಂತನಾಥ ಸ್ವಾಮೀಜಿಯ ಆರ್ಶಿವಾದ ಪಡೆದ ಸಂದರ್ಭದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ದೇವೇಗೌಡರಿಗೆ ಆರ್ಥಿಕವಾಗಿ ಹಿಂದುಳಿದಿರುವ ಕುಂಚಿಟಿಗ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಮತ್ತು ಎಲೆರಾಂಪುರ ನರಸಿಂಹಗಿರಿ ಕ್ಷೇತ್ರವನ್ನು ಅಭಿವೃದ್ದಿ ಗೊಳಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link