ಮಧುಗಿರಿ
ನಾನು ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಅಡ್ಡಿಮಾಡಿಲ್ಲ, ಇದು ನನ್ನ ವಿರೋಧಿಗಳು ಮಾಡುತ್ತಿರುವ ಆರೋಪ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ತಿಳಿಸಿದರು.ಪಟ್ಟಣದ ಎಚ್.ಎಸ್.ಆರ್. ಸಮುಧಾಯ ಭವನದಲ್ಲಿ ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ಮೈತ್ರಿ ಚುನಾವಣಾ ಪ್ರಚಾರದ ಕಾರ್ಯಕರ್ತರ ಜಂಟಿ ಸಭೆಯಲ್ಲಿ ಮಾತನಾಡಿದ ಅವರು ನಾನು ನೀರಾವರಿಯ ಪ್ರಭಲ ಹೊರಾಟಗಾರ, ನನ್ನ ಮೇಲೆ ಮಾಡಿರುವ ಆರೋಪದಿಂದ ನನಗೆ ತುಂಬಾ ನೋವಾಗಿದೆ.
ನಾನು ಯಾರ ಬಗ್ಗೆಯೂ ಹಗುರವಾಗಿ ಮಾತನಾಡಲ್ಲ, ಟೀಕೆ ಮಾಡಲ್ಲ ಎಂದು ತಿಳಿಸಿದ ಅವರು ಸಿದ್ದರಾಮಯ್ಯನವರ ಮನವಿಯಂತೆ ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟು ಕೊಟ್ಟಿದ್ದರಿಂದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಾನು ಪ್ರತಿನಿಧಿಸಬೇಕಾಯಿತು. ಫೇಸ್ ಬುಕ್ ಟ್ವಿಟರ್ ಮುಂತಾದ ಸಾಮಾಜಿಕ ಜಾಲ ತಾಣಗಳಲ್ಲಿ ಮೋದಿಯ ಬಗ್ಗೆ ಯುವಕರ ತಲೇ ತುಂಬಲಾಗುತ್ತಿದೆಯೇ ಹೊರತು ಅವರ ಸಾಧನೆ ಎನೂ ಇಲ್ಲ ದೇಶದಲ್ಲಿ ಬಿ.ಜೆ.ಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಶಾಂತಿ ಕಾಣದಂತಾಗಿದೆ ಎಂದರು.
ಉಪಮುಖ್ಯಮಂತ್ರಿ ಡಾ|| ಜಿ. ಪರಮೇಶ್ವರ ಮಾತನಾಡಿ ರೈತರ-ಬಡವರ- ಮಹಿಳೆಯರ ಅಭಿವೃದ್ದಿ ಸಾಧಿಸುವ ನಿಟ್ಟಿನಲ್ಲಿ ಮತ್ತು ಕೋಮುವಾದಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಾರದೆಂಬ ಉದ್ದೇಶದಿಂದ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಮೈತ್ರಿ ಸರ್ಕಾರ ರಚಿಸಲಾಯಿತು. ನರೇಂದ್ರ ಮೋದಿ ಈ ದೇಶ ಕಂಡ ಮಹಾನ್ ಸುಳ್ಳುಗಾರ, ವಾರ್ಷಿಕ ಎರಡು ಕೋಟಿ ಉಧ್ಯೋಗ ಸೃಷ್ಠಿಸುತ್ತೇನೆ ಎಂದು ಹೇಳಿದವರು ಇಂದು ಉದ್ಯೋಗ ಸೃಷ್ಠಿಸದೇ ಇದ್ದಾರೆ ನಿರೋದ್ಯೋಗಿಗಳ ಬಳಿ ಕ್ಷಮೇ ಕೆಳಬೇಕು ಎಂದರು.
ಬಿ.ಜೆ.ಪಿ ಯವರಿಗೆ ಆರ್.ಎಸ್.ಎಸ್. ಸಿಂದ್ಧಾಂತವಾದರೆ ನಮಗೆ ಗಾಂಧಿ ಅಂಬೇಡ್ಕರ್ ಸಿಂದ್ಧಾಂತ ನರೇಂದ್ರ ಮೋಧಿ ಆಡಳಿತದಲ್ಲಿ ಅರ್ಥಿಕ ಹಿನ್ನೆಡೆ ಮತ್ತು ರೈತರ ಸಮಸ್ಯೆ ಹೆಚ್ಚಾಗಿದೆ ಎಂದರು.ಮೂರು ಭಾರಿ ಕಾಂಗ್ರೆಸ್ ನಿಂದ ಲೋಕಸಭಾ ಸದಸ್ಯರಾಗಿ ಅಯ್ಕೆಯಾದ ಜಿ.ಎಸ್. ಬಸವರಾಜು ಮಾಡಿರುವ ಕೊಡುಗೆಯಾದರು ಎನೂ ಎಂದು ಪ್ರಶ್ನಿಸಿದರು.
ಸಣ್ಣ ಕೈಗಾರಿಕ ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಜಿ.ಎಸ್ ಬಿ. ಸಹವಾಸ ತೊರೆದಾಗಿನಿಂದ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದಾನೆ. ಜಿಲ್ಲೆಯ ಜನರನ್ನು ಯಾಮಾರಿಸುವುದರಲ್ಲಿ ನಿಸ್ಸೀಮ, ಸುಳ್ಳು ಹೇಳುವವರಿಗೆ ಯಾವುದಾದರೂ ಪ್ರಶಸ್ತಿ ನೀಡುವಂತಿದ್ದರೆ ಅದು ಜಿ.ಎಸ್.ಬಸವರಾಜುಗೆ ಸಲ್ಲುತ್ತದೆ ಏಕೆಂದರೆ ಬಸವರಾಜು ಮಹಾನ್ ಸುಳ್ಳುಗಾರ. ಇವರು ಶನಿ ಇದ್ದಹಾಗೆ, ಇವರ ರಾಜಕೀಯ ಸಂಪೂರ್ಣ ಕುತಂತ್ರದಿಂದ ಕೂಡಿರುವ ರಾಜಕಾರಣ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬೆಮಲ್ ಕಾಂತರಾಜು, ತೂಪಲ್ಲಿ ಚೌಡರೆಡ್ಡಿ, ಶಾಸಕ ಎಂ.ವಿ.ವೀರಭದ್ರಯ್ಯ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದ ಶಫೀ ಅಹಮದ್, ಕೆ.ಷಡಕ್ಷರಿ, ಜಿಪಂ ಅಧ್ಯಕ್ಷೆ ಲತಾರವಿಕುಮಾರ್ ಮಾಜಿ ಶಾಸಕರದ ತಿಮ್ಮರಾಯಪ್ಪ, ಸುಧಕರಲಾಲ್, ಆರ್. ನಾರಾಯಣ್, ಷಡಕ್ಷರಿ, ಮುಖಂಡರಾದ ರಫೀಕ್ ಆಹಮದ್, ಮುರುಳಿಧರ ಹಾಲಪ್ಪ, ಸುವರ್ಣಮ್ಮ, ಕೊಂಡವಾಡಿ ಚಂದ್ರಶೇಖರ್, ತುಂಗೋಟಿರಾಮಣ್ಣ, ಎಂ.ಎಲ್.ಗಂಗರಾಜು, ಮೋಹನ್ ಕುಮಾರ್, ಚಂದ್ರಶೇಖರ್ ಗೌಡ, ಎಂ.ಆರ್. ಜಗನ್ನಾಥ್, ಕೆ.ನಾರಾಯಣ್, ಇನ್ನು ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
