ಅಧಿಕಾರಕ್ಕಾಗಿ ಬಿಜೆಪಿ ಕರ್ನಾಟಕದಲ್ಲಿ ಹಗಲು ಕನಸು ಕಾಣುತ್ತಿದೆ: ವೆಂಕಟರಮಣಪ್ಪ

ಪಾವಗಡ

         ಜೈಲಿಗೆ ಹೋಗಿ ಬಂದವರಿಂದ ನಾವು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅಧಿಕಾರಕ್ಕಾಗಿ ಬಿಜೆಪಿ ಕರ್ನಾಟಕದಲ್ಲಿ ಹಗಲು ಕನಸು ಕಾಣುತ್ತಿದೆ ಎಂದು ಕಾರ್ಮಿಕ ಸಚಿವ ವೆಂಕಟರವಣಪ್ಪ ತಿಳಿಸಿದರು.

        ಪಟ್ಟಣದ ಎಸ್‍ಎಸ್‍ಕೆ ರಂಗಮಂದಿರದಲ್ಲಿ ಲೋಕಸಭಾ ಚುನಾವಣೆಯ ತಾಲ್ಲೂಕು ಮಟ್ಟದ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಕ್ಷಿಣ ಭಾರತದಲ್ಲಿ ಒಮ್ಮೆ ಅಧಿಕಾರಕ್ಕೆ ಬಂದ ಬಿಜೆಪಿ ಒಂದೇ ಅವಧಿಗೆ ಮೂರು ಮುಖ್ಯಮಂತ್ರಿಗಳನ್ನು ನೀಡಿತು. ಬಿಜೆಪಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಸೇರಿದಂತೆ ಸಚಿವ ಸಂಪುಟದ ಬಹುತೇಕ ಸಚಿವರು ಜೈಲಿಗೆ ಹೋಗಿ ಬಂದರು. ಬಿಜೆಪಿ ಎಂದರೆ ಭ್ರಷ್ಟ್ಟಾಚಾರದ ಕೂಪವಾಗಿದೆ. ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಲು ನಿಗದಿ ಮಾಡಿದ ದಿನಾಂಕಗಳಿಂದ ರಾಜ್ಯದ ಜನತೆ ಬಿಜೆಪಿ ನಡೆಯನ್ನು ನೋಡಿ ನಗುವಂತಾಗಿದೆ ಎಂದರು.

         ಐದು ವರ್ಷಗಳ ಕಾಲ ವಿಧೇಶಗಳನ್ನು ಸುತ್ತಿಬಂದಾ ಮೋದಿ ಜನಸಾಮಾನ್ಯರ ಖಾತೆಗೆ 15 ಲಕ್ಷ ಹಣ ಹಾಕದೇ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಠಿಮಾಡದೇ ರೈತರ ಸಾಲಮನ್ನ ಮಾಡದ ಮೋದಿಗೆ ಸರ್ಕಾರವನ್ನು ಕಿತ್ತೋಗೆಯಬೇಕು , ಬಡವರ ಕೈಗೆ ಸೀಗದ ಪ್ರದಾನಿ ಅಂಭಾನಿ ಮತ್ತು ಆದಾನಿಗೆ ಎಲ್ಲಿ ಬೇಕಾದರೂ ಸೀಗುತ್ತಾರೆ , ಇದನ್ನು ಪ್ರಶ್ನಿಸಿದರೆ ಕಾಂಗ್ರೇಸ್ ಮತ್ತು ಬಿಜೆಪಿ ಮುಖಂಡರ ಮೇಲೆ ಐಟಿದಾಳಿ ಮಾಡಿಸುವಾ ಏಡಿ ಸರ್ಕಾರಕ್ಕೆ ಮತದಾನದ ಮೂಲಕ ಬುದ್ದಿಹೇಳಿ ಸಂಮಿಶ್ರ ಸರ್ಕಾರದ ಆಭ್ಯರ್ಥಿ ಚಂದ್ರಪ್ಪರನ್ನು ಗೆಲ್ಲಿಸಬೆಕೆಂದರು.

         ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಮಿಶ್ರ ಸರ್ಕಾರದ ಆಭ್ಯರ್ಥಿಯಾದ ಚಂದ್ರಪ್ಪ ಮಾತನಾಡಿ ಐದುವರ್ಷ ಕಳಂಕರಹಿತ ಸೇವೆ ಮಾಡಿದ್ದು , ಸಂಸತ್ತಿನಲ್ಲಿ 336 ಪ್ರಶ್ನೆ 56 ಚರ್ಚೆಗಳಲ್ಲಿ ಬಾಗವಹಿಸಿ ನಮ್ಮ ಕಾಂಗ್ರೇಸ್ ಮತ್ತು ಜೆಡಿಎಸ್ ಹಾಕಿದ ಜಾತ್ಯತೀತ ತತ್ವದ ಮೇಲೆ ನಡೆಯುತ್ತಿದ್ದೆನೆಂದರು.

         ಮಾಜಿ ಪ್ರದಾನಿ ಮನಮೋಹನ್ ಸಿಂಗ್ ದೇಶದ ರೈತರ 72 ಸಾವಿರ ಕೋಟಿ ಸಾಲಮನ್ನ ಮಾಡಿದರೆ ಇಂದಿನ ಪ್ರದಾನಿ ಯುವಜನತೆಗೆ 2 ಕೋಟಿ ಉದ್ಯೋಗ ಸೃಷ್ಠಿಮಾಡದೇ ಪಕೋಡ ಮಾರಿ ಎನ್ನುತ್ತಾರೆ , ಮೈತ್ರಿಕೂಟವನ್ನು ಸಹಿಸದ ಬಿಜೆಪಿ ಒಡೆಯುವಾ ಕೇಲಸಕ್ಕೆ ಮುಂದಾಗಿದ್ದು ,ಆದರಲ್ಲಿ ತಾಲ್ಲೂಕಿನಲ್ಲಿ ಆನೇಕಲ್‍ನಿಂದ ಬಂದಾ ವ್ಯೆಕ್ತಿ ನನ್ನ ಸಮುದಾಯವನ್ನೇ ಒಡೆಯುವಾ ಪ್ರಯತ್ನಮಾಡುತ್ತಿದೆ ಅಂಬೇಡ್ಕರ್ ರಚಿಸಿದ ಸಂಮಿದಾನವನ್ನೇ ಬದಲಾಯಿಸಲು ಹೋರಟ ಬಿಜೆಪಿಗೆ ತಕ್ಕ ಪಾಠ ಕಲಿಸಿ ನನಗೆ ಮತ್ತೋಮ್ಮೆ ನಿಮ್ಮ ಸೇವೆ ಮಾಡುವ ಆವಕಾಶ ಕಲ್ಪಿಸಿ ಎಂದರು.

          ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಉಗ್ರನರಸಿಂಹ್ಮಪ್ಪ , ಸೊಮ್ಲನಾಯ್ಕ್ , ಬ್ಲಾಕ್ ಕಾಂಗ್ರೇಸ್ ಅದ್ಯಕ್ಷರಾದ ಸುದೇಶ್ ಬಾಬು , ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೌರಮ್ಮತಿಮ್ಮಯ್ಯ ,ಹೆಚ್.ವಿ.ವೆಂಕಟೇಶ್,ಚನ್ನಮಲ್ಲಯ್ಯ,ಪಾಪಣ್ಣ, ಡಿ.ಸಿ.ಸಿ ಬ್ಯಾಂಕ್ ನಿದೇಶಕ ನರಸಿಂಹಯ್ಯ ,ಪುರಸಭಾ ಮಾಜಿ ಅದ್ಯಕ್ಷರಾದ ಶಂಕರ್ ರೆಡ್ಡಿ , ಗುರ್ರಪ್ಪ , ಸುಧಾಕರ್ ರೆಡ್ಡಿ , ಪುರಸಭಾ ಸದಸ್ಯರಾದ ರಾಜೇಶ್ , ಬಾಲಸುಭ್ರಮಣಿ , ಮುಖಂಡರಾದ ಪಜುಲ್ಲಾಸಾಬ್ , ರಿಜ್ವಾನ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link