ತುಮಕೂರು
ಕುಣಿಗಲ್ ತಾಲೂಕು ಎಡೆಯೂರು ಹೋಬಳಿ ಕೊಪ್ಪ ಗ್ರಾಮಪಂಚಾಯತಿ ವ್ಯಾಪ್ತಿ ಕೊಪ್ಪ ಹಾಗೂ ಮಾಗಡಿ ಪಾಳ್ಯ ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದು, ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಎಡೆಯೂರು ಹೋಬಳಿ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಿಕಾ ತಿಳಿಸಿದ್ದಾರೆ.
ಅವರು ಬುಧವಾರ ಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಪ್ಪ ಹಾಗೂ ಮಾಗಡಿಪಾಳ್ಯ ಮತ್ತು ನಡೆಮಾವಿನಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಡೆಮಾವಿನಪುರ ಹಾಗೂ ಸಿದ್ದಾಪುರ ಗ್ರಾಮಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿದ್ದು, ನಡೆಮಾವಿನಪುರ ಹಾಗೂ ಸಿದ್ದಾಪುರ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡುಬಂದಿಲ್ಲ.
ಮಾಗಡಿ ಪಾಳ್ಯ ಗ್ರಾಮದಲ್ಲಿ ಒಂದು ಕೊಳವೆ ಬಾವಿಯಿದ್ದು, ಅಲ್ಪ ಪ್ರಮಾಣದ ನೀರು ಮಾತ್ರ ದೊರೆಯುತ್ತಿದೆ. ಈ ಕೊಳವೆಬಾವಿಯಲ್ಲಿ ನೀರು ಬಿಟ್ಟು ಬಿಟ್ಟು ಬರುತ್ತಿದ್ದು, ಇನ್ನು 2 ಲೆಂತ್ ಪೈಪುಗಳನ್ನು ಕೊಳವೆಬಾವಿಯೊಳಗೆ ಬಿಟ್ಟು, ಪ್ರಸ್ತುತ ಇರುವ 6ಹೆಚ್‍ಪಿ ಮೋಟಾರನ್ನು ಬದಲಿಸಿ ಹೆಚ್ಚಿನ ಸಾಮಥ್ರ್ಯದ ಮೋಟಾರ್ ಅಳವಡಿಸಿದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಹೊಸ ಮೋಟಾರ್ ಅನ್ನು ಅಳವಡಿಸಲು ಪಿಡಿಓಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
