ಹುಳಿಯಾರು
ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ ಮತದಾರರ ಪಟ್ಟಿಯಲ್ಲಿರುವ ಎಲ್ಲ ಮತದಾರರು ತಪ್ಪದೇ ಮತದಾನ ಮಾಡುವಂತೆ ಪ್ರೇರೇಪಿಸಲು ಹುಳಿಯಾರು ಪಟ್ಟಣ ಪಂಚಾಯ್ತಿ ಮತ್ತು ಹುಳಿಯಾರು ಹೋಬಳಿ ವಿಕಲಚೇತನರ ಸಂಘದ ಸಂಯಕ್ತ ಆಶ್ರಯದಲ್ಲಿ ಸ್ವೀಪ್ ಕಾರ್ಯಕ್ರಮದಡಿ ವಿಕಲಚೇತನರಿಂದ ತ್ರಿಚಕ್ರ ವಾಹನಗಳ ರ್ಯಾಲಿ ನಡೆಸಲಾಯಿತು.
ಮತ ಚಲಾಯಿಸೋಣ ರಾಷ್ಟ್ರ ನಿರ್ಮಾಣ ಮಾಡೋಣ, ಮತ ಚಲಾಯಿಸಿ ಜಾಣರೆನಿಸಿ, ನಿಮ್ಮ ಮತ ಸುಭದ್ರ ಸರ್ಕಾರದ ಆಯ್ಕೆಗೆ, ನಮ್ಮ ಮತ ಮಾರಾಟಕ್ಕಿಲ್ಲ, ದೇಶದ ಅಭಿವೃದ್ಧಿಗಾಗಿ, ಕಡ್ಡಾಯವಾಗಿ ಮತ ಚಲಾಯಿಸಿ, ಸಮರ್ಥ ಅಭ್ಯರ್ಥಿ ಆರಿಸಿ ದೇಶದ ಘನತೆಯನ್ನು ಹೆಚ್ಚಿಸಿ ಎಂಬ ಫಲಕಗಳನ್ನು ತ್ರಿಚಕ್ರ ವಾಹನಗಳಿಗೆ ಕಟ್ಟಿ ಘೋಷಣೆಗಳನ್ನು ಕೂಗುತ್ತ ಮತ ಜಾಗೃತಿ ಜಾಥ ನಡೆಸಿದ್ದು ನೋಡುಗರ ಗಮನ ಸೆಳೆಯಿತು.
ಪಪಂ ಮುಖ್ಯಾಧಿಕಾರಿ ಡಿ.ಭೂತಪ್ಪ ಅವರು ಜಾಥಾಗ ಚಾಲನೆ ನೀಡಿ ಮಾತನಾಡಿ ಮತದಾನ ಎಂಬುದು ಪಾರ ದರ್ಶಕವಾದ ಸಮಾಜದಲ್ಲಿನ ಜವಾಬ್ದಾರಿಯುತ ಕಾರ್ಯವಾಗಿದೆ. ಈ ಬಾರಿಯ ಲೋಕಸಭೆ ಚುನಾವಣೆಯು ರಾಷ್ಟ್ರದ ಭವಿಷ್ಯ ನಿರ್ಧರಿಸುವಂತಹದು. ಆದ್ದರಿಂದ ಎಲ್ಲ ನಾಗರಿಕರು ಮತದಾನದ ಮಾಡಬೇಕು. ಈ ನಿಟ್ಟಿನಲ್ಲಿ ಸಮಾಜ ಗಣ್ಯರು ಜಾಗೃತರಾಗಿ ಜನರಲ್ಲಿ ಮತದಾನದ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಪಂ ಆರ್‍ಓ ಪ್ರದೀಪ್, ಎಸ್‍ಡಿಎ ಜಿನಾಯತ್, ಪೌರಕಾರ್ಮಿಕ ಸಂಘದ ಅಧ್ಯಕ್ಷ ರಾಘವೇಂದ್ರ, ಸಿಬ್ಬಂಧಿಗಳಾದ ಆನಂದ್, ರೇಖಾ, ವೆಂಕಟೇಶ್ ಸೇರಿದಂತೆ ಇಪ್ಪತ್ತೈದಕ್ಕೂ ಹೆಚ್ಚು ವಿಕಲಚೇತನರು ತಮ್ಮ ತ್ರಿಚಕ್ರ ವಾಹನದಲ್ಲಿ ಜಾಥಾದಲ್ಲಿ ಪಾಲ್ಗೊಂಡಿದ್ದರು.