ತಾಲ್ಲೂಕು ಸ್ಪೀಫ್ ಸಮಿತಿಯಿಂದ ವಿವಿಧ ಹಂತಗಳಲ್ಲಿ ಮತದಾನ ಜಾಗೃತಿ

ಚಳ್ಳಕೆರೆ

      ಲೋಕಸಭೆ ಚುನಾವಣೆಗೆ ಮತದಾನ ನಡೆಯಲು ಇನ್ನು ಕೇವಲ 24 ಗಂಟೆಗಳು ಮಾತ್ರ ಬಾಕಿ ಇದ್ದು, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಇಲ್ಲಿನ ಚುನಾವಣಾ ಇಲಾಖೆಯ ಸಿಬ್ಬಂದಿ ವಿವಿಧ ಹಂತಗಳಲ್ಲಿ ಮತದಾನ ಜಾಗೃತಿಗೆ ಮುಂದಾಗಿದ್ದು, ಮಂಗಳವಾರ ವಾಹನಗಳಿಗೆ ಸ್ಟಿಕರ್ ಅಂಟಿಸುವುದರ ಜೊತೆಗೆ ಬಲೂನ್‍ಗಳನ್ನು ಹಾರಿ ಬಿಡುವ ಮೂಲಕ ಮತದಾನ ಜಾಗೃತಿ ನಡೆಸಿತು.

        ಸಹಾಯಕ ಚುನಾವಣಾಧಿಕಾರಿ ಎಸ್.ರಾಜಶೇಖರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ತಹಶೀಲ್ದಾರ್ ತುಷಾರ್ ಬಿ.ಹೊಸೂರ್, ಪೌರಾಯುಕ್ತ ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಸೆಕ್ಟರ್ ಅಧಿಕಾರಿಗಳಾದ ಮಾಲತಿ, ಸುಜಾತರೆಡ್ಡಿ, ವಿನಯ್, ಲೋಕೇಶ್, ನರೇಂದ್ರಬಾಬು, ರಾಜಪ್ಪ, ಮಂಜಪ್ಪ, ತಿಪ್ಪೇಸ್ವಾಮಿ ಮುಂತಾದವರು ಕ್ಷೇತ್ರದಲ್ಲಿ ಶೇ.100ರ ಮತದಾನ ಗುರಿ ಸಾಧನೆಗೆ ಜಾಗೃತಿ ಮೂಡಿಸಲು ಮುಂದಾಗಿದ್ಧಾರೆ.

        ಮಂಗಳವಾರ ಬೆಳ್ಳಂಬೆಳಗ್ಗೆ ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ಎಲ್ಲಾ ಅಧಿಕಾರಿಗಳು ಹಾಜರಿದ್ದು, ರಸ್ತೆಯಲ್ಲಿ ಓಡಾಡುವ ಎಲ್ಲಾ ಲಘು ವಾಹನಗಳಾದ ಆಟೋರಿಕ್ಷಾ, ಕಾರು, ಜೀಫ್, ಟಾಟಾ ಎಸಿ, ಮಿನಿ ಲಾರಿ ಮುಂತಾದ ವಾಹನಗಳಿಗೆ ಶೇ.100ರ ಮತದಾನ ಗುರಿ ತಲುಪಿಸಲು ನೆರವಾಗಿ ಎಂಬ ಸ್ಟಿಕರ್‍ನ್ನು ಅಂಟಿಸುವ ಮೂಲಕ ಜಾಗೃತಿ ಮೂಡಿಸಿದರು.

        ಮಂಗಳವಾರ ಮಧ್ಯಾಹ್ನ ಇಲ್ಲಿನ ನೆಹರೂ ವೃತ್ತದಲ್ಲಿ ಸುಮಾರು 100ಕ್ಕೂ ಹೆಚ್ಚು ಬಣ್ಣ, ಬಣ್ಣ ಬಲೂನ್‍ಗಳನ್ನು ಆಕಾಶಕ್ಕೆ ಹಾರಿ ಬಿಟ್ಟು ಅದರಲ್ಲಿ ಮತದಾನ ಜಾಗೃತಿಯನ್ನು ಮೂಡಿಸಿದರು. ಈ ಬಾರಿಯ ಲೋಕಸಭಾ ಚುನಾವಣೆಯ ಮತದಾನದ ಶೇಕಡವಾರನ್ನು ಹೆಚ್ಚಿಸಲು ತಾಲ್ಲೂಕು ಸ್ಪೀಫ್ ಸಮಿತಿ, ಚುನಾವಣಾಧಿಕಾರಿಗಳ ಮಾರ್ಗದರ್ಶದಲ್ಲಿ ಹಲವಾರು ಕಾರ್ಯಕ್ರಮವನ್ನು ಯಶಸ್ಸಿಯಾಗಿ ನಡೆಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link