ತಿಪಟೂರು :
ಹೆಚ್.ಡಿ.ದೇವೇಗೌಡ ಮತ್ತು ಸಿದ್ದರಾಮಯ್ಯನವರು ಮೈತ್ರಿಯು ತಿಪಟೂರಿನಲ್ಲೇ ಮೈತ್ರಿಯ ಬಹಿರಂಗ ಸಭೆಯನ್ನು ಪ್ರಾರಂಭ ನಗರದ ವಿನೋದ ಟಾಕೀಸ್ ಪಕ್ಕದ ಮೈದಾನದವು ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರ ಪುಣ್ಯವೆಂದು ಲೋಕೇಶ್ವರ್ ತಿಳಿಸಿದರು.
ತುಮಕೂರು ಲೋಕಸಭಾ ಚುನಾವಣೆಯ ಅಂಗವಾಗಿ ಜೆ.ಡಿ.ಎಸ್ ಮತ್ತು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಬಹಿರಂಗ ಸಭೆಯನ್ನು ಬುಧವಾರ ಬೆಳಗ್ಗೆ 11.00 ಗಂಟೆಗೆ ಏರ್ಪಡಿಸಲಾಗಿದ್ದು ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ನಲ್ಲಿ ಒಟ್ಟಾಗಿ ಹೊರಟು ತಿಪಟೂರನ್ನು ತಲುಪಿದ ನಂತರ ಇಲ್ಲಿಗೆ ರಸ್ತೆಯ ಮೂಲಕ ಆಗಮಿಸುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಶ್ರೀನಿವಾಸ್, ಕೆ.ಪಿ.ಸಿ.ಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಸೇರಿದಂತೆ ಮತ್ತಿತರರು ಸೇರಿ ಸಭೆಯನ್ನು ಆಯೋಜಿಸಲಾಗಿದ್ದು ಅಪಾರ ಸಂಖ್ಯೆಯಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆಂದು ಜೆ.ಡಿ.ಎಸ್ ಮುಖಂಡ ಲೋಕೇಶ್ವರ್ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.
ನಗರದ ವಿನೋದ ಟಾಕೀಸ್ ಪಕ್ಕದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೆಚ್.ಡಿ.ದೇವೇಗೌಡರಿಗೆ ಇದು ಕೊನೆಯ ಚುನಾವಣೆಯಾಗಿದ್ದು ಅವರು ನಮ್ಮ ಕ್ಷೇತ್ರವನ್ನು ಆಯ್ಕೆಮಾಡಿಕೊಂಡಿರುವುದು ನಮಗೆಲ್ಲಿರಿಗೂ ಸಂತಸದ ಸಂಗತಿ ಜೊತಗೆ ಜಿಲ್ಲೆಯು ಸಮಗ್ರನೀರಾವರಿ ಮತ್ತು ಅಭಿವೃದ್ಧಿಯಾಗಬೇಕಾದರೆ ದೇವೆಗೌಡರನ್ನು ಗೆಲ್ಲಿಸಿಕೊಡುವ ಜವಾಬ್ದಾರಿಯು ನಮ್ಮಮೇಲಿದ್ದು ಅದನ್ನು ನಾವು ಸಾಧಿಸಿ ತೋರಬೇಕೆಂದು ಕರೆನೀಡಿದ ಅವರು, ನಾಳಿನ ಸಭೆಯಲ್ಲಿ ಹಲವಾರು ಬಿ.ಜೆ.ಪಿ ಕಾರ್ಯಕರ್ತರುಗಳು ಮತ್ತು ಮುಖಂಡರುಗಳನ್ನು ನಮ್ಮ ಪಕ್ಷವನ್ನು ಸೇರುತ್ತಿದ್ದಾರೆ ನೆನ್ನೆಯು ಸಹ ನೊಣವಿನಕೆರೆ ಹೋಬಳಿಯ ಶಕುನಗಿರಿ ಗೊಲ್ಲರಹಟ್ಟಿಯ 50 ಕಾರ್ಯಕರ್ತರುಗಳು ಪಕ್ಷವನ್ನು ಸೇರಿದ್ದಾರೆಂದು ತಿಳಿಸಿದರು.
ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ಮಡೆನೂರು ಕಾಂತರಾಜು ಮಾತನಾಡುತ್ತಾ ನಮ್ಮ ಪಕ್ಷದಿಂದ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದವರು ನಾವು ಈಗಾಗಲೇ ಮೈತ್ರಿ ಅಭ್ಯರ್ಥಿ ದೇವಾಗೌಡರ ಪರವಾಗಿ ಮತಯಾಚನೆಯನ್ನು ಆರಂಭಿಸಿದ್ದು ಇಂದು ಸಹ ನಮ್ಮ ನಾಯಕರಾದ ಕೆ.ಷಡಕ್ಷರಿಯವರು ಮತ್ತು ಮಾಜಿ ತಾ.ಪಂ ಅಧ್ಯಕ್ಷರು ಮುಂತಾದವರು ಕಿಬ್ಬನಹಳ್ಳಿ ಹೋಬಳಿ, ಹೊನ್ನವಳ್ಳಿ ಹೋಬಳಿ, ಕಸಬಾ ಹೋಬಳಿಯಲ್ಲಿ ಮಾಡುತ್ತಿದ್ದಾರೆಂದು ತಿಳಿಸಿದರು.
ಪತ್ರಿಕಾಘೊಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ಯೋಗೀಶ್, ಜೆ.ಡಿ.ಎಸ್ ಅಧ್ಯಕ್ಷ ಸೊಪ್ಪುಗಣೇಶ್, ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಶಿವಸ್ವಾಮಿ, ಮಾಜಿ ನಗರಸಭಾ ಸದಸ್ಯರುಗಳಾದ ರಾಜಶೇಖರ್, ರೇಖಾ ಅನೂಪ್, ನಯಾಜ್ ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








