ಹುಳಿಯಾರು :
ದಿನದ ಕೂಳಿಗೆ ವರ್ಷದ ಕೂಳು ಕಳ್ಕೊಬೇಡಿ
ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತಿಯೊಂದು ಪಕ್ಷದ ಅಭ್ಯರ್ಥಿಗಳು ಬಾಡೂಟ, ಮದ್ಯ, ಹಣ, ಒಡವೆ-ವಸ್ತ್ರ ಹಂಚಿಕೆ ಹೀಗೆ ಇತರೆ ಆಮಿಷ ನೀಡುವುದು ಸಹಜ. ಯಾವುದೇ ಆಮಿಷಕ್ಕೆ ಒಳಗಾಗದೆ, ಜಾತಿಗೆ ಮಣೆ ಹಾಕದೆ ಸಮರ್ಥ ಅಭ್ಯರ್ಥಿಗೆ ಮತ ನೀಡಬೇಕು.
ಅಧಿಕಾರದ ಚುಕ್ಕಾಣಿ ಹಿಡಿಯಲು ಯಾವ ಅಭ್ಯರ್ಥಿ ಯೋಗ್ಯ ಎಂಬುದನ್ನು ಅರಿತು ಮತ ನೀಡಬೇಕು. ಇಲ್ಲವಾದಲ್ಲಿ, `ದಿನದ ಕೂಳಿಗೆ ವರ್ಷದ ಕೂಳು ಬಲಿ ಕೊಟ್ಟರು’ ಎಂಬ ನಾಣ್ಣುಡಿಯಂತೆ ಆಗುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಮತ ಹಾಕಿ
ಚೇತನ್, ಶಿಲ್ಪಾ ಸ್ಟೋರ್, ಹುಳಿಯಾರು
4: ಚೇತನ್,
ಮತ ಮಾರಾಟದ ಸರಕಲ್ಲ
ಮತ ಮಾರಾಟದ ಸರಕಲ್ಲ. ಬದಲಾವಣೆಯ ಅಸ್ತ್ರ. ಅದನ್ನು ಹಣ, ಹೆಂಡದ ಆಸೆಗೆ ಒಳಗಾಗಿ ಮತದಾರರು ಭ್ರಷ್ಟ, ಕೆಟ್ಟ ಆಡಳಿತಗಾರರು, ಕೊಲೆಗಡುಕರು, ಜಾತಿವಾದಿಗಳಿಗೆ ನೀಡಿ, ಅಧಿಕಾರದಲ್ಲಿ ಕೂರಿಸಿದರೆ ಅದರ ಪರಿಣಾಮ ಘೋರವಾಗಿರುತ್ತದೆ. ಮತವನ್ನು ಉತ್ತಮ ಅಭ್ಯರ್ಥಿಗೆ ನೀಡಿದರೆ ಪ್ರಜಾಪ್ರಭುತ್ವದ ಆಶಯ, ಜನಸಾಮಾನ್ಯರ ಕನಸು ನನಸಾಗಲು ಸಾಧ್ಯವಾಗುತ್ತದೆ.
ನಾವು ಮತದಾನ ಮಾಡದೆ ಇದ್ದಾಗ, ಹಣಕ್ಕಾಗಿ ಮತ ಮಾರಿಕೊಂಡಾಗ ಭ್ರಷ್ಟರು ಸುಲಭವಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ. ಪರಿಣಾಮ, ಪ್ರಜೆಗಳಿಗೆ ಅಗತ್ಯ ವಸ್ತುಗಳು, ಇಂಧನಗಳು, ಶಿಕ್ಷಣ, ಆರೋಗ್ಯ ದುಬಾರಿಯಾಗುತ್ತವೆ. ಕೆಟ್ಟ ಆಡಳಿತಗಾರನಿಂದ ಬಡವರು ಇನ್ನೂ ಬಡವರಾಗಿ, ಶ್ರೀಮಂತರು ಇನ್ನೂ ದೊಡ್ಡ ಶ್ರೀಮಂತರಾಗುತ್ತಾರೆ.
ಎಚ್.ಡಿ.ಯತೀಶ್, ಛಾಯಗ್ರಾಹಕ, ಹುಳಿಯಾರು.
5: ಎಚ್.ಡಿ.ಯತೀಶ್,