ತುರುವೇಕೆರೆ:
ದೇಶದ ಸುಭದ್ರತೆ ಹಾಗೂ ರಕ್ಷಣೆಗಾಗಿ ಮೋದಿಯನ್ನು ಬೆಂಬಲಿಸಿ ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷೆ ಜಯಶೀಲಾ ಮನವಿ ಮಾಡಿದರು.
ತಾಲೂಕಿನ ಆನೆಕೆರೆ ಗ್ರಾಮದಲ್ಲಿ ಶುಕ್ರವಾರ ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು ಪ್ರದಾನಿ ನರೇಂದ್ರ ಮೋದಿ ಐದು ವರ್ಷಗಳ ಕಾಲ ಸ್ವಚ್ಚ ಬ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ. ದೇಶದ ರಕ್ಷಣೆಯ ವಿಷಯದಲ್ಲಿ ದಿಟ್ಟ ನಿಲುವು ತೆಗೆದುಕೊಂಡು ದೇಶದ ಜನತೆಯ ಮೆಚ್ಚುಗೆ ಕಾರಣವಾಗಿದೆ. ಹಾಗಾಗಿ ಪ್ರದಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರದಾನಿ ಯಾಗಬೇಕು ಎಂದು ಕೋರಿದರು.
ಬಿಜೆಪಿ ಅಭ್ಯರ್ಥಿ ಜಿಎಸ್.ಬಸವರಾಜು ಸ್ಥಳಿಯ ಅಭ್ಯಥಿಯಾಗಿದ್ದು ತುಮಕೂರು ಜಿಲ್ಲೆಯ ಅಭಿವೃದ್ದಿಗಾಗಿ ಅವರಿಗೆ ಮತ ನೀಡುವ ಮೂಲಕ ಅವರನ್ನು ಜಯಶೀಲರನ್ನಾಗಿ ಮಾಡಬೇಕು ಎಂದು ಕೋರಿದರು. ಈ ಸಂದರ್ಬದಲ್ಲಿ ಮಹಿಳಾ ಮುಖಂಡರಾದ ಅನಿತಾ ನಂಜುಂಡಯ್ಯ, ರಾಧ, ಶ್ರೀನಿದಿ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
