ಬೆಂಗಳೂರು 
ಕುಡಿದ ಅಮಲಿನಲ್ಲಿ ಸೆಕ್ಯುರಿಟಿ ಗಾರ್ಡ್‍ನ ಕಣ್ತಪ್ಪಿಸಿ ಅಪಾರ್ಟ್‍ಮೆಂಟ್‍ನ ಮೊದಲ ಮಹಡಿಗೆ ಹಿಂದಿನಿಂದ ಕಾಪೌಂಡ್ ಹತ್ತಿಕೊಂಡು ಹೋದ ಯುವಕನೊಬ್ಬ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ದುರ್ಘಟನೆ ಸುಬ್ರಮಣ್ಯ ನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿನಡೆದಿದೆ.
ಶ್ರೀರಾಮಪುರಂನ ನಾಗಪ್ಪ ಬ್ಲಾಕ್‍ನ ವಿಜಯ್ (24)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಮೆಡಿಕಲ್ ಸ್ಟೋರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ರಾತ್ರಿ 11ರ ವೇಳೆ ಮದ್ಯಪಾನ ಮಾಡಿ ಗಾಯಿತ್ರಿ ನಗರಕ್ಕೆ ಬಂದಿದ್ದಾನೆ. ಅಲ್ಲಿನ ಬಾರ್‍ವೊಂದರಲ್ಲಿ ಮತ್ತೆ ಕುಡಿದು ಜಿಎನ್‍ಆರ್ ಎನ್‍ಕ್ಲೇವ್ ಅಪಾರ್ಟ್‍ಮೆಂಟ್ ಬಳಿ 11.55ರ ವೇಳೆ ಬಂದಿದ್ದಾನೆ.
ಅಪಾರ್ಟ್‍ಮೆಂಟ್ ಒಳಹೋಗುತ್ತಿದ್ದ ವಿಜಯ್‍ನನ್ನು ಸೆಕ್ಯುರಿಟಿ ಗಾರ್ಡ್ ತಡೆದು ಹೊರಕಳುಹಿಸಿದ್ದು, ಅಲ್ಲೇ ಬಿದ್ದು ಗಾಯಮಾಡಿ ಕೊಂಡಿದ್ದಾನೆ.ರಸ್ತೆಗೆ ನಡೆದುಕೊಂಡು ಬಂದ ವಿಜಯ್ ಮತ್ತೆ ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಪಾರ್ಟ್‍ಮೆಂಟ್‍ಗೆ ಹಿಂದಿನ ಸ್ಲೈಡರ್ ಕಾಂಪೌಂಡ್ ಹತ್ತಿ ಗ್ರಿಲ್ ಹಿಡಿದು ಮೊದಲ ಮಹಡಿಗೆ ಹೋಗಿ ಅಲ್ಲಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ.
ತಲೆ, ಎದೆಭಾಗಕ್ಕೆ ಗಾಯಗೊಂಡಿದ್ದ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸುಬ್ರಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








