ಮಂಡ್ಯ :
‘ನಿಖಿಲ್ ಎಲ್ಲಿದೀಯಪ್ಪಾ?’ ಡೈಲಾಗ್. ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಈ ಡೈಲಾಗ್ ಹಿಡಿದು ಮಂಡ್ಯ ಅಭ್ಯರ್ಥಿ ಟ್ರೋಲ್ಗೆ ಒಳಗಾಗಿದ್ದರು. ಈ ಕುರಿತು ಮೊದಲ ಬಾರಿ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ, ನಿಖಿಲ್ ಎಲ್ಲಿದೀಯಪ್ಪ ಎಂದು ಯಾರಾದ್ರೂ ಕೇಳಿದ್ರೆ ಈ ರೀತಿ ಉತ್ತರ ಕೊಡಿ ಎಂದು ಜನರಿಗೆ ತಿಳಿಸಿದ್ದಾರೆ.
ಕೆ.ಆರ್ನಗರದ ನಾರಾಯಣಪುರ ಗ್ರಾಮದಲ್ಲಿ ಪ್ರಚಾರ ನಡೆಸಿದ ಅವರು, ಯಾರಾದರೂ ‘ನಿಖಿಲ್ ಎಲ್ಲಿದ್ದಿಯಪ್ಪ ಎಂದರೆ, ನಮ್ಮ ಹೃದಯದಲ್ಲಿದ್ದಾನೆ’ ಎಂದು ಹೇಳಬೇಕು ಎಂದು ಪಾಠ ಹೇಳಿಕೊಟ್ಟರು. ಗ್ರಾಮಕ್ಕೆ ಸಿಎಂ ತೆರಳಿದ ವೇಳೆ ‘ನಿಖಿಲ್ ಎಲ್ಲಿದೀಯಪ್ಪಾ’ ಎಂದು ಬಹಳ ಚರ್ಚೆಯಾಗ್ತಿದೆ ಈ ಬಗ್ಗೆ ಮಾತನಾಡಿ ಎಂದು ಊರಿನ ಯುವಕರು ಸಿಎಂಗೆ ಆಗ್ರಹಿಸಿದಾಗ ಅವರು ಹೀಗೆ ಹೇಳಿದರು.
‘ನಿಖಿಲ್ ಎಲ್ಲಿದ್ಯಾಪ್ಪ’ ಎನ್ನುವ ಡೈಲಾಗ್ ಇಟ್ಟುಕೊಂಡು ಕೆಲ ಕಿಡಿಗೇಡಿಗಳು ಟ್ರೋಲ್ ಮಾಡುತ್ತಿದ್ದಾರೆ. ಈ ಟ್ರೋಲ್ಗಳಿಗೆಲ್ಲಾ ಜನರು ತಲೆಕೆಡಿಸಿಕೊಳ್ಳಬಾರದು. ಈ ವಿಷಯಗಳನ್ನು ಟ್ರೋಲ್ ಮಾಡುವ ಮೂಲಕ ಕೆಲವರು ಕೆಟ್ಟ ಅಭಿರುಚಿ ಬೆಳಸಿಕೊಂಡು ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಅವರಿಗೆ ನೀವು ತಕ್ಕ ಉತ್ತರ ನೀಡಬೇಕು. ನಿಖಿಲ್ ಎಲ್ಲಿದ್ಯಾಪ್ಪ ಎಂದ್ರೆ ನಿಮ್ಮ ಹೃದಯದಲ್ಲಿ ಎಂದು ಹೇಳಿ ಎಂದು ಟ್ರೋಲಿಗರ ವಿರುದ್ಧ ಹರಿಹಾಯ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ