ಹೊಸದುರ್ಗ:
ಕಳೆದ ಮೂನಾಲ್ಕು ದಿನದಿಂದ ಮದ್ಯಾಹ್ನ ಆಗುತ್ತಿದ್ದಂತೆ ಮೋಡ ಕವಿದ ವಾತವರಣವು ಆಗುತ್ತಿತ್ತು. ಎಂದಿನಂತೆ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಮೋಡ ಕವಿದ ವಾತವಾರಣದಿಂದ ಗುಡುಗುತ್ತಾ ಮಳೆ ಬರಲು ಪ್ರಾರಂಭಿಸಿತು. ಬರದಿಂದ ಸಂಕಷ್ಟಕ್ಕೆ ಸಿಲುಕಿದ್ದ ಅನ್ನದಾತರ ಮೊಗದಲ್ಲಿ ಮತ್ತು ಸುಡು ಬಿಸಿಲಿನಿಂದ ಜನರು ತತ್ತರಿಸಿ ಹೊಗಿದ್ದ ಪಟ್ಟಣದ ಜನಗಳ ಮೊಗದಲ್ಲಿ ಮಂದಹಾಸ ಮೂಡಿತು. ಸುಮಾರು 20 ನಿಮಿಷ ಬಂದ ಮಳೆಯಿಂದ ರಸ್ತೆಯಲ್ಲಿ ನೀರು ಹರಿದು ಸಂಚಾರ ವ್ಯವಸ್ಥೆ ಸ್ವಲ್ಪ ಕಾಲ ಸ್ಥಗಿತಗೊಂಡಿತ್ತು.
ತಾಲ್ಲೂಕಿನ ವಿವಿಧಡೆ ಬೋಕಿಕೆರೆ, ಎಂ.ಜಿ.ದಿಬ್ಬ, ಹೊನ್ನೇನಹಳ್ಳಿ, ಹೊಸಹಳ್ಳಿ, ಬಾಗೂರು ಸೇರಿದಂತೆ ವಿವಿಧ ಕಡೆಯಲ್ಲಿ ಮಳೆ ಬಂದು ಹೋಗಿದೆ.ಕಳೆದ ವರ್ಷ ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದ್ದರಿಂದ ಭೂಮಿಯಲ್ಲಿ ಸ್ವಲ್ಪವೂ ತೇವಾಂಶವಿಲ್ಲ. ಈ ಬಾರಿ ವಾಡಿಕೆಯಂತೆ ಶೇ50 ಕ್ಕಿಂತ ಹೆಚ್ಚು ಮಳೆ ಬರಲಿದೆ ಎಂದು ಹವಾಮಾನ ಮುನ್ಸೂಚನೆ ನೀಡುವ ಸಂಸ್ಥೆ ಮಾಹಿತಿ ಕಲೆ ಹಾಕಿ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
