ದಾವಣಗೆರೆ:
ವಿಶೇಷ ಚೇತನ ಮಕ್ಕಳು ಸೇರಿ ಅಭಿನಯಿಸಿರುವ `ವಿರೂಪ’ ಚಿತ್ರವು ಏ.12ರಂದು ರಾಜ್ಯದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಪುನೀಕ್ ಶೆಟ್ಟಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿವುಡ, ಮೂಗ, ಅಂಧ ಮಕ್ಕಳೇ ಈ ಚಿತ್ರದಲ್ಲಿ ಅಭಿನಯಿಸಿದ್ದು, ಮಕ್ಕಳ ಪ್ರತಿಭೆಗೆ ಕಿಂಚತ್ತೂ ಧಕ್ಕೆ ಬಾರದಂತೆ ಮೂವರು ಬಾಲಕರು ಅಭಿನಯಿಸಿದ್ದಾರೆ. ಈ ಚಿತ್ರವು ಸಂಪೂರ್ಣವಾಗಿ ಹಂಪಿಯಲ್ಲೇ ಕಲಾತ್ಮಕವಾಗಿ ಚಿತ್ರಿಕರಣಗೊಂಡಿದೆ ಎಂದು ಹೇಳಿದರು.
ನಗರ ಮತ್ತು ಹಳ್ಳಿ ಮಕ್ಕಳ ಜೀವನದ ಜೊತೆಗೆ ರಜೆಯ ಸಮಯದಲ್ಲಿ ಮಕ್ಕಳ ಜೀವನ ಹೇಗೆ ಇರಬೇಕು, ಮಕ್ಕಳನ್ನು ಮುಕ್ತವಾಗಿ ಬೆಳೆಯಲು ಯಾವ ರೀತಿಯಾಗಿ ಅವಕಾಶ ಸೃಷ್ಟಿಸಿಕೊಡಬೇಕೆಂಬ ಉದ್ದೇಶದಿಂದ ಕಣ್ಣು ಕಾಣಿಸದ, ಕಿವಿ ಕೇಳಿಸದ, ಮಾತು ಬಾರದ ಇಬ್ಬರು ಮಕ್ಕಳು, ಮಕ್ಕಳ ಪ್ರತಿಭೆಗೆ ಕಿಂಚತ್ತೂ ಕೊರತೆ ಮತ್ತೋರ್ವ ಬಾಲಕನ ಸುತ್ತುವರಿದ ಕಥೆ ಇದಾಗಿದೆ ಎಂದು ಮಾಹಿತಿ ನೀಡಿದರು.
ಮಕ್ಕಳು, ಚಿತ್ರದ ಕಥೆ, ಚಿತ್ರಿಕರಣದ ಸ್ಥಳಗಳೇ ಚಿತ್ರದ ಹಿರೋ. ಇಲ್ಲಿ ಸ್ಟಾರ್ ನಟ-ನಟಿಯರು ಇಲ್ಲ. ಓದುತ್ತಾ, ಆಟವಾಡುತ್ತಾ ಕಾಲ ಕಳೆಯುವ, ಹುಮ್ಮಸ್ಸಿನ ಮಕ್ಕಳನ್ನು ಸೇರಿಸಿಕೊಂಡು ಹಾಗೂ ಹಂಪಿ ನೋಡಲು ಬರುವ ವಿದೇಶಿ ಪ್ರವಾಸಿಗರನ್ನು ಸಹ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಹಂಪಿಯ ಪರಿಚಯಿಸುವ ಎರಡು ಹಾಡುಗಳು ಇವೆ. ಪ್ರದೀಪ್ ಮುಳ್ಳೂರು ಸಂಗೀತ ನೀಡಿದ್ದಾರೆ. ಅನಂತರಾಜ್ ಅರಸ್ ಛಾಯಾಗ್ರಹಣ ಮಾಡಿದ್ದಾರೆಂದು ಹೇಳಿದರು.
ನನ್ನ ನಿರ್ದೇಶನದ ಹಾಗೂ ಡುಬೋಯ್ಸ್ ಪ್ರೊಡಕ್ಷನ್‍ನ ಡ್ಯಾಫ್ನಿ ನೀತುಡಿಸೋಜ, ಕಾರ್ಯಕಾರಿ ನಿರ್ಮಾಪಕರಾದ ಜಾಕಿಡಿಸೋಜ ಅವರ ಮೊದಲ ಚಿತ್ರ ಇದಾಗಿದೆ ಸಂಭಾಷಣೆ ಹೇಳುವಾಗಲೇ ಧ್ವನಿಮುದ್ರಿಸಿಕೊಳ್ಳುವ ತಂತ್ರಗಾರಿಕೆಯನ್ನು ಚಿತ್ರದಲ್ಲಿ ಮಾಡಲಾಗಿದೆ ಎಂದರು.
ಹಿರಿಯ ರಂಗ ಕಲಾವಿದೆ ನಾಗರತ್ನಮ್ಮ ಮಾತನಾಡಿ, ಕಣ್ಣು ಕಾಣದ, ಕಿವಿ ಕೇಳದ, ಮಾತು ಬಾರದ ಮಕ್ಕಳೊಂದಿಗಿನ ಈ ಚಿತ್ರ ವಿಭಿನ್ನವಾಗಿ ಮೂಡಿ ಬಂದಿದೆ. ಮಕ್ಕಳು ಅದ್ಬುತವಾಗಿ ನಟಿಸಿದ್ದಾರೆ. ಇಂತಹ ಚಿತ್ರಗಳಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ರಂಗಕಲಾವಿದ ಚಂದ್ರಶೇಖರ್, ಮಂಜುನಾಥ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
