ಪಟ್ಟಣದಲ್ಲಿ ಬಿಜೆಪಿ ರೋಡ್ ಶೋ

ಮಧುಗಿರಿ:

         ಕ್ಷೇತ್ರವನ್ನು ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿ ಪಡಿಸಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಕೆಲವರ ಕುತಂತ್ರದಿಂದ ಸೋಲಿಸಿದ್ದಾರೆ. ಇದರಿಂದ ಕ್ಷೇತ್ರ ಮತ್ತಷ್ಟು ಹಿಂದುಳಿಯಲು ಕಾರಣವಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ.ಸೋಮಣ್ಣ ತಿಳಿಸಿದರು.

       ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿ.ಜೆ.ಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಪರ ಭಾನುವಾರ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿದ ಅವರು, ಮಧುಗಿರಿ ಜನತೆ ಅಭಿವೃದ್ದಿ ಮಾಡಿದಂತಹ ಜನಪ್ರತಿನಿಧಿಗಳನ್ನು ಕಳೆದುಕೊಳ್ಳಬೇಡಿ. ಒಮ್ಮೆ ರಾಜಣ್ಣನವರನ್ನು ಸೋಲಿಸಿ ತಪ್ಪು ಮಾಡಿಕೊಂಡಿದ್ದೀರಾ ಮತ್ತೆ ಅದೇ ತಪ್ಪು ಮಾಡಬೇಡಿ ಎಂದ ಅವರು ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಪರ ಮತ ನೀಡುವಂತೆ ಜನತೆಯಲ್ಲಿ ಮನವಿ ಮಾಡಿದರು. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ ಎಂದು ಮೈತ್ರಿ ಸರ್ಕಾರದ ವಿರುದ್ದ ಗುಡುಗಿ, ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ. ದೇಶದ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗೆ ಮತ ನೀಡುವ ಮೂಲಕ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂದು ಮನವಿ ಮಾಡಿಕೊಂಡರು.

         ಹಿರಿಯೂರು ಶಾಸಕಿ ಪೂರ್ಣಿಮ ಶ್ರೀನಿವಾಸ್ ಮಾತನಾಡಿ ನನ್ನ ತಂದೆ ಎ.ಕೃಷ್ಣಪ್ಪನವರು ಸ್ಪರ್ಧಿಸಿದ್ದರು ಅವರಿಗೆ ಅದ ಅನ್ಯಾಯ ನಿಮಗೆ ತಿಳಿದಿದೆ ಬಿಜೆಪಿಗೆ ಮತ ಹಾಕುವ ಮೂಲಕ ತೀರಿಸಿಕೊಳ್ಳಬೇಕು. ನಮ್ಮ ಅಭ್ಯರ್ಥಿಯಾದಂತಹ ಜಿ.ಎಸ್.ಬಸವರಾಜು ರವರು ಲೋಕಸಭ ಸದಸ್ಯರಾಗಿ ಸಮರ್ಥವಾಗಿ ಕೆಲಸವನ್ನು ನಿರ್ವಹಣೆ ಮಾಡಿದ್ದಾರೆ ಹಾಗೂ ಈ ಜಿಲ್ಲೆಗೆ ಉತ್ತಮವಾದ ಕೆಲಸಗಳನ್ನು ಮಾಡಿದ್ದು, ಈ ಭಾರಿ ಪ್ರಧಾನ ಮಂತ್ರಿಯವರ ಕೈ ಬಲಪಡಿಸಲಿಕ್ಕೆ ಜಿ.ಎಸ್ ಬಸವರಾಜುರವರಿಗೆ ಆಶೀರ್ವಾದಿಸಿ ಎಂದರು.

        ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಮಾತನಾಡಿ, ತುಮಕೂರಿಗೆ ಹೇಮಾವತಿ ನೀರು ಬಿಡಬಾರದೆಂದು ಎಚ್.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣ ಧರಣಿ ನಡೆಸಿರುವುದು ಅಂದಿನ ಪತ್ರಿಕೆಗಳಲ್ಲಿ ವರದಿಯಾಗಿದೆ. ಜನರನ್ನು ಮೋಸ ಮಾಡಿ ಮತಹಾಕಿಸಿಕೊಳ್ಳವುದಕ್ಕೆ ಇದು ಹಾಸನ ಅಲ್ಲ. ತುಮಕೂರಿನ ಜಿಲ್ಲೆಯ ಜನರು ಸ್ವಾಭಿಮಾನಿಗಳು. ಎಚ್.ಡಿ.ದೇವೇಗೌಡರಿಗೆ ಮತ ನೀಡಿದರೆ ತುಮಕೂರು ನಾಶವಾಗುತ್ತದೆ ಹಾಗೂ ಮುಂದಿನ ಪೀಳಿಗೆಗೆ ವಿಷ ಕೊಟ್ಟಂತೆ ಎಂದರು.

          ಮಾಜಿ ಶಾಸಕ ಸುರೇಶ್‍ಗೌಡ ಮಾತನಾಡಿ, ಜಿಲ್ಲೆಯ ಕೆರೆಗಳಿಗೆ ಹೇಮಾವತಿ ನೀರು ತುಂಬಿಸಲು ನಿಮ್ಮಿಂದ ಸಾಧ್ಯವಾಗಿಲ್ಲ. ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಹಾಸನಕ್ಕೆ 800 ಕೋಟಿ , ಮಂಡ್ಯಗೆ 600 ಕೋಟಿ, ಡಾ.ಜಿ.ಪರಮೇಶ್ವರ್ ನೀವೆಷ್ಟು ಜಿಲ್ಲೆಗೆ ಅನುದಾನ ತಂದ್ದೀರಿ. ಇವರಿಬ್ಬರು ರಾಜ್ಯದ ಕಳ್ಳೆತ್ತುಗಳು ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆಂದು ಪ್ರಶ್ನಿಸಿದರು. ಮೋದಿ ಪ್ರಧಾನಿಯಾದ ಮೇಲೆ ತುಮಕೂರಿಗೆ ಎಚ್.ಎ.ಎಲ್. ಘಟಕ, ರೈಲ್ವೆ ಯೋಜನೆ, ಪಾಸ್‍ಪೋರ್ಟ್ ಕಚೇರಿ, ಇಸ್ರೋ ಕಾರ್ಖನೆಗಳನ್ನು ನೀಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಎ.ಕೃಷ್ಣಪ್ಪ ಅವರನ್ನು ಸೋಲಿಸಿರುವುದು ಜನರು ಮರೆತಿಲ್ಲ ಈ ಬಾರಿ ಎಚ್.ಡಿ.ದೇವೇಗೌಡರಿಗೆ ಮತದಾರರು ಬುದ್ಧಿ ಕಲಿಸಬೇಕು ಎಂದರು.

          ಶಿವಪ್ರಸಾದ್, ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ, ಯೋಗೀಶ್(ಜಿ.ಜೆ.ಆರ್), ಚಿಕ್ಕಣ್ಣ, ಜಿ.ಎಸ್.ಜ್ಯೋತಿನಾಗರಾಜು, ಎಂ.ಜಿ.ಶ್ರೀನಿವಾಸ್ ಮೂರ್ತಿ, ಬಾಪು ವಿನೋದಕುಮಾರ್, ನಾಗೇಂದ್ರ, ರುದ್ರೇಶ್, ಸುರೇಶ್, ನಾಗರಾಜ್, ಕೆ.ಎಸ್.ಪಾಂಡುರಂಗಾರೆಡ್ಡಿ, ಎಂ.ವಿ.ಮೂಡ್ಲಗಿರೀಶ್, ಕೆಂಚಮ್ಮಲಕ್ಷ್ಮೀನಾರಾಯಣ್, ಮತ್ತಿತರರು ಹಾಗೂ ಸಾವಿರಾರು ಕಾರ್ಯಕರ್ತರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link