‘ದಲಿತರ ಸ್ಮಶಾನದಲ್ಲಿ ಅಕ್ರಮ ಲೇಔಟ್ ವಿರೋಧಿಸಿ ಮತದಾನ ಬಹಿಷ್ಕಾರ’

ತುಮಕೂರು

       ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಎನ್.ಆರ್. ಕಾಲೋನಿ, ನಿರ್ವಾಣಿ ಲೇಔಟ್, ಅಂಬೇಡ್ಕರ್ ನಗರ, ಪಿ.ಕೆ.ಎಸ್. ಕಾಲೋನಿ ಹಾಗೂ ಭಾರತಿನಗರದ ಸಾವಿರಾರು ಕುಟುಂಬಗಳು ಬಳಸುತ್ತಿರುವ ಸರ್ವೆ ನಂಬರ್ 299/1 ರ 6ಎಕರೆ 19.ಗುಂಟೆ ಪುಟ್ ಖರಾಬಿನ ಹರಿಜನ ಸ್ಮಶಾನದ ಜಾಗವನ್ನು ಸೇರಿಸಿ ಅಕ್ರಮವಾಗಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಭೂಪರಿವರ್ತನೆ ಮಾಡಿಸಿಕೊಂಡು

       ಕಾನೂನು ಬಾಹಿರವಾಗಿ ವಾಸಯೋಗ್ಯ ಲೇಔಟ್ ಮಾಡಿ ಮಾರಾಟ ಮಾಡುತ್ತಿರುವುದರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದರೂ ಅಲ್ಲದೆ ದಿನಾಂಕ: 03/09/2014ರಂದು ತುಮಕೂರು ಜಿಲ್ಲಾಧಿಕಾರಿಗಳಿಗೆ ಮನವಿ, ದಿನಾಂಕ: 28/08/2015ರಂದು ತುಮಕೂರು ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸಭೆಯಲ್ಲಿ ಆಯೋಗಕ್ಕೂ ಮನವಿ,

      ದಿನಾಂಕ : 27/04/2017ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ, ಹಾಗೂ 22/12/2018ರಲ್ಲಿ ಎನ್.ಆರ್. ಕಾಲೋನಿಯ ದುರ್ಗಮ್ಮ ದೇವಸ್ಥಾನದಲ್ಲಿ ಖುದ್ದು ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಮತ್ತು ಜಿಲ್ಲಾಧಿಕಾರಿಗಳಿಗೆ ಪ್ರಕರಣಕ್ಕೆ ಸಂಬಂಧಿಸಿದ ಮೂಲದಾಖಲೆಗಳೊಂದಿಗೆ ಮನವಿಗಳನ್ನು ನೀಡಿದ್ದು, ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗವೂ ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಆನಂತರ ಕೈಗೊಂಡ ಕ್ರಮದ ಬಗ್ಗೆ 15 ವರದಿಯನ್ನು ದಿನದೊಳಗೆ ಆಯೋಗಕ್ಕೆ ನೀಡಲು ಸೂಚಿಸುವಂತೆ ನಿರ್ದೇಶಿಸಿದ್ದರೂ ಸಹ ಈವರೆವಿಗೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ .

         ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸ ಬೇಕಾದ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಬೇಸತ್ತ ಅಂಬೇಡ್ಕರ್ ನಗರದ ಸುಮಾರು 710 ಜನ ನಿವಾಸಿಗಳು ಈಬಾರಿಯ 18/04/2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯ ಮತಗಳನ್ನು ಹೊಣೆಗೇಡಿ ಜನಪ್ರತಿನಿಧಿಗಳಿಗೆ ನೀಡಿ ನಮ್ಮ ಓಟುಗಳನ್ನು ಅಪಮೌಲ್ಯ ಮಾಡಬಾರದೆಂದು ತೀರ್ಮಾನಿಸಿ ನಾವೆಲ್ಲರೂ ಮತದಾನದಿಂದ ಹೊರಗುಳಿಯಲು ಒಗ್ಗಟ್ಟಿನಿಂದ ತೀರ್ಮಾನಿಸಿದ್ದೇವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link