ಮಡಿವಾಳ ಸಮಾಜದವರು ದೇವೇಗೌಡರನ್ನು ಬೆಂಬಲಿಸಲು ಮನವಿ

ಹುಳಿಯಾರು

          ಹುಳಿಯಾರು ಹೋಬಳಿ ಮಡಿವಾಳ ಸಮಾಜದವರು ಮಾಜಿ ಪ್ರಧಾನಿ ದೇವೇಗೌಡರನ್ನು ಬೆಂಬಲಿಸುವಂತೆ ಜೆಡಿಎಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗದ ಅಧ್ಯಕ್ಷ ಅಮರನಾಥ್ ಮನವಿ ಮಾಡಿದರು.

         ಹುಳಿಯಾರು ಸಮೀಪದ ದಸೂಡಿಯಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಮಡಿವಾಳ ಸಮಾಜದ ಉಪಾಧ್ಯಕ್ಷ ದೇವರಾಜು ಅವರ ನಿವಾಸದಲ್ಲಿ ನಡೆದ ಮಡಿವಾಳ ಬಂಧುಗಳ ಸಭೆಯಲ್ಲಿ ಮಾತನಾಡಿದ ಅವರು ರಾಷ್ಟ್ರ ರಾಜಕಾರಣದಲ್ಲಿ ಕರ್ನಾಟಕದಿಂದ ಪ್ರಧಾನಿಯಾಗಿದ್ದ ಏಕೈಕ ವ್ಯಕ್ತಿ ದೇವೇಗೌಡರಾಗಿದ್ದು ರೈತರ ಸಮಸ್ಯೆ, ನೀರಾವರಿ ಸಮಸ್ಯೆ ಸೇರಿದಂತೆ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಅರಿತಿರುವ ಅವರನ್ನು ಆಯ್ಕೆ ಮಾಡಿದಲ್ಲಿ ಕ್ಷೇತ್ರ ಅಭಿವೃದ್ಧಿ ಆಗುವುದರಲ್ಲಿ ಎರಡು ಮಾತಿಲ್ಲ ಎಂದರು.

         ತುಮಕೂರು ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ದೇವೇಗೌಡರು ಗೆಲ್ಲಬೇಕಿದ್ದು ತುಮಕೂರು ಜಿಲ್ಲೆಯಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದೇವೇಗೌಡರನ್ನು ಸಮಾಜ ಬಂದುಗಳು ಬೆಂಬಲಿಸುವುದರ ಮೂಲಕ ಸಹಕರಿಸುವಂತೆ ಕೋರಿದರು.

        ಈ ಸಂದರ್ಭದಲ್ಲಿ ಹುಳಿಯಾರು ಹೋಬಳಿ ಮಡಿವಾಳ ಸಮಾಜದ ಅಧ್ಯಕ್ಷ ಪರಮೇಶ್, ಉಪಾಧ್ಯಕ್ಷ ಶಾಮಣ್ಣ, ತಾಲೂಕು ಉಪಾಧ್ಯಕ್ಷ ದೇವರಾಜು, ತಾಲೂಕು ಮಡಿವಾಳ ಸಮಾಜದ ಸಂಚಾಲಕ ಪ್ರಸನ್ನಕುಮಾರ್ ಸೇರಿದಂತೆ ಸಮಾಜ ಬಂಧುಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link