ಪಾವಗಡ
ಪಾವಗಡ ಪೋಲೀಸ್ ಠಾಣಾ ವ್ಯಾಪ್ತಿಯ ಕಣೀವೇನಹಳ್ಳಿ ಗೇಟ್ ಹಿಂಬಾಗದ ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಶವ ಶುಕ್ರವಾರ ಪತ್ತೆಯಾಗಿದೆ.ಮೃತರನ್ನು ಪಾವಗಡ ಪಟ್ಟಣದ ಟೀಚರ್ಸ ಕಾಲೋನಿಯ ನಿವಾಸಿ ಬೇಟೆಕೃಷ್ಣಪ್ಪ 49 ವರ್ಷ ಎಂದು ಗುರ್ತಿಸಲಾಗಿದೆ, ಮೃತರಿಗೆ ಪತ್ನಿ ಇಬ್ಬರು ಹೆಣ್ಣು, ಒರ್ವ ಪುತ್ರ ಇದ್ದು,
ಮೃತ ಕೃಷ್ಣಪ್ಪ ಗುರವಾರ ಮದ್ಯಾಹ್ನದಿಂದ ಕಾಣೆಯಾಗಿದ್ದು, ಪತ್ನಿ ಪಾವಗಡ ಪೋಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದು, ಮೊಬೈಲ್ ಅದಾರದಿಂದ ಶುಕ್ರವಾರ ಮೃತದೇಹವನ್ನು ಪತ್ತೆಮಾಡಲಾಗಿದೆ, ಮೃತ ದೇಹ ಕಪ್ಪಾಗಿದ್ದು, ಮದ್ಯಪಾನದಲ್ಲಿ ವಿಷಪ್ರಸಾನ ನಡೆಸಿ ಕೊಲೆಮಾಡಲಾಗಿದೆ ಎಂದು ಕುಟುಂಬಸ್ಥರು ಅರೋಪಿಸಿದ್ದಾರೆ,ಸ್ಥಳಕ್ಕೆ ಪಾವಗಡ ಪೋಲಿಸರು ದಾವಿಸಿ ತನಿಖೆ ಕೈಗೊಂಡಿದ್ದಾರೆ.