ಚಿತ್ರದುರ್ಗ
ಮನುಷ್ಯ ಆದಷ್ಟು ದೂಮಪಾನ, ಮದ್ಯಪಾನ, ತಂಬಾಕು ಸೇವನೆಗಳನ್ನ ತ್ಯೆಜಿಸಿದರೆ, ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಗಳನ್ನ ಕಾಣಲು ಸಾದ್ಯ, ಎಲ್ಲರಿಗೂ ಆರೋಗ್ಯ ಎಂಬ ಸೂತ್ರ ಯಶಸ್ವಿಯಾಗಬೇಕಾದರೆ ದುಶ್ಚಟಗಳಿಂದ ದೂರವಿರಬೇಕಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ರ್ತಮಠ ಹೇಳಿದರು
ಇಲ್ಲಿನ ಜೋಗಿಮಟ್ಟಿ ರಸ್ತೆ ವೃತ್ತದಲ್ಲಿ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ, ವಕೀಲರ ಸಂಘ, ಆರೋಗ್ಯ ಇಲಾಖೆ, ಆಯುಷ್ಯ ಇಲಾಖೆ, ನಗರ ಸಭೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಚಿತ್ರದುರ್ಗ ವಿಜ್ಞಾನ ಕೇಂದ್ರ, ಬ್ರಹ್ಮಕುಮಾರಿ ಈಶ್ವರಿ ಸಂಸ್ಥೆ, ರೋಟರಿ, ಇನ್ನರ್ ವೀಲ್, ಲಯನ್ಸ ಕ್ಲಬ್, ವಾಸವಿ ಮಹಿಳಾ ಸಂಘವತಿಯಿಂದ ಆಯೋಜಿಸಿದ್ದ“ವಿಶ್ವ ಆರೋಗ್ಯ ದಿನಾಚರಣೆ” ಪ್ರಯುಕ್ತ “ನಮ್ಮ ನೆಡೆ ಆರೋಗ್ಯದೆಡೆಗೆ” ಜನ ಜಾಗೃತಿ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಾಣಿಗಳು ಸಹ ಸೇವಿಸದಂತಹ ತಂಬಾಕು, ಮದ್ಯಪಾನಗಳನ್ನ ಮನುಷ್ಯ ಸೇವಿಸುತ್ತಿರುವುದು ವಿಷಾದನೀಯ, ಆರೋಗ್ಯಕ್ಕಾಗಿ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದೆ, ಜನರು ಹೆಚ್ಚಿನ ಕಾಳಜಿ ವಹಿಸಿ, ಆರೋಗ್ಯ ಸುಧಾರಿಸಿಕೋಳ್ಳುವ ಎಲ್ಲಾ ಮಾರ್ಗಗಳನ್ನ ಅನುಸರಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಆರ್. ದಿಂಡಲಕೊಪ್ಪ ಅವರು ಮಾತನಾಡಿ, ಜನರು ಹೆಚ್ಚು ಹೆಚ್ಚು ಆರೋಗ್ಯದ ಬಗ್ಗೆ ಜಾಗೃತರಾಗಬೇಕು, ದುಶ್ಚಟಗಳು ಮನುಷ್ಯನ ಆರೋಗ್ಯದ ಜೊತೆಗೆ ಹಣ, ಸಮಯ, ಪರಿಸರವನ್ನೂ ಸಹ ನಾಶಮಾಡುತ್ತಿದೆ, ಅಂತಹ ದುಶ್ಚಟಗಳ ಬಗ್ಗೆ ಹೆಚ್ಚು ಜಾಗೃತಿ ಕಾರ್ಯಕ್ಮಗಳನ್ನ ಹಮ್ಮಿಕೊಂಡು. ಆನರನ್ನ ಸರಿದಾರಿಗೆ ತರಬೇಕಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎನ್.ಬಿ. ವಿಶ್ವನಾಥ ಮಾತನಾಡುತ್ತಾ ವೈದ್ಯಕೀಯ ಜ್ಞಾನ ಹೆಚ್ಚಾದರು ಸಹ, ನಮಗೆ ಆರೋಗ್ಯ ರಕ್ಷಿಸಿಕೊಳ್ಳುವ ಮಾರ್ಗಗಳನ್ನ ಅನುಸರಿಸುತ್ತಿಲ್ಲ, ಆದಷ್ಟು ಯುವಜನಾಂಗ ಮಾಧಕ ವಸ್ತುಗಳಿಂದ ದೂರವಿರಬೇಕು, ತಂದೆ ತಾಯಿಗಳಿಗೆ ನೆಮ್ಮದಿ ತಂದುಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಿ. ಎಂ. ಲಕ್ಷೀನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಕೊಟ್ಟು, ಶಿಕ್ಷಣವನ್ನ. ಪೂರ್ಣಗೊಳಿಸಿಕೊಂಡು, ಜೀವನದಲ್ಲಿ ಹೆಚ್ಚಿನ ಗುರಿ ಮುಟ್ಟಬೇಕು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಕಿ ವಹಿಸಿಕೊಳ್ಳಬೇಕು ಎಂದರು.
ಶಿವರಶ್ಮಿ ಅಕ್ಕನವರು ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಅಧ್ಯಕ್ಷರು ಮಾತನಾಡುತ್ತಾ ಮನುಷ್ಯನಿಗೆ ಆಧ್ಯಾತ್ಮಿಕ ಚಿಂತನೆಗಳನ್ನ ಬೋಧಿಸಿದರೆ, ದುಶ್ಚಟಗಳಿಂದ ದೂರವಿರಲು ಸಹಾಯಕ ಎಂದರು.
ಕಾರ್ಯಕ್ರಮದಲ್ಲಿ ಡಾ|| ಹೆಚ್.ಕೆ. ಎಸ್. ಸ್ವಾಮಿ ಅಧ್ಯಕ್ಷರು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಮಹಾಂತೇಶ್ ಕಾರ್ಯದರ್ಶಿ, ಶ್ರೀಮತಿ ಜಲಜಾ ಅಧ್ಯಕ್ಷರು, ವಾಸವಿ ಮಹಿಳಾ ಸಂಘ, ಶ್ರೀಮತಿ ಶೈಲಾ ವಿಶ್ವನಾಥ, ಅಧ್ಯಕ್ಷರು, ರೋಟರಿ ಇನ್ನರ್ ವೀಲ್ ಕ್ಲಬ್, ಶ್ರೀಮತಿ ರೇಖಾ ಸಂತೋಷ. ಅಧ್ಯಕ್ಷರು, ರೋಟರಿ ಇನ್ನರ್ ವೀಲ್ ಫೋರ್ಟ್ ಕಾರ್ಯಕ್ರಮದಲ್ಲಿ ಅಮೃತ್ ಆಯುರ್ವೇದಿಕ್ ಕಾಲೇಜು, ಎಸ್.ಜೆ. ಪ್ಯಾರಮೇಡಿಕಲ್ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಬಾಗವಹಿಸಿದ್ದರು.