ತಿಪಟೂರು :
ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಶ್ರೇಷ್ಠಕಾರ್ಯ ಅದನ್ನು ತಪ್ಪದೇ ಮಾಡಿ ಎಲ್ಲಾ ಮತದಾರು ಶೇಕಡ 100% ಮತದಾನ ಮಾಡಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ದೊರೆಯುತ್ತದೆಂದು ಉಪವಿಭಾಗಧಿಕಾರಿ ಪೂವಿತಾ ತಿಳಿಸಿದರು.
ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಶುಕ್ರವಾಸ ಸಂಜೆ ತಾಲ್ಲೂಕು ಪಂಚಾಯಿತಿ ತಿಪಟೂರು ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಮಾನವ ಸರಪಳಿಯನ್ನು ನಿರ್ಮಿಸಿ ಮೇಣದ ಬತ್ತಿಯನ್ನು ಬೆಳೆಗುವುದರ ಮೂಲಕ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡುವಂತೆ ಹಾಗೂ ಹದಿನೆಂಟು ವರ್ಷ ತುಂಬಿದ ಎಲ್ಲಾ ಪ್ರಜೆಗಳು ಕಡ್ಡಾಯ ಮತದಾನ ಮಾಡುವಂತೆ ಸಾರ್ವಜನಿಕರಿಗೆ ತಿಳುವಳಿಕೆ ಉಂಟುಮಾಡಲು ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಎಲ್ಲಾ ಮತದಾರರು ಕಟ್ಟಾಯವಾಗಿ ಮತದಾನ ಮಾಡುವಂತೆ ಕರೆನೀಡಿದರು.
ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಆರತಿ, ನಗರಸಭೆ ಆಯುಕ್ತೆ ಮಧು ಎನ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುನಿಲ್ಕುಮಾರ್, ಸಿ.ಡಿ.ಪಿ.ಓ ಕಛೇರಿಯ ಮೇಲ್ವಿಚಾರಕಿ ಪ್ರೇಮ, ಮುಂತಾದವರಿದ್ದರು.