ಬೆಂಗಳೂರು
ಮನೆಗೆ ಬಂದು ಅಸಭ್ಯವಾಗಿ ವರ್ತಿಸಿದ ದೂರದ ಸಂಬಂಧಿ ಆಟೋ ಚಾಲಕನನ್ನು ಪತಿ-ಪತ್ನಿ ಇಬ್ಬರು ಸೇರಿ ರಾಡ್ನಿಂದ ತಲೆಗೆ ಹೊಡೆದು ಭೀಕರವಾಗಿ ಕೊಲೆಮಾಡಿರುವ ದುರ್ಘಟನೆ ರಾಜಗೋಪಾಲನಗರ ಪೊಳೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ಲವಕುಶ ನಗರದ ಮಧು(24)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ,ಕೃತ್ಯವೆಸಗಿರುವ ಮೋಹನ್(29) ಹಾಗೂ ಆತನ ಪತ್ನಿ ರಮ್ಯ(25)ಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.ಹಾಸನ ಜಿಲ್ಲೆ ಹೊಳೆನರಸೀಪುರದ ಗೋಪನಹಳ್ಳಿ ಮೂಲದ ಕೊಲೆಯಾದ ಮಧು ಹಾಗೂ ಮೋಹನ್ ದೂರದ ಸಂಬಂಧಿಯಾಗಿದ್ದು ಇಬ್ಬರು ಆಟೋ ಚಾಲಕರಾಗಿ ಜೀವನ ಸಾಗಿಸುತ್ತಿದ್ದರು.
ಮೋಹನ್ ಮನೆಗೆ ಆಗಾಗ ಮಧು ಬಂದು ಹೋಗುತ್ತಿದ್ದನು.ಅಲ್ಲದೇ ಮೋಹನ್ ಪತ್ನಿ ರಮ್ಯಳನ್ನು ಪರಿಚಯ ಮಾಡಿಕೊಂಡು ಸಲುಗೆಯಿಂದ ಮೋಹನ್ ಮನೆಗೆ ಬಂದು ಹೋಗುತ್ತಿದ್ದನು. ಈಗ್ಗೆ 2-3 ತಿಂಗಳಿಂದ ಆರೋಪಿತ ಮೋಹನ್ ಹೆಂಡತಿ ರಮ್ಯಾಳನ್ನು ಮೃತ ಮಧು ನಿನ್ನ ಕಂಡರೆ ನನಗೆ ಇಷ್ಟ, ನಾನು ಕರೆದ ಕಡೆಯಲ್ಲೇಲ್ಲಾ ನೀನು ಬರಬೇಕು ಇಲ್ಲವಾದರೆ ನಿನ್ನ ಗಂಡನಿಗೆ ನಿನ್ನ ಬಗ್ಗೆ ಕೆಟ್ಟದಾಗಿ ಹೇಳಿ, ನಿನ್ನ ಮಾನ ಮಾರ್ಯಾದೆ ತೆಗೆಯುತ್ತೇನೆಂದು ಬೆದರಿಸುತ್ತಿದ್ದನು. ಈ ವಿಷಯವನ್ನು ರಮ್ಯಾ ತನ್ನ ಗಂಡನಿಗೆ ತಿಳಿಸಿದ್ದು ಇಬ್ಬರು ಕೂಡಿ ಹಲವಾರು ಬಾರಿ ಮೃತ ಮಧುಗೆ ಬುದ್ದಿವಾದವನ್ನು ಹೇಳಿದರು ಕೇಳದೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದನು.
ಮೋಹನ್ ಮನೆಗೆ ಶನಿವಾರ ರಾತ್ರಿ 9ರ ವೇಳೆ ಬಂದಿದ್ದ ಮಧು ಮದ್ಯಪಾನ ಮಾಡಲು ಮೋಹನ್ನನ್ನು ಬಾರ್ಗೆ ಕರೆದುಕೊಂಡು ಹೋಗಿದ್ದು ಇಬ್ಬರು ಕುಡಿದು ಮನೆಗ ವಾಪಸ್ಸಾಗಿದ್ದರು ಜೊತೆಯಲ್ಲಿ ಊಟ ಮಾಡಿದ ನಂತರ ಮೋಹನ್ ಪತ್ನಿ ರಮ್ಯಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನು ಕಂಡ ರಮ್ಯಾ ಅವರ ಅಕ್ಕ ಬಿಂದು ಹಾಗೂ ಮೋಹನ್ ಎಚ್ಚರಿಕೆ ನೀಡಲು ಹೋದಾಗ ನಡೆದ ಜಗಳ ವಿಕೋಪಕ್ಕೆ ತಿರುಗಿದೆ.
ರೊಚ್ಚಿಗೆದ್ದ ಮಧು ಮೋಹನ್ ಹಾಗೂ ರಮ್ಯ ಮೇಲೆ ಹಲ್ಲೆ ನಡೆಸಿದ್ದಾನೆ ಆಕ್ರೋಶಗೊಂಡ ಮೋಹನ್ ಮಧುನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು ರಮ್ಯ ರಾಡ್ನಿಂದ ಮಧು ತಲೆಗೆ ಹಲವು ಭಾರಿ ಬಲವಾಗಿ ಹೊಡೆದಿದ್ದಾರೆ.ಗಂಭೀರವಾಗಿ ಗಾಯಗೊಂಡ ಮಧುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ರಾಜಗೋಪಾಲ ಪೊಲೀಸರು ಪರಿಶೀಲನೆ ನಡೆಸಿ ಬಿಂದುವಿನಿಂದ ಮಾಹಿತಿ ಪಡೆದು ದಂಪತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








