ಹಿರಿಯೂರು :
ಈ ಆಧುನಿಕ ಭಾರತದ ಶ್ರೇಷ್ಠ ಚಿಂತರಲ್ಲಿ ಡಾ||ಅಂಬೇಡ್ಕರ್ ಬಹಳ ಪ್ರಮುಖಕರು ಅಷ್ಟೇ ಅಲ್ಲ ಅವರೊಬ್ಬ ಶ್ರೇಷ್ಠಬರಹಗಾರ ವಿದ್ವಾಂಸ ಹಾಗೂ ಸಂವಿದಾನ ತಜ್ಞ ಆಗಿದ್ದರಲ್ಲದೆ ಈ ದೇಶದ ಮಹಾನ್ ಮಾನವತಾವಾದಿ ಎಂಬುದಾಗಿ ವಾಣಿಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಧರಣೇಂದ್ರಯ್ಯ ಹೇಳಿದರು.
ನಗರದ, ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್‍ರವರ 128ನೇ ಹಾಗೂ ಮಾಜಿ ಉಪಪ್ರಧಾನಿ ಡಾ||ಬಾಬು ಜಗಜಿವನರಾಂ ರವರ 112ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಾಬಸಾಹೇಬ ಡಾ||ಬಿ.ಆರ್.ಅಂಬೇಡ್ಕರ್‍ರವರ ಜೀವನದ ಮೇಲೆ ಭಗವಾನ್ ಬುದ್ದ, ಬಸವ, ಹಾಗೂ ಕಬೀರರ ತೀವ್ರತರವಾದ ಪ್ರಭಾವವಿದ್ದು, ಈ ಸಮಾಜದಲ್ಲಿ ತುಳಿತಕ್ಕೆ ಒಳಗಾದವರ, ನೊಂದವರ, ಶೋಷಿತರ, ಜನಸಮುದಾಯದ ಧ್ವನಿಯಾಗಿದ್ದರು, ಇವರ ಆದರ್ಶಗಳನ್ನು ಇಂದಿನ ಯುವಜನತೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಡಾ.ಬಿ.ಎಂ.ಗುರುರಾಜ್ ಮಾತನಾಡಿ ಡಾ||ಬಾಬುಜಗಜೀವನರಾಂ ಹಾಗೂ ಡಾ||ಬಿ.ಆರ್. ಅಂಬೇಡ್ಕರ್‍ರವರು ಈ ದೇಶದ ದಲಿತರ ಎರಡು ಕಣ್ಣುಗಳು, ಆದರೆ ಒಮ್ಮೆ ಸಿಕ್ಕ ಅವಕಾಶದಲ್ಲಿ ಡಾ||ಬಾಬುಜಗಜೀವನರಾಂರವರನ್ನು ಈ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಿಕೊಳ್ಳುವಲ್ಲಿ ನಾವೆಲ್ಲಾ ವಿಫಲರಾದೆವು. ಈ ಇಬ್ಬರು ಮಹಾನ್ ವ್ಯಕ್ತಿಗಳು ದಲಿತರ ಸ್ವಾಭಿಮಾನಕ್ಕಾಗಿ, ದಲಿತರ ಉದ್ದಾರಕ್ಕಾಗಿ, ತಮ್ಮ ಇಡೀ ಜೀವನ ಪೂರ್ತಿ ಶ್ರಮಿಸಿದವರು ಎಂಬುದಾಗಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾ.ಪಂ.ಇ.ಒ.ರಾಮಕುಮಾರ್ ಮಾತನಾಡಿ, ಡಾ||ಬಿ.ಆರ್.ಅಂಬೇಡ್ಕರ್ ಹಾಗೂ ಡಾ||ಬಾಬು ಜಗಜೀವನರಾಂ ರವರಂತಹ ಮಹಾನ್ ವ್ಯಕ್ತಿಗಳನ್ನು ಯಾವುದೇ ಜಾತಿ, ಮತ ಕುಲಕ್ಕೆ ಸೀಮಿತಗೊಳಿಸಬಾರದು ಇಂತಹ ಮಹಾನ್ ವ್ಯಕ್ತಿಗಳು ಈ ದೇಶದ ಜನರ ಎಲ್ಲಾವರ್ಗಗಳ ಎಲ್ಲಾಸಮುದಾಯದವರ ಆಶಾಕಿರಣವಾಗಿದ್ದರು ಎಂದರು.
ವೇದಿಕೆಯಲ್ಲಿ ತಾ||ತಹಶೀಲ್ದಾರ್ ನಫೀಜಾಬೇಗಂ, ನಗರಸಭೆ ಆಯುಕ್ತ ಪ್ರೇಮ್ ಚಾಲ್ರ್ಸ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ನಟರಾಜ್, ಸಮಾಜಕಲ್ಯಾಣ ಅಧಿಕಾರಿ ಸುಮತಿ, ಉಪನ್ಯಾಸಕರಾದ ಚಂದ್ರಯ್ಯ, ತಾ.ಪಂ.ಸದಸ್ಯ ಒಂಕಾರಪ್ಪ, ದಿವಾಕರ್‍ನಾಯಕ, ಚಂದ್ರಾನಾಯ್ಕ, ಮಾದಿಗದಂಡೋರಸಮಿತಿ ಗುರುಸ್ವಾಮಯ್ಯ, ದಲಿತಸೇನೆ ಮುಖಂಡರಾದ ಘಾಟ್‍ರವಿ, ಆಲೂರುಕಾಂತರಾಜ್, ಪತ್ರಕರ್ತ ಜಿ.ಎಲ್.ಮೂರ್ತಿ, ಪರಮೇಶ್ವರಪ್ಪಬಬ್ಬೂರು, ಬೋರನಕುಂಟೆ ಜೀವೇಶ್, ಹರ್ತಿಕೋಟೆ ದಯಾನಂದ್, ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
