ಶಿರಾ
ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜು ಮಾರ್ಚ್2019ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 99.29 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ 282 ವಿದ್ಯಾರ್ಥಿಗಳಲ್ಲಿ 147 ಅತ್ಯುತ್ತಮ ಶ್ರೇಣಿ, 126 ಪ್ರಥಮ ಶ್ರೇಣಿ ಹಾಗೂ 06 ದ್ವಿತೀಯ ಶ್ರೇಣಿ ಪಡೆದಿರುತ್ತಾರೆ. ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸ್ನೇಹಾ ಡಿ. 586 ಅಂಕಗಳೊಂದಿಗೆ ಶೇ 97.70 (ಗಣಿತ 100,ರಸಾಯನ ಶಾಸ್ತ್ರ 100) ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಕುಮಾರಿ ಶ್ರೀಲೇಖಾ ಎಂ. ಹೆಚ್., 97% (ಗಣಿತ 100), ಕುಮಾರಿ ಸಹನಾ ಎಂ. ಎಸ್. 97%(ಗಣಿತ 100, ರಸಾಯನ ಶಾಸ್ತ್ರ 100), ಧೀರಜ್ ಕುಮಾರ್ ವಿ. ಎಸ್., 96.8%(ಗಣಿತ 100, ರಸಾಯನ ಶಾಸ್ತ್ರ 100, ಗಣಕ ವಿಜ್ಞಾನ 100), ಮಹೇಶ್ ಎಂ. 96.5%, ಮೊಹಮ್ಮದ್ ಜೈದ್ ಸಿಕಂದರ್ 96.3%(ಭೌತಶಾಸ್ತ್ರ 100, ಗಣಕ ವಿಜ್ಞಾನ 100), ಹರ್ಷವಧರ್ನ್ ಎಂ 96.2%, ಕುಮಾರಿ ರಫಿûಯ ಬಾನು. 96%, ವರ್ಷಿಣಿ ಎನ್ ಎಸ್ 96%, ವಿನುತಾ ಕೆ. 96%, ರಂಗರಾಜು ಹೆಚ್. ಟಿ. 96%(ಗಣಿತ 100), ರಷ್ಟು ಫಲಿತಾಂಶ ಪಡೆದಿರುತ್ತಾರೆ. ವಿಷಯವಾರು ಕನ್ನಡ 203, ಆಂಗ್ಲಭಾಷೆ 164 , ಭೌತಶಾಸ್ತ್ರ 144, ರಸಾಯನ ಶಾಸ್ತ್ರ 177, ಗಣಿತ 170 , ಜೀವಶಾಸ್ತ್ರ 120 , ಗಣಕ ವಿಜ್ಞಾನ 15, ಅತ್ಯುತ್ತಮ ಶ್ರೇಣಿ ಫಲಿತಾಂಶದೊಂದಿಗೆ ಹಾಗೂ ವಿಷಯವಾರು 100ಕ್ಕೆ 100 ಅಂಕ, ಭೌತಶಾಸ್ತ್ರ -01, ರಸಾಯನಶಾಸ್ತ್ರ -08, ಗಣಿತ -19, ಜೀವಶಾಸ್ತ್ರ -01, ಗಣಕ ವಿಜ್ಞಾನ – 03 ಹಾಗೂ ಕನ್ನಡ 01 ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜು ಈ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವರ್ಗದವರನ್ನು ಸಂಸ್ಥೆಯ ಅಧ್ಯಕ್ಷರಾದ ಚಿದಾನಂದ್ ಎಂ. ಗೌಡ ಹಾಗೂ ಪ್ರಾಚಾರ್ಯರಾದ ಸುಬ್ರಹ್ಮಣ್ಯ ಡಿ. ಕೆ. ರವರು ಅಭಿನಂದಿಸಿ ಮುಂಬರುವ ನೀಟ್ ಹಾಗೂ ಸಿ.ಇ.ಟಿ. ಪರೀಕ್ಷೆಗಳಲ್ಲೂ ಮಕ್ಕಳು ಯಶಸ್ಸು ಕಾಣಲೆಂದು ಹಾರೈಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








