ದಾವಣಗೆರೆ
2019 ರ ಲೋಕಸಭಾ ಚುನಾವಣೆಯ ಮತದಾನವು ಜಿಲ್ಲೆಯಲ್ಲಿ ಏ.23 ರಂದು ನಡೆಯಲಿದ್ದು ಇದಕ್ಕೆ ಪೂರ್ವಸಿದ್ದತೆಯಾಗಿ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಈಗಾಗಲೇ ಮೊದಲನೇ ಸುತ್ತಿನ ತರಬೇತಿ ನಡೆದಿದ್ದು, ಏ.16 ರಂದು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡನೇ ಸುತ್ತಿನ ತರಬೇತಿ ನಡೆಯಿತು.
ದಾವಣಗೆರೆ ದಕ್ಷಿಣ ಮತ್ತು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಧಿಕಾರಿ ಸಿಬ್ಬಂದಿಗಳಿಗೆ ನಗರದ ಸಿದ್ದಗಂಗಾ ಪ್ರೌಢಶಾಲೆಯಲ್ಲಿ, ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತರಬೇತಿಯನ್ನು ನಗರದ ತರಳಬಾಳು ಪ್ರೌಢಶಾಲೆಯಲ್ಲಿ, ಜಗಳೂರು ವಿಧಾನಸಭಾ ಕ್ಷೇತ್ರದ ತರಬೇತಿಯನ್ನು ಜಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ, ಹರಿಹರದ ವಿಧಾನಸಭಾ ಕ್ಷೇತ್ರದ ತರಬೇತಿಯನ್ನು ಹರಿಹರದ ಮರಿಯಾ ನಿವಾಸ ಸೂಲ್ಕ್ ಇಲ್ಲಿ, ಚನ್ನಗಿರಿ ವಿಧಾನಸಭಾ ಕ್ಷೇತ್ರದ ತರಬೇತಿಯನ್ನು ಶ್ರೀ ಶಿವಲಿಂಗೇಶ್ವರ ಫಸ್ಟ್ ಗ್ರೇಡ್ ಕಾಲೇಜ್, ಚನ್ನಗಿರಿ ಇಲ್ಲಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರದ ತರಬೇತಿಯನ್ನು ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತ್ರಿ ಕೈಗಾರಿಕ ತರಬೇತಿ ಕೇಂದ್ರ ಹೀರೆಕಲ್ಮಟ ಇಲ್ಲಿ ನಡೆಸಲಾಯಿತು.
ತರಬೇತಿಯಲ್ಲಿ ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಸೆಕ್ಟರ್ ಅಧಿಕಾರಿಗಳು, ಬಿಎಲ್‍ಓ, ಪಿಆರ್‍ಓ, ಆರ್‍ಓ ಹಾಗೂ ಇತರೆ ಚುನಾವಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
