ರಾಮರಸ ಸೇವಿಸಿ 8 ಮಂದಿ ಅಸ್ವಸ್ಥ

ಹಾಸನ:

ರಾಮನವಮಿ  ದಿನದಂದು ರಾಮರಸ ಕುಡಿದು ಎಂಟು ಮಂದಿ ಅಸ್ವಸ್ಥರಾಗಿರುವ ಘಟನೆ ಹಾಸನದ ಬೈಲಾಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶನಿವಾರ  ರಾಮನವಮಿಯನ್ನು ಆಚರಿಸಲಾಗಿತ್ತು. ಹಾಸನದ ಬೈಲಾಹಳ್ಳಯಲ್ಲೂ ರಾಮನವಮಿಯನ್ನು ಅದ್ಧೂರಿಯಾಗಿಯೇ ಆಚರಿಸಲಾಗಿತ್ತು. ಈ ವೇಳೆ ಅಲ್ಲಿ ರಾಮರಸ ತಯಾರಿಸಲಾಗಿದ್ದು. ಇದನ್ನು ಕುಡಿದ 8 ಮಂದಿ ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥಗೊಂಡವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದ್ರೆ ಅಸ್ವಸ್ಥಗೊಂಡವರಿಗೆ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಸ್ಪತ್ರೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap