ಹರಿಹರ:
ಜಿಲ್ಲೆಯಲ್ಲಿರುವ ದಲಿತ ಮುಖಂಡ ರೆಲ್ಲರೂ ತಾವು ನಿಜವಾದ ದಲಿತ ಪರವಾಗಿದ್ದರೆ ಎಲ್ಲರೂ ಸೇರಿ ಅಕ್ಕ ಮಾಯಾವತಿಯವರ ನೇತೃತ್ವದ ಬಹುಜನ ಸಮಾಜ ಪಕ್ಷವನ್ನು ಬೆಂಬಲಿಸಿ ಎಂದು ಹರಿಹರ ತಾಲ್ಲೂಕು ಬಿಎಸ್ಪಿ ಅಧ್ಯಕ್ಷ ಡಿ. ಹನುಮಂತಪ್ಪ ಕರೆ ಕೊಟ್ಟರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಾವಣಗೆರೆ ಲೋಕಸಭಾ ಚುನಾವಣಾ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಿ.ಎಚ್. ಸಿದ್ದಪ್ಪನವರ ಪರ ಮತ ಚಲಾಯಿಸಲು ದಲಿತ ನಾಯಕರುಗಳಿಗೆ ಮನವಿ ಮಾಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಬಹಳಷ್ಟು ಜನ ದಲಿತ ನಾಯಕರುಗಳದ್ದೆ ಅವರೆಲ್ಲರೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಿ. ಕೃಷ್ಣಪ್ಪನವರ ಅನುಯಾಯಿಗಳಾಗಿದ್ದಾರೆ, ಅವರುಗಳ ಆಶಯದಂತೆ ಅವರೆಲ್ಲರೂ ತಮ್ಮ ಸಮುದಾಯ ಮತ್ತು ಅಭಿಮಾನಿಗಳೆಲ್ಲ ರನ್ನು ಅಕ್ಕ ಮಾಯಾವತಿಯವರ ನೇತೃತ್ವದ ಬಿಎಸ್ಪಿ ಪಕ್ಷಕ್ಕೆ ಬೆಂಬಲಿಸುವಂತೆ ಕೋರಿಕೊಂಡರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಬಿಎಸ್ಪಿ ಪಕ್ಷದ ನಾಯಕರು ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಆದರೆ ನಮ್ಮ ತಾಲ್ಲೂಕಿನಲ್ಲಿ ಅಭ್ಯರ್ಥಿಯೊಬ್ಬರನ್ನು ಬಿಟ್ಟರೆ ಇತರೆ ಯಾವುದೇ ಜೆಡಿಎಸ್ ನಾಯಕರುಗಳಿಂದ ಸರಿಯಾದ ಸಹಕಾರ ನಮ್ಮ ಕಾರ್ಯಕರ್ತರಿಗೆ ದೊರೆಯಲಿಲ್ಲ ಮತ್ತು ಚುನಾವಣಾ ಪೂರ್ಣವಾಗಲಿ ನಂತರವಾಗಲಿ ಯಾವುದೇ ಚರ್ಚೆ,ವಿಮರ್ಶೆ ನಮ್ಮೊಂದಿಗೆ ಮಾಡಲಿಲ್ಲ.
ಕಾಂಗ್ರೆಸ್ ಪಕ್ಷದ ನಾಯಕರುಗಳು ಬಿಜೆಪಿಯು ಮನುವಾದಿ ಪಕ್ಷವಾಗಿದ್ದು ಅದು ಸಂವಿಧಾನ ಮತ್ತು ಮೀಸಲಾತಿ ವಿರೋಧಿ ಪಕ್ಷವಾಗಿದೆ ಅವರನ್ನು ಸೋಲಿಸಲು ಕಾಂಗ್ರೆಸ್ಸಿಗೆ ಮತ ಹಾಕಿರಿ ಎಂದು ಹೇಳುತ್ತಾರೆ ಆದರೆ ಕಾಂಗ್ರೆಸ್ ಪಕ್ಷವೂ ಸಹ ಪಕ್ಕಾ ಮನುವಾದಿ ಪಕ್ಷವಾಗಿದೆ ಎಂದು ಹೇಳಿದ ಅವರು ಸಂವಿಧಾನವನ್ನು ಸಂಪೂರ್ಣವಾಗಿ ಗೌರವಿಸುವ ಪಕ್ಷವಾದ ಬಿಎಸ್ಪಿ ಪಕ್ಷವನ್ನು ಬೆಂಬಲಿಸಿ ಎಂದು ಹೇಳಿದರು.
ಗೋಷ್ಠಿಯಲ್ಲಿದ್ದ ಬಿಎಸ್ಪಿ ತಾಲ್ಲೂಕು ಕಾರ್ಯ ದರ್ಶಿ ಎಸ್.ಕೇಶವ ಮಾತನಾಡಿ ಸ್ವಾಭಿಮಾನಿ ದಲಿತರು ಆ ಪಕ್ಷ,ಈ ಪಕ್ಷ ಎಂದು ಅಲ್ಲಿ,ಇಲ್ಲಿ ಹೋಗದೆ ತಮ್ಮ ಸ್ವಂತ ಮನೆಯಾದ ಬಿಎಸ್ಪಿ ಪಕ್ಷವನ್ನು ಬೆಂಬಲಿಸಿ ದಾವಣಗೆರೆ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಮತಗಳನ್ನು ಕೊಡಿಸುವಲ್ಲಿ ದಲಿತರಾದ ನಾವುಗಳೆಲ್ಲರೂ ನಿಷ್ಠೆಯಿಂದ ಕಾರ್ಯೋನ್ಮುಖರಾಗೋಣ ಎಂದರು.
ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ ರೂ 6000/- ಹಣ ಹಾಕಲಾಗುವುದು, ಈ ರೀತಿ ಇತರೆ ಭರವಸೆಗಳನ್ನು ನೀಡಿದರೆ, ಕಾಂಗ್ರೆಸ್ ಪಕ್ಷವು ಬಡವರಿಗೆ ತಿಂಗಳಿಗೆ ರೂ 6000/- ಜಮಾ ಮಾಡುವುದಾಗಿ ಪ್ರಚಾರ ನಡೆಸುತ್ತಿದೆ.
ಆದರೆ ಅಕ್ಕ ಮಾಯಾವತಿಯವರು ತಮ್ಮ ಬಿಎಸ್ಪಿ ಪಕ್ಷದ ಪ್ರಣಾಳಿಕೆಯಲ್ಲಿ ಬಡ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿರುತ್ತಾರೆ ಆದ್ದರಿಂದ ಬರೀ ಹಣ ಹಾಕುವ ಪಕ್ಷಕ್ಕಿಂತ ನೌಕರಿ ಕೊಡುವ ಪಕ್ಷ ದೊಡ್ಡದು ಎಂದು ಭಾವಿಸಿ ಎಲ್ಲರೂ ಬೆಂಬಲಿಸೋಣ ಎಂದು ಹೇಳಿದರು.ಗೋಷ್ಠಿಯಲ್ಲಿ ಬಿಎಸ್ಪಿ ತಾಲೂಕು ಉಪಾಧ್ಯಕ್ಷ ಎಂಆರ್ ಆನಂದ್ ಉಪಸ್ಥಿತರಿದ್ದರು.